ಸನ್‌ರೈಸರ್ಸ್ ಸಹಾಯಕ ಕೋಚ್ ಆಗಿ ಹೆಲ್ಮಟ್
ಹೈದರಾಬಾದ್: ಆಸ್ಟ್ರೇಲಿಯಾದ ಸೈಮನ್ ಹೆಲ್ಮಟ್ ಅವರು ಐಪಿಎಲ್ ಫ್ರಾಂಚೈಸಿಯಾದ ಸನ್‌ರೈಸರ್ಸ್ ಹೈದರಾಬಾದ್ ತಂಡದ ಸಹಾಯಕ ಕೋಚ್ ಆಗಿ ನೇಮಕಗೊಂಡಿದ್ದಾರೆ. ಪ್ರಸಕ್ತ ವರ್ಷದ ಐಪಿಎಲ್ ಪಂದ್ಯಾವಳಿ ಏ. 3ರಿಂದ ಆರಂಭಗೊಳ್ಳಲಿದೆ.
ಸೈಮನ್ ಅವರ ನೇಮಕಾತಿ ಜೊತೆಯಲ್ಲೇ ಜೇಡ್ ರಾಬರ್ಟ್ಸ್, ಥಿಯೋ ಕಪಾಕೌಲಾಸ್ಕಿಸ್ ಹಾಗೂ ಸಂಕಪಾಣಿ ಅವರನ್ನು ಕ್ರಮವಾಗಿ ಟ್ರೈನರ್, ಫಿಸಿಯೋ ತೆರಪಿಸ್ಟ್ ಹಾಗೂ ತಂಡದ ವ್ಯವಸ್ಥಾಪಕರನ್ನಾಗಿ ನೇಮಿಸಲಾಗಿದೆ. ಆಸ್ಟ್ರೇಲಿಯಾ ದೇಶೀಯ ಕ್ರಿಕೆಟ್‌ನಲ್ಲಿ ಹೆಲ್ಮಟ್ ಅವರ ಉತ್ತಮ ತರಬೇತುದಾರರಾಗಿ ಹೆಸರು ಮಾಡಿದ್ದಾರೆ. ಅಲ್ಲಿ ನಡೆಯುವ ರಾಷ್ಟ್ರೀಯ ಮಟ್ಟದ ಟೂರ್ನಿಯಾದ ರಿಯೋಬಿ ಏಕದಿನ ಕಪ್‌ನಲ್ಲಿ ಭಾಗವಹಿಸುತ್ತಿದ್ದ ವಿಕ್ಟೋರಿಯಾ ಬಷ್ರಾಂಜರ್ಸ್ ತಂಡಕ್ಕೆ ಕೋಚ್ ಆಗಿ ಅವರು ಕಾರ್ಯನಿರ್ವಹಿಸಿದ್ದಾರೆ. ಅಲ್ಲದೇ, ಬಿಗ್‌ಬ್ಯಾಷ್ ಪಂದ್ಯಾವಳಿಯಲ್ಲಿ ಭಾಗವಹಿಸುವ ಮೆಲ್ಬರ್ನ್ ರಿನೆಗೇಡ್ಸ್ ತಂಡಕ್ಕೂ ಅವರು ಕೋಚ್ ಆಗಿ ಕಾರ್ಯನಿರ್ವಹಿಸಿದ್ದಾರೆ. ಇದಕ್ಕೂ ಮೊದಲು ಅವರು ಆಸ್ಟ್ರೇಲಿಯಾ 'ಎ' ತಂಡಕ್ಕೂ ಕೋಚ್ ಆಗಿ ಕಾರ್ಯ ನಿರ್ವಹಿಸಿದ್ದರು. ಸನ್ ರೈಸರ್ಸ್‌ಗೆ ಟಾಮ್ ಮೂಡಿ ಅವರು ಪ್ರಧಾನ ಕೋಚ್ ಆಗಿದ್ದಾರೆ. ಮಾಜಿ ಕ್ರಿಕೆಟಿಗರಾದ ಶ್ರೀಕಾಂತ್, ವಿವಿಎಸ್ ಲಕ್ಷ್ಮಣ್ ತಂಡದ ಮಾರ್ಗದರ್ಶಕರಾಗಿದ್ದಾರೆ.