'ಡಾನ್ ಬ್ರಾಡ್ಮನ್ ನೆನಪಿಸಿದ ಧವನ್'
ನವದೆಹಲಿ: ಪದಾರ್ಪಣೆಯ ಪಂದ್ಯದಲ್ಲೇ ದಾಖಲೆಯ ಶತಕ ಸಿಡಿಸಿ ಎಲ್ಲರ ಗಮನ ಸೆಳೆದ ಭಾರತದ ಆರಂಭಿಕ ಆಟಗಾರ ಶಿಖರ್ ಧವನ್ಗೆ ಎಲ್ಲೆಡೆಯಿಂದ ಪ್ರಶಂಸೆ ದೊರಕುತ್ತಿದೆ. ಆಸ್ಟ್ರೇಲಿಯಾದ ಆರಂಭಿಕ ಆಟಗಾರ ಎಡ್ ಕೋವನ್ ಸಹ ಧವನ್ ಬ್ಯಾಟಿಂಗ್ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದು, ಮೊಹಾಲಿಯಲ್ಲಿ ಧವನ್ ಅವರ ಆಟ ಆಸೀಸ್ನ ಡಾನ್ ಬ್ರಾಡ್ಮನ್ ಅವರ ಆಟವನ್ನು ನೆನಪಿಸಿತು ಎಂದಿದ್ದಾರೆ.
ಧವನ್, ಕ್ರಿಕೆಟ್ನ ದಂತಕತೆ ಬ್ರಾಡ್ಮನ್ರಂತೆ ಬ್ಯಾಟಿಂಗ್ ನಡೆಸಿದ್ದು, ಇದುವರೆಗೂ ನಾನು ಕಂಡ ಅತ್ಯುತ್ತಮ ಅಂತಾರಾಷ್ಟ್ರೀಯ ಇನಿಂಗ್ಸ್ಗಳಲ್ಲಿ ಒಂದಾಗಿದೆ.
ಧವನ್ ತಮ್ಮ ಮೊದಲ ಪಂದ್ಯವನ್ನಾಡುತ್ತಿದ್ದು, ಪ್ರತಿ ಎಸೆತವನ್ನು ಅದರ ಮೌಲ್ಯಕ್ಕೆ ತಕ್ಕಂತೆ ಬ್ಯಾಟಿಂಗ್ ಮಾಡಿದರು. ಕಳಪೆ ಹೊಡೆತಗಳಿಗೆ ಮುಂದಾಗಲಿಲ್ಲ ಎಂದು ಕೋವನ್ ತಿಳಿಸಿದರು.