ಐಪಿಎಲ್ ಉದ್ಘಾಟನೆಗೆ ರಂಗು ತರಲಿರುವ ನಟಿ ಕತ್ರಿನಾ ಕೈಫ್, ಶಾರುಖ್
ನವದೆಹಲಿ: ಇಂಡಿಯನ್ ಪ್ರೀಮಿಯರ್ ಲೀಗ್ನ 6ನೇ ಆವೃತ್ತಿಯ ಉದ್ಘಾಟನಾ ಕಾರ್ಯಕ್ರಮದಲ್ಲಿ ಬಾಲಿವುಡ್ ಕಿಂಗ್ ಶಾರುಖ್ ಖಾನ್ ಮತ್ತು ಕತ್ರಿನ್ ಕೈಫ್ ಪ್ರದರ್ಶನ ನೀಡಲಿದ್ದಾರೆ. ಭಾರೀ ಜನಪ್ರಿಯ ಪಂದ್ಯಾವಳಿಯಾಗಿರುವ ಐಪಿಎಲ್ನ ಉದ್ಘಾಟನಾ ಕಾರ್ಯಕ್ರಮವನ್ನು ಅದ್ಧೂರಿಯಾಗಿ ನಡೆಸುವುದಾಗಿ ಸಂಘಟಕರು ಹೇಳಿದ್ದಾರೆ. ಬಾಲಿವುಡ್ ತಾರೆಗಳ ಪ್ರದರ್ಶನದೊಂದಿಗೆ, ಡ್ರಮ್ಮರ್ಗಳು, ಚೀನಾ ಆರ್ಕೆಸ್ಟ್ರಾ ಸೇರಿದಂತೆ ಏಪ್ರಿಲ್ 3ರಂದು ಕೋಲ್ಕತಾದ ಸಾಲ್ಟ್ ಲೇಕ್ ಸ್ಟೇಡಿಯಂನಲ್ಲಿ ಸಿಡಿಮದ್ದುಗಳ ಸಂಭ್ರಮ ಮೊಳಗಲಿದೆ. ಪಂದ್ಯಾವಳಿಯ ಉದ್ಘಾಟನಾ ಪಂದ್ಯ ಹಾಲಿ ಚಾಂಪಿಯನ್ ಕೋಲ್ಕತಾ ನೈಟ್ ರೈಡರ್ಸ್ ಮತ್ತು ಡೆಲ್ಲಿ ಡೇರ್ಡೆವಿಲ್ಸ್ ತಂಡಗಳ ನಡುವೆ ನಡೆಯಲಿದೆ. 2008ರಲ್ಲಿ ಆರಂಭವಾದ ಐಪಿಎಲ್ನ ಮೊದಲ ಆವೃತ್ತಿಯನ್ನು ರಾಜಸ್ಥಾನ ರಾಯಲ್ಸ್ ತಂಡ ಗೆದ್ದುಕೊಂಡಿತ್ತು. ನಂತರ 2009ರಲ್ಲಿ ದಕ್ಷಿಣ ಆಫ್ರಿಕಾದಲ್ಲಿ ನಡೆದ ಎರಡನೇ ಆವೃತ್ತಿಯಲ್ಲಿ ಡೆಕ್ಕನ್ ಚಾರ್ಜರ್ಸ್ ತಂಡ ಪ್ರಶಸ್ತಿ ಮುಡಿಗೇರಿಸಿಕೊಂಡಿತ್ತು. ನಂತರ 2010 ಮತ್ತು 2011ರಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಎರಡು ಬಾರಿ ಚಾಂಪಿಯನ್ ಪಟ್ಟ ತನ್ನದಾಗಿಸಿಕೊಂಡಿತ್ತು. 2012ರಲ್ಲಿ ಕೋಲ್ಕತಾ ನೈಟರ್ ರೈಡರ್ಸ್ ತಂಡ ಚಾಂಪಿಯನ್ ಆಗಿದೆ.
ಈಗ ಆರಂಭವಾಗಲಿರುವುದು 6ನೇ ಆವೃತ್ತಿಯಾಗಿದ್ದು, 7 ವಾರ ನಡೆಯಲಿರುವ ಪಂದ್ಯಾವಳಿಯಲ್ಲಿ 9 ತಂಡಗಳು 76 ಪಂದ್ಯಗಳಲ್ಲಿ ಹಣಾಹಣಿ ನಡೆಸಲಿವೆ.