ಡ್ರಾ ಸಾಧಿಸಿದ ಸೌತ್ ಯುನೈಟೆಡ್
ಬೆಂಗಳೂರು: ಆಕರ್ಷಕ ಪ್ರದರ್ಶನ ನೀಡಿದ ಸ್ಥಳೀಯ ಸೌತ್ ಯುನೈಟೆಡ್ ತಂಡ ರಾಜ್ಯ ಫುಟ್ಬಾಲ್ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಐ- ಲೀಗ್ ಎರಡನೇ ಡಿವಿಷನ್ ಪಂದ್ಯಾವಳಿಯಲ್ಲಿ ಮಂಗಳವಾರ ಮತ್ತೊಂದು ಸಮಾಧಾನಕರ ಫಲಿತಾಂಶ ಕಂಡಿದೆ.
ಆರಂಭದಲ್ಲಿ ಸತತ ಸೋಲನುಭವಿಸುವ ಮೂಲಕ ನಂತರ ಎರಡು ಪಂದ್ಯಗಳಲ್ಲಿ ಕಂಡಿದ್ದ ಸೌತ್ ಯುನೈಟೆಡ್ ಮಂಗಳವಾರ ಕೋಲ್ಕತಾದ ಕಾಳಿಘಾಟ್ ತಂಡದ ವಿರುದ್ಧ 2-2 ಗೋಲುಗಳಿಂದ ಡ್ರಾ ಸಾಧಿಸಿತು. ಪಂದ್ಯದ 45ನೇ ನಿಮಿಷದಲ್ಲಿ ಆಮೋಸ್, 59ನೇ ನಿಮಿಷದಲ್ಲಿ ವಿಘ್ನೇಶ್ ಸೌತ್ ಯುನೈಟೆಡ್ ತಂಡದ ಪರ ಗೋಲು ದಾಖಲಿಸಿದರು. ಇನ್ನು ದಿನದ ಎರಡನೇ ಪಂದ್ಯದಲ್ಲಿ ಲೂನಾಂಗ್ಮಲ್ ತಂಡ ಗೋವಾದ ಎನ್ಆರ್ಬಿ ವಾಸ್ಕೋ ವಿರುದ್ಧ 0-2 ಗೋಲುಗಳ ಅಂತರದಿಂದ ಸೋಲನುಭವಿಸಿತು. ವಾಸ್ಕೋ ತಂಡದ ಪಂದ್ಯದ 14ನೇ ನಿಮಿಷದಲ್ಲಿ ಮುರಳಿ ಜೋಸೆಫ್ ಮತ್ತು 85ನೇ ನಿಮಿಷದಲ್ಲಿ ಪೆನಾಲ್ಟಿ ಕಾರ್ನರ್ ಮೂಲಕ ಅದೇ ಮುರಳಿ ಅವರು ಮತ್ತೊಂದು ಗೋಲು ದಾಖಲಿಸಿದರು.
ಪಂದ್ಯಾವಳಿಯ ಅಂಕಪಟ್ಟಿಯಲ್ಲಿ ಅಗ್ರಸ್ಥಾನ ಪಡೆದ ಮುಂಬೈ ಟೈಗರ್ಸ್ ಫೈನಲ್ ರೌಂಡರ್ ರಾಬಿನ್ ಹಂತಕ್ಕೆ ಅರ್ಹತೆ ಪಡೆದುಕೊಂಡಿದೆ.
ಆಟಗಾರರ ಕೈಬಿಟ್ಟಿದ್ದಕ್ಕೆ ಆರ್ಥರ್ ಸಮರ್ಥನೆ
ಪರ್ತ್: ಭಾರತದ ವಿರುದ್ಧ ಮೂರನೇ ಟೆಸ್ಟ್ ಪಂದ್ಯಕ್ಕೆ ಆಸ್ಟ್ರೇಲಿಯಾದ ಕೆಲ ಪ್ರಮುಖ ಆಟಗಾರರನ್ನು ಕೈಬಿಟ್ಟದ್ದನ್ನು, ಆಸೀಸ್ ತಂಡದ ತರಬೇತುದಾರ ಮಿಕಿ ಆರ್ಥರ್ ಮಂಗಳವಾರ ಸಮರ್ಥಿಸಿಕೊಂಡಿದ್ದಾರೆ.
ವಿಶ್ವದ ನಂ.1 ಪಟ್ಟವನ್ನು ಮರಳಿ ಪಡೆಯಬೇಕಾದರೆ, ತಂಡದಲ್ಲಿ ಇಂತಹ ಶಿಸ್ತು ಕ್ರಮಕೈಗೊಳ್ಳುವುದು ಅಗತ್ಯವಾಗಿದೆ ಎಂದು ಆರ್ಥರ್ ಹೇಳಿದ್ದಾರೆ. ತಂಡದ ಉಪ ನಾಯಕರಾಗಿದ್ದ ಶೇನ್ ವ್ಯಾಟ್ಸನ್, ಜೇಮ್ಸ್ ಪ್ಯಾಟಿನ್ಸನ್, ಉಸ್ಮಾನ್ ಖವಾಜ್ ಹಾಗೂ ಮಿಚೆಲ್ ಜಾನ್ಸನ್ ಅವರನ್ನು ಕೈಬಿಟ್ಟು, ತಮ್ಮ ತಂಡದ ಸಾಮರ್ಥ್ಯವನ್ನು ಪರೀಕ್ಷಿಸಲು ತಂಡದ ನಾಯಕ ಮೈಕಲ್ ಕ್ಲಾರ್ಕ್ ಮತ್ತು ಆರ್ಥರ್ ಸೇರಿ ತೀರ್ಮಾನಿಸಿದ್ದರಂತೆ. 'ತಂಡಕ್ಕೆ ಬುನಾದಿ ಹಾಕಲು ಇದು ಸೂಕ್ತ ದಾರಿಯಾಗಿದೆ. ವಿಶ್ವ ರ್ಯಾಂಕಿಂಗ್ನಲ್ಲಿ ಸ್ಥಾನದಲ್ಲಿರುವ ತಂಡದಲ್ಲಿ ಇಂತಹ ಪ್ರಯೋಗಗಳನ್ನು ಮಾಡುವ ಅಗತ್ಯವಿದೆ. ಅಲ್ಲದೆ ರ್ಯಾಂಕಿಂಗ್ನಲ್ಲಿ 3ನೇ ಅಥವಾ ನಾಲ್ಕನೇ ಸ್ಥಾನದಲ್ಲಿರುವುದನ್ನು ನಾವು ಒಪ್ಪಿಕೊಳ್ಳುವುದಿಲ್ಲ. ನಂ.1 ಪಟ್ಟಕ್ಕೇರುವುದು ನಮ್ಮ ಗುರಿ' ಎಂದಿದ್ದಾರೆ ಆರ್ಥರ್.