ಹೈದ್ರಾಬಾದ್ ಮಣಿಸಿದ ಗೋವಾ
ಭದ್ರಾವತಿ: ಭದ್ರಾವತಿಯ ವಿಐಎಸ್ಎಲ್ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಗೋವಾ ತಂಡವು ಹೈದರಾಬಾದ್ ವಿರುದ್ಧ 7 ರನ್ಗಳ ಅಂತರದಿಂದ ಜಯಗಳಿಸಿತು.
ಮೊದಲು ಬ್ಯಾಟ್ ಮಾಡಿದ ಗೋವಾ ತಂಡವು ನಿಗದಿತ 20 ಓವರ್ಗಳಲ್ಲಿ 9 ವಿಕೆಟ್ಗಳನ್ನು ಕಳೆದುಕೊಂಡು 141 ರನ್ ಗಳಿಸಿತು. ಗೋವಾ ತಂಡದ ಸ್ವಪ್ನಿಲ್ ಅಸ್ನೋಡ್ಕರ್ 35 ಎಸೆತಗಳಲ್ಲಿ 5 ಬೌಂಡರಿಗಳ ನೆರವಿನಿಂದ 36 ರನ್ಗಳನ್ನು ಗಳಿಸಿದರು.
ರೀಗನ್ ಪಿಂಟೋ 33 (24 ಎಸೆತ, 3 ಬೌಂಡರಿ, 1 ಸಿಕ್ಸರ್) ಮತ್ತು ರವಿಕಾಂತ್ ಶುಕ್ಲ 30 (29 ಎಸೆತ, 3 ಬೌಂಡರಿ, 1 ಸಿಕ್ಸರ್) ಸಹ ಉತ್ತಮ ಬ್ಯಾಟಿಂಗ್ ಪ್ರದರ್ಶನ ನೀಡಿದರು.
ಹೈದರಾಬಾದ್ ಪರವಾಗಿ ಸಿ.ವಿ. ಮಿಲಿಂದ್ ಮೂರು ವಿಕೆಟ್ ಪಡೆದರೆ ಪ್ರಣೀತ್ ಕುಮಾರ್ 2 ವಿಕೆಟ್ಗಳನ್ನು ಪಡೆದರು. 142 ರನ್ಗಳ ಗುರಿಯನ್ನು ಬೆನ್ನತ್ತಿದ ಹೈದರಾಬಾದ್ ತಂಡ 20 ಓವರುಗಳಲ್ಲಿ 9 ವಿಕೆಟ್ಗಳನ್ನು ಕಳೆದುಕೊಂಡು 134 ರನ್ಗಳನ್ನು ಗಳಿಸಿತು. ಹೈದರಾಬಾದ್ ತಂಡದ ರವಿತೇಜ 33 (37 ಎಸೆತ, 5 ಬೌಂಡರಿ) ಉತ್ತಮವಾಗಿ ಆಡಿದರು.
ಗೋವಾ ತಂಡದ ಎಡಗೈ ಸ್ಪಿನ್ನರ್ ದರ್ಶನ್ ಮಿಸಾಲ್ ಮೂರು ವಿಕೆಟ್ಗಳನ್ನು ಪಡೆದರೆ ಮಧ್ಯಮಗತಿಯ ಬೌಲರ್ ರಾಬಿನ್ ಡಿಸೋಜ ಎರಡು ವಿಕೆಟ್ಗಳನ್ನು ಪಡೆದರು.
ಈ ಪಂದ್ಯದಲ್ಲಿ ಗೋವಾ ತಂಡಕ್ಕೆ ನಾಲ್ಕು ಅಂಕಗಳು ಲಭಿಸಿವೆ.
ಸಂಕ್ಷಿಪ್ತ ಸ್ಕೋರ್
ಗೋವಾ: 141/9 (20 ಓವರ್)
ಆಸ್ನೋಡ್ಕರ್ 36 (35) ಬೌಲಿಂಗ್: ಮಿಲಿಂದ್ 21/3,
ಪ್ರಣೀತ್ ಕುಮಾರ್ 26/2
ಹೈದರಾಬಾದ್: 134/9 (20 ಓವರ್)
ರವಿತೇಜ 33 (37), ಅಹ್ಮದ್ 18 (7) ಬೌಲಿಂಗ್: ಮಿಸಲ್ 29/3, ಬಾಂಡೇಕರ್ 14/2