ಯುನೈಟೆಡ್ಗೆ ಮೊದಲ ಜಯ
ಬೆಂಗಳೂರು: ರಾಜ್ಯ ಫುಟ್ಬಾಲ್ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಐ- ಲೀಗ್ 2ನೇ ಡಿವಿಷನ್ ಸಿ ಗುಂಪಿನ ಪಂದ್ಯಾವಳಿಯಲ್ಲಿ ಭಾಗವಹಿಸಿರುವ ಸ್ಥಳೀಯ ತಂಡ ಸೌಥ್ ಯುನೈಟೆಡ್ ಅಂತೂ ಮೊದಲ ಜಯ ಕಂಡುಕೊಂಡಿದೆ.
ಬುಧವಾರ ನಡೆದ ಪಂದ್ಯದಲ್ಲಿ ಹಿಂದುಸ್ತಾನ್ ಎಫ್ಸಿ ತಂಡವನ್ನು 2-0 ಅಂತರದಿಂದ ಸೌಥ್ ಯುನೈಟೆಡ್ ಪರಾಭವಗೊಳಿಸಿತು.
ಪಂದ್ಯದ 37ನೇ ನಿಮಿಷದಲ್ಲಿ ವಿನೋದ್ ಕುಮಾರ್ ಮತ್ತು 90ನೇ ನಿಮಿಷದಲ್ಲಿ ಆ್ಯಮೋಸ್ ಸೌಥ್ ಯುನೈಟೆಡ್ ಪರ ಗೋಲು ದಾಖಲಿಸಿದರು.
ಆದರೆ, ಕಳಪೆ ಪ್ರದರ್ಶನ ತೋರಿದ ಹಿಂದುಸ್ತಾನ್ ಎಫ್ಸಿ ಪರ ಯಾವುದೇ ಆಟಗಾರ ಗೋಲು ದಾಖಲಿಸಿರಲಿಲ್ಲ.
ವಿದೇಶಿ ಆಟಗಾರರು ಇಲ್ಲದೆ ಐ-ಲೀಗ್ ಪಂದ್ಯಾವಳಿಯಲ್ಲಿ ಭಾಗವಹಿಸಿರುವ ಸೌಥ್ ಯುನೈಟೆಡ್ ತಂಡ ಜಯ ಸಾಧಿಸಿದ್ದು ತಂಡಕ್ಕೆ ಮತ್ತು ಅಭಿಮಾನಿಗಳಲ್ಲಿ ಜಯ ತಂದಿದೆ.
ಗುರುವಾರ ಕೋಲ್ಕತಾದ ಕಾಳಿಘಾಟ್ ಮತ್ತು ಮಿಜೋರಾಮ್ನ ಲೂನಾಜೂಮಲ್ ತಂಡಗಳ ನಡುವೆ ಮೊದಲ ಪಂದ್ಯ ನಡೆಯಲಿದೆ. ಇನ್ನು, ಕೇರಳದ ಈಗಲ್ ಮತ್ತು ಗೋವಾದ ಎನ್ಆರ್ಬಿ ವಾಸ್ಕೋ ತಂಡಗಳ ನಡುವೆ ಎರಡನೇ ಪಂದ್ಯ ನಡೆಯಲಿದೆ.