ಜೊಕೊ ವಿರುದ್ಧ ಸೋಮ್ ಸೋಲು
ಮಿಯಾಮಿ: ಭಾರತದ ಸಿಂಗಲ್ಸ್ ಟೆನಿಸ್ ತಾರೆ ಸೋಮ್ದೇವ್ ದೇವ್ವರ್ಮನ್ ಮಿಯಾಮಿ ಮಾಸ್ಟರ್ಸ್ ಎಟಿಪಿ ಪಂದ್ಯಾವಳಿಯ ಪ್ರೀ ಕ್ವಾರ್ಟರ್ಫೈನಲ್ ಪಂದ್ಯದಲ್ಲಿ ವಿಶ್ವದ ನಂ.1 ಆಟಗಾರ ನೋವಾಕ್ ಜೊಕೊವಿಚ್ ವಿರುದ್ಧ ಸೋಲನುಭವಿಸಿದ್ದಾರೆ.
ಪಂದ್ಯದಲ್ಲಿ ಸೋಮ್ದೇವ್ ಹಾಲಿ ಚಾಂಪಿಯನ್ ಮತ್ತು ಅಗ್ರ ಶ್ರೇಯಾಂಕ ಪಡೆದಿರುವ ಜೊಕೊವಿಚ್ ವಿರುದ್ಧ 6-2, 6-4 ಸೆಟ್ಗಳ ಅಂತರದಿಂದ ಸೋಲನುಭವಿಸಿದರು.
ಮೊದಲ ಸೆಟ್ನಲ್ಲಿ ಸುಲಭವಾಗಿ ಕೈಚೆಲ್ಲಿದ ಸೋಮ್ದೇವ್ ದ್ವಿತೀಯ ಸೆಟ್ನಲ್ಲಿ ಕೊಂಚ ಪೈಪೋಟಿ ತೋರಿದರು. ಆದರೆ, ಬಲಿಷ್ಠ ಎದುರಾಳಿ ವಿರುದ್ಧ ಸೋಮ್ದೇವ್ ಆಟ ನಡೆಯಲಿಲ್ಲ.
ಪೇಸ್, ಭೂಪತಿಗೆ ಸೋಲು: ಡಬಲ್ಸ್ ವಿಭಾಗದಲ್ಲಿ ಭಾರತದ ಲಿಯಾಂಡರ್ ಪೇಸ್ ಮತ್ತು ಮಹೇಶ್ ಭೂಪತಿ ಕ್ರಮವಾಗಿ ತಮ್ಮ ಜತೆಯಾಟಗಾರರೊಂದಿಗೆ ಪರಾಭವ ಹೊಂದಿ ನಿರಾಸೆ ಮೂಡಿಸಿದ್ದಾರೆ.
3ನೇ ಶ್ರೇಯಾಂಕ ಪಡೆದಿದ್ದ ಭೂಪತಿ ಮತ್ತು ಕೆನಡಾದ ಡೇನಿಯಲ್ ನೆಸ್ಟೋರ್ ಜೋಡಿ ದ್ವಿತೀಯ ಸುತ್ತಿನಲ್ಲಿ ನಿಕೋಲಾಸ್ ಅಲ್ಮಾಗ್ರೋ ಮತ್ತು ಓಲ್ವಿರ್ ಮಾರಚ್ ಜೋಡಿ ವಿರುದ್ಧ 3-6, 3-6 ನೇರ ಸೆಟ್ಗಳ ಅಂತರದಿಂದ ಸೋಲನುಭವಿಸಿತು.
ಪೇಸ್ ಮತ್ತು ಫ್ರಾನ್ಸ್ನ ಮೈಕಲ್ ಲಾಡ್ರಾ ಜೋಡಿ ದ್ವಿತೀಯ ಸುತ್ತಿನಲ್ಲಿ ಬಲ್ಗೇರಿಯಾದ ಗ್ರಿಗೋರ್ ದಿಮಿತ್ರೋ ಡೆನ್ಮಾರ್ಕ್ ಫ್ರೆಡ್ರಿಕ್ ನೈಲ್ಸೆನ್ ವಿರುದ್ಧ 6-7 (6), 6-7 (4) ನೇರ ಸೆಟ್ಗಳ ಅಂತರದಿಂದ ಪರಾಭವ ಹೊಂದಿದರು.
ಇನ್ನು ರೋಹನ್ ಬೋಪಣ್ಣ ಮಾತ್ರ ಪಂದ್ಯಾವಳಿಯಲ್ಲಿ ಭಾರತದ ಏಕೈಕ ಭರವಸೆಯಾಗಿದ್ದಾರೆ. ಶ್ರೇಯಾಂಕ ಪಡೆದ ಭಾರತದ ಬೋಪಣ್ಣ ಮತ್ತು ಅಮೆರಿಕದ ರಾಜೀವ್ ರಾಮ್ ಜೋಡಿ ದ್ವಿತೀಯ ಸುತ್ತಿನಲ್ಲಿ 2ನೇ ಶ್ರೇಯಾಂಕ ಪಡೆದಿರುವ ಸ್ಪೇನ್ನ ಲೊಪೆಜ್ ಮಾರ್ಕ್ ಮತ್ತು ಗ್ರಾನೋಲ್ಲೆರ್ಸ್ ಮಾರ್ಸೆಲ್ ವಿರುದ್ಧ ಸೆಣಸಲಿದ್ದಾರೆ.