ಐಪಿಎಲ್ನಲ್ಲಿ ಭದ್ರತೆ ಬೇಕು: ಲಂಕಾ ಕ್ರಿಕೆಟಿಗರು
ತಮಿಳು ನಾಡಿನಲ್ಲಿ ಶ್ರೀಲಂಕಾ ವಿರೋಧಿ ಪ್ರತಿಭಟನೆಗೆಳು ಹೆಚ್ಚಾಗುತ್ತಿರುವ ಹಿನ್ನಲೆಯಲ್ಲಿ ಶ್ರೀಲಂಕಾ ಕ್ರಿಕೆಟ್ ಆಟಗಾರರ ಸಂಸ್ಥೆಯು ಅಂತಾರಾಷ್ಟ್ರೀಯ ಕ್ರಿಕೆಟ್ ಆಟಗಾರರ ಸಂಸ್ಥೆಗೆ ಪತ್ರ ಬರೆದಿದ್ದು, ಐಪಿಎಲ್ ವೇಳೆ ಲಂಕಾ ಆಟಗಾರರಿಗೆ ನೀಡಲಾಗಿರುವ ಭದ್ರತೆ ಬಗ್ಗೆ ಪರಿಶೀಲನೆ ನಡೆಸಲು ಮನವಿ ಸಲ್ಲಿಸಿದೆ.
13 ಶ್ರೀಲಂಕಾ ಆಟಗಾರರಲ್ಲಿ ಚೆನೈ ಸೂಪರ್ ಕಿಂಗ್ಸ್ ತಂಡದ ಪರ ಇಬ್ಬರು ಆಟಗಾರರಿದ್ದಾರೆ. ಪಂದ್ಯಾವಳಿಯ ಸಮಯದಲ್ಲಿ ಈ ಆಟಗಾರರಿಗೆ ತೊಂದರೆಯಾಗಬಹುದು ಎಂದು ಪತ್ರದಲ್ಲಿ ತಿಳಿಸಲಾಗಿದೆ.
ಐಪಿಎಲ್ನಲ್ಲಿ ಲಂಕಾ ಆಟಗಾರರು
ಚೆನೈ ಸೂಪರ್ ಕಿಂಗ್ಸ್: ಅಖಿಲ ಧನಂಜಯ, ಕುಲಸೇಖರ.
ಡೆಲ್ಲಿ ಡೇರ್ಡೆವಿಲ್ಸ್: ಮಹೇಲಾ ಜಯವರ್ಧನೆ, ಜೀವನ್ ಮೆಂಡೀಸ್.
ಪುಣೆ ವಾರಿಯರ್ಸ್: ಆ್ಯಂಜಲೊ ಮ್ಯಾಥ್ಯೂಸ್, ಅಜಂತಾ ಮೆಂಡೀಸ್.
ಆರ್ಸಿಬಿ: ತಿಲಕರತ್ನೆ ದಿಲ್ಷಾನ್, ಮುತ್ತಯ್ಯ ಮುರಳಿಧರನ್.
ಸನ್ರೈಸರ್ಸ್ ಹೈದರಾಬಾದ್: ತಿಸೆರಾ ಪೆರೇರಾ, ಕುಮಾರ್ ಸಂಗಕ್ಕಾರ.
ಕೊಲ್ಕತ್ತಾ ನೈಟ್ ರೈಡರ್ಸ್: ಸಚಿತ್ರ ಸೇನಾನಾಯಕೆ.
ಮುಂಬೈ ಇಂಡಿಯನ್ಸ್: ಲಸಿತ್ ಮಾಲಿಂಗಾ.
ರಾಜಸ್ಥಾನ್ ರಾಯಲ್ಸ್: ಕುಶಾಲ್ ಜನಿತ್ ಪೆರೇರಾ.
ಶುಕ್ಲಾ ಅಭಯ
ನವದೆಹಲಿ: ಮಹೇಲಾ ಜಯವರ್ಧನೆ ಹಾಗೂ ಕುಮಾರ್ ಸಂಗಕ್ಕಾರ ಸೇರಿದಂತೆ ಐಪಿಎಲ್ನಲ್ಲಿ ಭಾಗವಹಿಸಬೇಕಿದ್ದ 13 ಲಂಕಾ ಆಟಗಾರರು ಏ.3ರಿಂದ ಆರಂಭವಾಗಲಿರುವ ಐಪಿಎಲ್ 6ನೇ ಆವೃತ್ತಿಯಲ್ಲಿ ಭಾಗವಹಿಸಲಿದ್ದಾರೆ. ಈ ಆಟಗಾರರಿಗೆ ಯಾವುದೇ ತೊಂದರೆಯಾಗುವುದಿಲ್ಲ ಎಂದು ಐಪಿಎಲ್ ಅಧ್ಯಕ್ಷ ರಾಜೀವ್ ಶುಕ್ಲಾ ತಿಳಿಸಿದ್ದಾರೆ.
ತಮಿಳುನಾಡಿನಲ್ಲಿ ಶ್ರೀಲಂಕಾ ವಿರೋಧಿ ಪ್ರತಿಭಟನೆಗಳು ಹೆಚ್ಚಾಗುತ್ತಿರುವ ಹಿನ್ನಲೆಯಲ್ಲಿ ಐಪಿಎಲ್ನಲ್ಲಿ ಭಾಗವಹಿಸುವ ಶ್ರೀಲಂಕಾ ಆಟಗಾರರಿಗೆ ತೊಂದರೆಯಾಗಲಿದ್ದು, ಲಂಕಾ ಆಟಗಾರರನ್ನು ತಮಿಳುನಾಡಿನಿಂದ ದೂರ ಉಳಿಯುವಂತೆ ತಿಳಿಸಲಾಗಿದೆ ಎಂಬ ಮಾತನ್ನು ಬಿಸಿಸಿಐನ ಅಧಿಕಾರಿಗಳು ತಳ್ಳಿಹಾಕಿದ್ದಾರೆ.
ಈ ಕುರಿತು ಪ್ರತಿಕ್ರಿಯೆ ನೀಡಿರುವ ಐಪಿಎಲ್ ಅಧ್ಯಕ್ಷ ರಾಜೀವ್ ಶುಕ್ಲಾ, ಒಂದುವೇಳೆ ಪಂದ್ಯಾವಳಿಯ ಸಮಯದಲ್ಲಿ ಯಾವುದೇ ರೀತಿಯ ತೊಂದರೆಗಳು ಎದುರಾದರೆ ಆ ಸಮಯದಲ್ಲೇ ಬಗೆಹರಿಸಲಾಗುವುದು ಎಂದು ತಿಳಿಸಿದ್ದಾರೆ.
ಟಿಟಿ ಸಂಸ್ಥೆಗೆ ನೂತನ ಅಧ್ಯಕ್ಷ
ಲಖ್ನೋ: ನಿವೃತ್ತಿ ಐಎಎಸ್ ಅಧಿಕಾರಿ ಪ್ರಭಾತ್ ಸಿ. ಚತುರ್ವೇದಿ ಅವರು ಭಾರತೀಯ ಟೇಬಲ್ ಟೆನಿಸ್ ಫೆಡರೇಷನ್ನ ನೂತನ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ. ಅಧ್ಯಕ್ಷ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಅವರು ಜಯಗಳಿಸಿದರು. ಈ ಹಿಂದೆ ಫೆಡರೇಷನ್ನ ಅಧ್ಯಕ್ಷ ಸ್ಥಾನದಲ್ಲಿದ್ದ ಅಭಯ್ ಸಿಂಗ್ ಚೌಟಾಲ ಅವರು ಸತತ ಮೂರು ಬಾರಿಗೆ ಅಧ್ಯಕ್ಷರಾಗಿ ಆಯ್ಕೆಯಾಗಿದ್ದರು. ಅವರ ಅಧಿಕಾರಾವಧಿ ಇತ್ತೀಚೆಗೆ ಮುಕ್ತಾಯಗೊಂಡ ಹಿನ್ನೆಲೆಯಲ್ಲಿ ಚುನಾವಣೆ ನಡೆಸಲಾಗಿತ್ತು.
ಹೊಸದಾಗಿ ಆಯ್ಕೆಗೊಂಡಿರುವ ಚತುರ್ವೇದಿಯವರ ಅಧಿಕಾರಾವಧಿ ಒಟ್ಟು ನಾಲ್ಕು ವರ್ಷದ್ದಾಗಿದೆ. ಅವರೊಂದಿಗೆ, ಧನರಾಜ್ ಚೌಹಾನ್ ಅವರು ಸಂಸ್ಥೆ ಮಹಾ ಕಾರ್ಯದರ್ಶಿಯಾಗಿ, ಮಹಿಂದರ್ ಪಾಲ್ ಸಿಂಗ್ ಅವರು ಸಂಸ್ಥೆಯ ಖಜಾಂಚಿಯಾಗಿ ಆಯ್ಕೆಯಾಗಿದ್ದಾರೆ.