ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕ್ರೀಡೆ

ಬೋಪಣ್ಣ, ಸಾನಿಯಾ ದ್ವಿತೀಯ ಸುತ್ತಿಗೆ

Srinivasa Murthy VN
Updated On : 25 Mar 2013, 12:05 pm

ಮಿಯಾಮಿ: ಭಾರತದ ಟೆನಿಸ್ ತಾರೆಗಳಾದ ರೋಹನ್ ಬೋಪಣ್ಣ ಮತ್ತು ಸಾನಿಯಾ ಮಿರ್ಜಾ ಎಟಿಪಿ ಮಿಯಾಮಿ ಮಾಸ್ಟರ್ಸ್ ಪಂದ್ಯಾವಳಿಯಲ್ಲಿ ಕ್ರಮವಾಗಿ ಪುರುಷರ ಮತ್ತು ಮಹಿಳೆಯರ ಡಬಲ್ಸ್ ವಿಭಾಗದಲ್ಲಿ ತಮ್ಮ ಜತೆಯಾಟಗಾರರೊಂದಿಗೆ ದ್ವಿತೀಯ ಸುತ್ತಿಗೆ ಪ್ರವೇಶಿಸಿದ್ದಾರೆ.
ಬೋಪಣ್ಣ ಮತ್ತು ಅಮೆರಿಕ ಜತೆಯಾಟಗಾರ ರಾಜೀವ್ ರಾಮ್ ಜೋಡಿ, ಮೊದಲ ಸುತ್ತಿನ ಪಂದ್ಯದಲ್ಲಿ ಎರಿಕ್ ಬುಟಾರಾಕ್ ಮತ್ತು ಪಾಲ್ ಹಾಲ್ಲೇ ಜೋಡಿಯನ್ನು 7-6 (8), 6-4 ನೇರ ಸೆಟ್‌ಗಳ ಅಂತರದಿಂದ ಪರಾಭವಗೊಳಿಸಿತು. ಮೊದಲ ಸೆಟ್‌ನ್ನು ಟೈ ಬ್ರೇಕರ್‌ನಲ್ಲಿ ಗೆದ್ದುಕೊಂಡ ಬೋಪಣ್ಣ- ರಾಮ್ ಜೋಡಿ, ದ್ವಿತೀಯ ಸೆಟ್‌ನಲ್ಲಿ ದೊರಕಿದ ಏಳು ಬ್ರೇಕ್ ಪಾಯಿಂಟ್‌ಗಳನ್ನು ಬಳಸಿಕೊಳ್ಳುವ ಮೂಲಕ ಸುಲಭ ಜಯ ಕಂಡುಕೊಂಡಿತು. ಬೋಪಣ್ಣ ಮತ್ತು ರಾಮ್ ಜೋಡಿ ದ್ವಿತೀಯ ಸುತ್ತಿನ ಪಂದ್ಯದಲ್ಲಿ ಮೆರಿನ್ ಸೀಲಿಕ್ ಮತ್ತು ಲೂಕಾಸ್ ಡ್ಲೌಹಿ ಜೋಡಿಯನ್ನು ಎದುರಿಸಲಿದೆ.
ಇನ್ನು ಮಹಿಳೆಯರ ವಿಭಾಗದಲ್ಲಿ ಏಳನೇ ಶ್ರೇಯಾಂಕ ಪಡೆದಿರುವ ಭಾರತದ ಸಾನಿಯಾ ಮಿರ್ಜಾ ಮತ್ತು ಆವರ ಜತೆಯಾಟಗಾರ್ತಿ ಬೆಥಾನಿ ಮಾಟೆಕ್ ಸ್ಯಾಂಡ್ಸ್ ಜೋಡಿ, ಮೊದಲ ಸುತ್ತಿನ ಪಂದ್ಯದಲ್ಲಿ ಇವಾ ಬಿರ್ನೆರೋವಾ ಮತ್ತು ವರ್ವರಾ ಲೆಪಚೆಕೋ ಜೋಡಿಯನ್ನು 7-5, 6-3 ನೇರ ಸೆಟ್‌ಗಳ ಅಂತರದಿಂದ ಪರಾಭವಗೊಳಿಸಿತು.
ಸಾನಿಯಾ- ಮಾಟೆಕ್ ಸ್ಯಾಂಡ್ಸ್ ಜೋಡಿ ಪಂದ್ಯದಲ್ಲಿ ದೊರಕಿದ 16 ಬ್ರೇಕ್ ಪಾಯಿಂಟ್‌ಗಳ ಪೈಕಿ 11ನ್ನು ಸದುಪಯೋಗಪಡಿಸಿಕೊಂಡಿತು.
ಸಾನಿಯಾ- ಮಾಟೆಕ್ ಜೋಡಿ ದ್ವಿತೀಯ ಸುತ್ತಿನಲ್ಲಿ ಜರ್ಮೈಲಾ ಗಾಡೋಸೋವಾ ಮತ್ತು ಸಬಿನೆ ಕೆಥರಿನಾ ಲಿಸಿಚಿಕಿ ಜೋಡಿಯನ್ನು ಎದುರಿಸಲಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement