ಆಸ್ಟ್ರೇಲಿಯಾಕ್ಕೆ ಸುಣ್ಣ
ಇದು ನಿಜಕ್ಕೂ ಇತಿಹಾಸವೇ ಸರಿ. ದೆಹಲಿಯ ಫಿರೋಜ್ ಶಾ ಕೋಟ್ಲಾ ಮೈದಾನದಲ್ಲಿ ...
ಇದು ನಿಜಕ್ಕೂ ಇತಿಹಾಸವೇ ಸರಿ. ದೆಹಲಿಯ ಫಿರೋಜ್ ಶಾ ಕೋಟ್ಲಾ ಮೈದಾನದಲ್ಲಿ ಆಸ್ಟ್ರೇಲಿಯಾ ವಿರುದ್ಧದ ಕೊನೆಯ ಟೆಸ್ಟ್ ಪಂದ್ಯವನ್ನು ಭಾರತ ಗೆದ್ದಿದೆ. ಇನ್ನೂ ಎರಡು ದಿನ ಉಳಿದಿರುವಾಗಲೇ ಧೋನಿ ಪಡೆ ಈ ಸಾಧನೆ ಮಾಡಿದೆ.
ಆಸ್ಟ್ರೇಲಿಯಾ 262 ಮತ್ತು 162
ಭಾರತ 272 ಮತ್ತು 158/4
ದಾಖಲೆಗಳು
81 ವರ್ಷಗಳ ಟೆಸ್ಟ್ ಇತಿಹಾಸದಲ್ಲಿ ಮೊದಲ ಬಾರಿಗೆ 4-0 ಅಂತರದಲ್ಲಿ ಸರಣಿ ಜಯ ಕಂಡ ಭಾರತ
43 ವರ್ಷಗಳ ನಂತರ, 4-0 ಪಂದ್ಯಗಳಿಂದ ಹೀನಾಯ ಸೋಲು ಕಂಡ ಆಸ್ಟ್ರೇಲಿಯಾ. ಆಫ್ರಿಕ ವಿರುದ್ಧ 1969-70ರಲ್ಲಿ ಸೋಲನುಭವಿಸಿತ್ತು
29 ನಾಲ್ಕು ಪಂದ್ಯಗಳ ಸರಣಿಯಲ್ಲಿ ಅತಿ ಹೆಚ್ಚು ವಿಕೆಟ್ ಪಡೆದ ಹಿರಿಮೆಗೆ ಪಾತ್ರರಾದ ಅಶ್ವಿನ್
ಯಾವುದು ಕಾರ್ಯತಂತ್ರ, ಯಾವುದು ರಕ್ಷಣಾತ್ಮಕ ತಂತ್ರ ಎನ್ನುವುದನ್ನು ನೀವೇ ಹೇಳಬೇಕು. ಆಕ್ರಮಣಕಾರಿ ಕ್ರಿಕೆಟ್ ಆಡುವ ಯುಗ ಅಂತ್ಯಗೊಂಡಿದೆ. ಬ್ಯಾಟ್ಸ್‌ಮನ್‌ಗಳ ಮನಸ್ಥಿತಿಯನ್ನು ಅರಿತು ಕಾರ್ಯತಂತ್ರ ಹೆಣೆಯಬೇಕು.
-ಮಹೇಂದ್ರ ಸಿಂಗ್ ಧೋನಿ
ಸರಣಿ ಗೆಲ್ಲುವ ಭರವಸೆಯೊಂದಿಗೆ ಇಲ್ಲಿಗೆ ಆಗಮಿಸಿದ್ದೆವು. ಆದರೆ, ತಕ್ಕ ಫಲಿತಾಂಶ ಕಾಣುವಲ್ಲಿ ಎಡವಿದೆವು. ನಾವು ಶ್ರೇಷ್ಠ ಪ್ರದರ್ಶನ ನೀಡಲಿಲ್ಲ. 4-0ದಿಂದ ಹೀನಾಯ ಸೋಲನುಭವಿಸಿರುವುದು ನಮಗೆ ಬೇಸರ ಮೂಡಿಸಿದೆ.
-ಶೇನ್ ವ್ಯಾಟ್ಸನ್