ಐಪಿಎಲ್: ಕೊಲ್ಕತ್ತಾದಲ್ಲಿ ಭೂರಿ ಭೋಜನ
ಕೊಲ್ಕತ್ತಾ: ವಿಶೇಷ ರುಚಿಕರ ತಿಂಡಿಗಳಿಗೆ ಖ್ಯಾತಿಗಳಿಸಿರುವ ಕೊಲ್ಕತ್ತಾ ಈ ಬಾರಿಯ ಐಪಿಎಲ್ ಪಂದ್ಯಾವಳಿಗಾಗಿ ಭರ್ಜರಿ ಸಿದ್ಧತೆ ನಡೆಸಿದೆ. ಐಪಿಎಲ್ 6ನೇ ಆವೃತ್ತಿ ವೇಳೆ ಕ್ರಿಕೆಟ್ ಅಭಿಮಾನಿಗಳಿಗೆ ಬಗೆಬಗೆಯ ತಿಂಡಿಗಳನ್ನು ನೀಡಲು ಇಲ್ಲಿನ ಹೋಟೆಲ್ ಹಾಗೂ ರೆಸ್ಟೊರೆಂಟ್ಗಳು ನಿರ್ಧರಿಸಿವೆ.
ಈ ಬಾರಿ ಸಸ್ಯಹಾರ ಹಾಗೂ ಮಾಂಸಹಾರಗಳಲ್ಲಿ ವಿವಿಧ ಬಗೆಯ ಖಾದ್ಯಗಳನ್ನು ಅಭಿಮಾನಿಗಳಿಗೆ ನೀಡಲು ನಿರ್ಧರಿಸಿರುವ ಹೋಟೆಲ್ ಹಾಗೂ ರೆಸ್ಟೊರೆಂಟ್ಗಳು ವಿವಿಧ ರುಚಿಕರ ಕಬಾಬ್ ಹಾಗೂ ತಂದೂರಿ ತಿನಿಸುಗಳಿಗೆ ಹೆಚ್ಚು ಆದ್ಯತೆ ನೀಡಿವೆ. ಈ ಬಾರಿ ಅಭಿಮಾನಿಗಳು ಐಪಿಎಲ್ನ ರೋಚಕ ಪಂದ್ಯಗಳ ಜತೆಗೆ ಇಲ್ಲಿನ ವಿಶೇಷ ಖಾದ್ಯಗಳೊಂದಿಗೆ ಉತ್ತಮ ಕ್ಷಣಗಳನ್ನು ಆಸ್ವಾದಿಸಬಹುದಾಗಿದೆ ಎಂದು ಯುವ ಉದ್ಯಮಿ ರಾತುಲ್ ಗಂಗೂಲಿ ತಿಳಿಸಿದ್ದಾರೆ.