ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕ್ರೀಡೆ

ಜಯದ ಜೋಶ್ನಲ್ಲಿ ಬೈಕೇರಿ ಸಂಭ್ರಮ

ಬುದ್ಧ್ ಇಂಟರ್ನ್ಯಾಷನಲ್ ಸರ್ಕ್ಯೂಟ್ನಲ್ಲಿ ಚಾಲನೆ ಮಾಡಿ ಖುಷಿಪಟ್ಟ ಕ್ರಿಕೆಟಿಗರು

Srinivasa Murthy VN
Updated On : 26 Mar 2013, 12:39 pm

ಗ್ರೇಟರ್ ನೋಯಿಡಾ: ಬಲಿಷ್ಠ ಆಸ್ಟ್ರೇಲಿಯಾ ವಿರುದ್ಧ ಅಮೋಗ ಜಯ ಸಾಧಿಸಿದ ಭಾರತ ತಂಡದ ನಾಯಕ ಮಹೇಂದ್ರ ಸಿಂಗ್ ಧೋನಿ ಸೇರಿದಂತೆ ತಂಡದ ಆರು ಆಟಗಾರರು, ದೇಶದ ಏಕೈಕ ಫಾರ್ಮುಲಾ ಒನ್ ಟ್ರ್ಯಾಕ್ ಬುದ್ಧ್ ಇಂಟರ್ನ್ಯಾಷನ್ ಸರ್ಕ್ಯೂಟ್ನಲ್ಲಿ (ಬಿಐಸಿ) ಕಾರು ಚಾಲನೆ ಮಾಡುವ ಮೂಲಕ ಗಮನ ಸೆಳೆದರು.
ಮಹೇಂದ್ರ ಸಿಂಗ್ ಧೋನಿ ಕಳೆದ ವರ್ಷ ಖರೀದಿಸಿರುವ ತಮ್ಮ “ ಎಕ್ಸ್123 ಹೆಲ್ಕಾಟ್ ’ ಬೈಕನ್ನು 5.14 ಕೀ. ಉದ್ದದ ಸರ್ಕ್ಯೂಟ್ನಲ್ಲಿ ಓಡಿಸಿದರು. ಧೋನಿ ತಮ್ಮಲ್ಲಿರುವ ಬೈಕ್ ಓಡಿಸುವ ಖಯಾಲೆಯಿಂದ ಖ್ಯಾತರಾಗಿದ್ದಾರೆ.
ಇನ್ನು 2011ರಲ್ಲಿ ನಡೆದ ಉದ್ಘಾಟನಾ ಇಂಡಿಯನ್ ಗ್ರಾನ್ ಪ್ರೀಗೆ ಧ್ವಜ ಹಿಡಿದಿದ್ದ ಬ್ಯಾಟಿಂಗ್ ದಿಗ್ಗಜ ಸಚಿನ್ ತೆಂಡೂಲ್ಕರ್ ಟ್ಯಾಕ್ಸಿ ಚಾಲನೆ ಮಾಡಿದರು. ಬಿಐಸಿ ಅಧಿಕಾರಿಗಳು ಸರ್ಕಿಟ್ ತುಂಬಾ ಸಚಿನ್ ಅವರೊಂದಿಗೇ ಇದ್ದರು.
ವೇಗಿ ಇಶಾಂತ್ ಶರ್ಮಾ ತಮ್ಮ ಆಡಿ ಆರ್ಎಕ್ಸ್5 ಕಾರನ್ನು ಸರ್ಕ್ಯೂಟ್ನಲ್ಲಿ ಓಡಿಸಿದರೆ, ಯುವ ಬ್ಯಾಟ್ಸ್ಮನ್ ವಿರಾಟ್ ಕೊಹ್ಲಿ ಸ್ಪೋರ್ಟ್ಸ್ ಕಾರೊಂದನ್ನು ಓಡಿಸುವುದರೊಂದಿಗೆ ಸಂಭ್ರಮಪಟ್ಟರು. ಸ್ಪಿನ್ನರ್ ಪ್ರಗ್ಯಾನ್ ಓಜಾ ಅವರು ಧೋನಿ ಬೈಕ್ ಮತ್ತು ಇಶಾಂತ್ ಶರ್ಮಾ ಕಾರನ್ನೂ ಓಡಿಸಿದರು. ಇನ್ನು ಅಜಿಂಕ್ಯ ರಹಾನೆ ಸಹ ವೇಗದ ಚಾಲನೆ ಮಾಡುವುದರಲ್ಲಿ ಹಿಂದೆ ಬೀಳಲಿಲ್ಲ.
ಇದೇ ಮೊದಲ ಬಾರಿಗೆ ಸರ್ಕ್ಯೂಟ್ಗೆ ಭೇಟಿ ನೀಡಿದ್ದ ಮಹೇಂದ್ರ ಸಿಂಗ್ ಧೋನಿ, ಇಲ್ಲಿಗೆ ಭೇಟಿ ನೀಡುವುದಕ್ಕೆ ವಿಳಂಬವಾಗಿದ್ದಕ್ಕೆ ಪಶ್ಚಾತಾಪಟ್ಟರು.
“ ಇದೊಂದು ಅದ್ಭುತ ಅನುಭವ. ನಾನು ಇಲ್ಲಿಗೆ ಕೊಂಚ ವಿಳಂಬವಾಗಿ ಭೇಟಿ ನೀಡಿದ್ದೇನೆ ಅನಿಸುತ್ತಿದೆ. ಸೂಪರ್ ಸ್ಪೋರ್ಟ್ಸ್ ಸೀರೀಸ್ ರೇಸ್ ಸಂದರ್ಭ ನಾನು ಇಲ್ಲಿಗೆ ಬಂದೇ ಬರುತ್ತೇನೆ. ಸರ್ಕ್ಯೂಟ್ನಲ್ಲಿ ಹೆಲ್ಕಾಟ್ ಬೈಕ್ನ್ನು ಓಡಿಸಿದ್ದು ಖುಷಿಕೊಟ್ಟಿತು. ಆದರೆ, ಮುಂದಿನ ಬಾರಿ ಬರುವಾಗ ಸ್ಪೋರ್ಟ್ಸ್ ಬೈಕ್ನ್ನು ತರುತ್ತೇನೆ ’ ಎಂದು ಧೋನಿ ಹೇಳಿದರು.
“ ಇದೊಂದು ಅದ್ಭುತ ಅನುಭವ. ಇಷ್ಟೊಂದು ವೇಗದಲ್ಲಿ ನಾನು ಯಾವತ್ತೂ ಚಾಲನೆ ಮಾಡಿರಲಿಲ್ಲ ’ ಎಂದು ಚಾಲನೆ ನಂತರ ವಿರಾಟ್ ಕೊಹ್ಲಿ ಹೇಳಿಕೊಂಡರು.
ದೆಹಲಿಯ ಫಿರೋಜ್ ಶಾ ಕೋಟ್ಲಾ ಮೈದಾನದಲ್ಲಿ ನಡೆದ ನಾಲ್ಕನೇ ಮತ್ತು ಅಂತಿಮ ಪಂದ್ಯದಲ್ಲಿ 6 ವಿಕೆಟ್ ಅಂತರದಿಂದ ಜಯ ಸಾಧಿಸಿದ ಭಾರತ ತಂಡ, ಇದೇ ಮೊದಲ ಬಾರಿಗೆ ಆಸೀಸ್ ವಿರುದ್ಧ 4-0 ಅಂತರದಿಂದ ಕ್ಲೀನ್ ಸ್ವೀಪ್ ಜಯ ಸಾಧಿಸಿತ್ತು. ಇದು ಟೆಸ್ಟ್ ಕ್ರಿಕೆಟ್ನಲ್ಲಿ ಭಾರತ ತಂಡದ ಹೊಸ ಮೈಲುಗಲ್ಲು ಹೌದು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement