ಐ- ಲೀಗ್: ಮುಂಬೈಗೆ ಜಯ
ಬೆಂಗಳೂರು: ನಗರದ ರಾಜ್ಯ ಫುಟ್ಬಾಲ್ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಐ-ಲೀಗ್ 2ನೇ ಡಿವಿಷನ್ ಪಂದ್ಯಾವಳಿಯ ಅಂತಿಮ ಸುತ್ತಿನ ಮೊದಲ ಹಂತದ ಪಂದ್ಯದಲ್ಲಿ ಮುಂಬೈ ಟೈಗರ್ಸ್ ತಂಡವು ಲ್ಯಾಂಗ್‌ಸಿಂಗ್ ತಂಡದ ವಿರುದ್ಧ 1-0 ಗೋಲುಗಳ ಅಂತರದಲ್ಲಿ ಜಯ ಸಾಧಿಸಿದೆ.
ಮುಂಬೈ ತಂಡದ ಪರ ಉತ್ತಮ ಪ್ರದರ್ಶನ ನೀಡಿದ ಸುನಿಲ್‌ಕುಮಾರ್ 45ನೇ ನಿಮಿಷದಲ್ಲಿ ದೊರೆತ ಪೆನಾಲ್ಟಿ ಕಾರ್ನರ್ ಅವಕಾಶವನ್ನು ಉಪಯೋಗಿಸಿಕೊಂಡು ಗೋಲು ದಾಖಲಿಸಿದರು. ಆದರೆ ಲ್ಯಾಂಗ್‌ಸಿಂಗ್ ತಂಡದ ಪರ ಯಾವುದೇ ಆಟಗಾರ ಗೋಲು ದಾಖಲಿಸದೆ ಮುಂಬೈ ಟೈಗರ್ಸ್ ತಂಡಕ್ಕೆ ತಲೆಬಾಗಿತು.
ಶನಿವಾರ ನಡೆದ ಮೊದಲ ಪಂದ್ಯದಲ್ಲಿ ಸದರ್ನ್ ಸಮಿತಿಯು ರಾಂಡಜೆಡ್ ಯುನೈಟೆಡ್ ತಂಡದ ವಿರುದ್ಧ 1-1 ಗೋಲುಗಳ ಮೂಲಕ ಡ್ರಾ ಸಾಧಿಸಿತು. ಪಂದ್ಯದ 30ನೇ ನಿಮಿಷದಲ್ಲಿ ರಾಂಡಜೆಡ್ ಯುನೈಟೆಡ್ ತಂಡದ ಪರ ಬಾಬಾ ತುಂಡೆ ಗೋಲು ದಾಖಲಿಸುವ ಮೂಲಕ ತಂಡಕ್ಕೆ ಮುನ್ನಡೆ ತಂದುಕೊಟ್ಟರು. ಆದರೆ 51ನೇ ನಿಮಿಷದಲ್ಲಿ ಸದರ್ನ್ ಸಮಿತಿ ತಂಡದ ಪರ ಗೋಲು ದಾಖಲಿಸಿದ ಇಮ್ರಾನ್ ಖಾನ್ ತಂಡದ ಅಂತರವನ್ನು 1-1 ಗೋಲುಗಳ ಸಮಬಲ ಸಾಧಿಸಿದರು.
ಭಾನುವಾರ ಕೇವಲ ಒಂದು ಪಂದ್ಯ ನಡೆಯಲಿದ್ದು, ಎಮ್ತಾ ಮಹಮ್ಮೆದನ್ ತಂಡವು ಭವನಿಪೊರೆ ತಂಡದ ವಿರುದ್ಧ ಸೆಣೆಸಲಿದೆ.