ಸಮಾಜ ಸೇವೆಯತ್ತ ಕೊಹ್ಲಿ ಗಮನ
ನವದೆಹಲಿ: ಸಮಾಜದಲ್ಲಿನ ಸೌಲಭ್ಯ ವಂಚಿತ ಮಕ್ಕಳ ಕಲ್ಯಾಣಕ್ಕಾಗಿ ಧರ್ಮಾರ್ಥ ಸಂಸ್ಥೆಯೊಂದನ್ನು ತಾವು ಸ್ಥಾಪಿಸುವುದಾಗಿ ಕ್ರಿಕೆಟಿಗ ವಿರಾಟ್ ಕೊಹ್ಲಿ ತಿಳಿಸಿದ್ದಾರೆ. ಸಂಸ್ಥೆಗೆ 'ವಿರಾಟ್ ಕೊಹ್ಲಿ ಫೌಂಡೇಶನ್' ಎಂದು ಹೆಸರಿಡುವುದಾಗಿ ಅವರು ತಿಳಿಸಿದ್ದಾರೆ.
ಬಾಲಿವುಡ್ ತಾರೆಗಳು ಹಾಗೂ ಕ್ರಿಕೆಟ್ ಆಟಗಾರರ ನಡುವೆ ಆಯೋಜಿಸಲಾಗಿದ್ದ ಫುಟ್ಬಾಲ್ ಪಂದ್ಯಾವಳಿಯನ್ನು ಬುಧವಾರ ಉದ್ಘಾಟಿಸಿದ ಅವರು, ಸುದ್ದಿಗಾರರೊಂದಿಗೆ ಮಾತನಾಡುತ್ತಾ ಈ ವಿಷಯ ತಿಳಿಸಿದರು.