ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕ್ರೀಡೆ

ಮತ್ತೆ ನಂಬರ್‌ಒನ್ ಪಟ್ಟಕ್ಕೇರಿದ ವುಡ್ಸ್

ಖ್ಯಾತ ಗಾಲ್ಫ್ ಆಟಗಾರ ಟೈಗರ್ ವುಡ್ಸ್ ವಿಶ್ವ ಗಾಲ್ಫ್ ರ್ಯಾಂಕಿಂಗ್‌ನಲ್ಲಿ ನಂಬರ್‌ಒನ್.

Srinivasa Murthy VN
Updated On : 27 Mar 2013, 10:35 am

ಓರ್ಲಾಂಡೊ (ಫ್ಲೋರಿಡಾ): ಖ್ಯಾತ ಗಾಲ್ಫ್ ಆಟಗಾರ ಟೈಗರ್ ವುಡ್ಸ್ ಅವರು ಅರ್ನಾಲ್ಡ್ ಪಾಮರ್ ಆಹ್ವಾನಿತ ಗಾಲ್ಫ್ ಟೂರ್ನಿಯನ್ನು ಮಂಗಳವಾರ ಗೆದ್ದುಕೊಂಡಿದ್ದಾರೆ. ಎಂಟನೇ ಬಾರಿಗೆ ಈ ಪಂದ್ಯಾವಳಿ ಗೆದ್ದಿರುವ ಅವರು, ಈ ಮೂಲಕ ವಿಶ್ವ ಗಾಲ್ಫ್ ರ್ಯಾಂಕಿಂಗ್‌ನಲ್ಲಿ ನಂಬರ್‌ಒನ್ ಪಟ್ಟಕ್ಕೇರಿದ್ದಾರೆ.
ಉರುಳಿದ ಕಾಲಚಕ್ರ: ವಿಶ್ವ ಕಂಡ ಶ್ರೇಷ್ಠ ಆಟಗಾರರಲ್ಲೊಬ್ಬರಾದ ವುಡ್ಸ್ ಅವರು ಇತ್ತೀಚೆಗೆ ಲೈಂಗಿಕ ಹಗರಣಗಳಲ್ಲಿ ಸಿಲುಕಿಕೊಂಡು ಸಾರ್ವಜನಿಕ ಹಾಗೂ ವೃತ್ತಿಪರ ಜೀವನದಲ್ಲಿ ಹಿನ್ನಡೆ ಅನುಭವಿಸಿದ್ದರು. ಇದರಿಂದಾಗಿ, ವಿಶ್ವ ರ್ಯಾಂಕಿಂಗ್‌ನಲ್ಲಿ ನಂ. 1 ಪಟ್ಟದಲ್ಲಿದ್ದ ಅವರು 58ನೇ ಸ್ಥಾನಕ್ಕೆ ಜಾರುವಂತಾಗಿತ್ತು. ಹೀಗೆ, ಟಾಪ್ 50ರ ಪಟ್ಟಿಯಿಂದಲೂ ಆಚೆ ನಡೆದಿದ್ದ ಅವರು, ಆನಂತರದ ಗಾಯದ ಸಮಸ್ಯೆಯಿಂದಾಗಿಯೂ ವೃತ್ತಿಪರ ಜೀವನದಲ್ಲಿ ಮತ್ತಷ್ಟು ಹಿನ್ನಡೆ ಅನುಭವಿಸಿದ್ದರು. ಆಗೆಲ್ಲಾ, ವುಡ್ಸ್ ಜೀವನ ಅಲ್ಲಿಗೇ ಮುಗಿಯಿತು ಎಂದು ಆಡಿಕೊಂಡವರೂ ಇದ್ದರು. ಆದರೆ, ಟೈಗರ್ ವುಡ್ಸ್ ಬಹುದಿನಗಳ ನಂತರ, ಅಜ್ಞಾತವಾಸದಿಂದ ಹೊರಬಂದರು. ಮತ್ತೆ ಗಾಲ್ಫ್ ಮೈದಾನದಲ್ಲಿ ತಮ್ಮ ಕೈಚಳಕ ತೋರಿಸಿದರು. ಸತತ ಪರಿಶ್ರಮದಿಂದ ತಾವು ಕಳೆದುಕೊಂಡಿದ್ದ ಸ್ಥಾನವನ್ನು ಮತ್ತೆ ಪಡೆದಿದ್ದಾರೆ. ವಿಶ್ವದ ಅಗ್ರ ಗಾಲ್ಫ್ ಆಟಗಾರನಾಗಿ ಹೊರಹೊಮ್ಮಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement