ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕ್ರೀಡೆ

ಬಾಂಗ್ಲಾ ಮೇಲೆ ಹೆಚ್ಚಿದ ಒತ್ತಡ

Srinivasa Murthy VN
Updated On : 18 Mar 2013, 11:17 am

ಕೊಲಂಬೊ: ಲಂಕಾ ಹಾಗೂ ಬಾಂಗ್ಲಾ ವಿರುದ್ಧದ ಎರಡನೇ ಟೆಸ್ಟ್ ಕುತೂಹಲ ಘಟ್ಟಕ್ಕೆ ಬಂದು ನಿಂತಿದೆ. ಭಾನುವಾರ ದಿನದಾಟದಲ್ಲಿ ಬಾಂಗ್ಲಾ ದಾಳಿಗೆ ಕುಸಿದು, ನಂತರ, ಸಂಗಕ್ಕಾರ ಹಾಗೂ ಚಂಡಿಮಲ್ ಇಬ್ಬರ ಶತಕಗಳ ನೆರವಿನಿಂದ ಸೆಡ್ಡು ಹೊಡೆದಿದ್ದ ಲಂಕಾ, ಸೋಮವಾರ ತನ್ನ ಮೊದಲ ಇನಿಂಗ್ಸ್ನಲ್ಲಿ 346 ರನ್ಗೆ ಆಲೌಟ್ ಆಯಿತು.
ಒಟ್ಟು 106 ರನ್ಗಳ ಮುನ್ನಡೆ ಸಾಧಿಸಿದ್ದ ಲಂಕಾ ವಿರುದ್ಧ ದ್ವಿತೀಯ ಇನಿಂಗ್ಸ್ ಆರಂಭಿಸಿದ ಬಾಂಗ್ಲಾ, ಸೋಮವಾರ ದಿನಾಂತ್ಯಕ್ಕೆ 4 ವಿಕೆಟ್ಗೆ 158 ರನ್ ಗಳಿಸಿದೆ. ಇದೀಗ, ಲಂಕಾಕ್ಕಿಂತ ಕೇವಲ 52 ರನ್ ಮುನ್ನಡೆ ಸಾಧಿಸಿರುವ ಬಾಂಗ್ಲಾ, ಪಂದ್ಯದ 4ನೇ ದಿನವಾದ ಮಂಗಳವಾರ ದೊಡ್ಡ ಮೊತ್ತ ಪೇರಿಸಬೇಕಿದೆ. ಆದರೆ, ಈಗಾಗಲೇ 4 ವಿಕೆಟ್ ಕಳೆದುಕೊಂಡಿರುವ ಬಾಂಗ್ಲಾ ಇದನ್ನು ಹೇಗೆ ಸಾಧಿಸುತ್ತದೆಂಬುದನ್ನು ಕಾದು ನೋಡಬೇಕಿದೆ.
ಸಂಕ್ಷಿಪ್ತ ಸ್ಕೋರ್: ಬಾಂಗ್ಲಾದೇಶ ಪ್ರಥಮ ಇನಿಂಗ್ಸ್ 240; ಶ್ರೀಲಂಕಾ ಪ್ರಥಮ ಇನಿಂಗ್ಸ್ 346; ಸಂಗಕ್ಕಾರ 139, ಕುಲಸೇಕರ 22; ಬೌಲಿಂಗ್: ಸೊಹಾಗ್ 111/2, ರಬೀವುಲ್ 52/2; ಬಾಂಗ್ಲಾದೇಶ ದ್ವಿತೀಯ ಇನಿಂಗ್ಸ್ 158/4 (ಸೋಮವಾರ ದಿನಾಂತ್ಯಕ್ಕೆ), ತಮೀಮ್ ಇಕ್ಬಾಲ್ 59, ಜಹುರುಲ್ ಇಸ್ಲಾಂ 48; ಬೌಲಿಂಗ್: ಹೆರಾತ್ 45/3, ಎರಂಗಾ 17/1.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement