ನಿವೃತ್ತಿ ನಿರ್ಧಾರ ಸಚಿನ್ಗೆ ಬಿಡಬೇಕು: ರಾಜೀವ್ ಶುಕ್ಲಾ
ನವದೆಹಲಿ: ಭಾರತೀಯ ಕ್ರಿಕೆಟ್ಗೆ ಸಚಿನ್ ತೆಂಡೂಲ್ಕರ್ ಅವರು ನೀಡಿರುವ ಅಪಾರ ಕೊಡುಗೆಗಾಗಿ ಸಚಿನ್ ಅವರು ನಿವೃತ್ತಿ ಪಡೆಯಲು ಬಯಸಿದಾಗ ತಮ್ಮ ನಿರ್ಧಾರ ತೆಗೆದುಕೊಳ್ಳುವ ಅವಕಾಶ ನೀಡಬೇಕು ಎಂದು ಬಿಸಿಸಿಐನ ಹಿರಿಯ ಅಧಿಕಾರಿ ರಾಜೀವ್ ಶುಕ್ಲಾ ಅಭಿಪ್ರಾಯ ಪಟ್ಟಿದ್ದಾರೆ.
ಸಚಿನ್ ಭಾರತೀಯ ಕ್ರಿಕೆಟ್ಗೆ ಅಪಾರ ಕೊಡುಗೆ ನೀಡಿದ್ದಾರೆ. ಅಲ್ಲದೇ ತಂಡದಲ್ಲಿ ಒಂದು ಸ್ಫೂರ್ತಿಯಾಗಿ ತಂಡವನ್ನು ಉತ್ತಮ ಮಾರ್ಗದಲ್ಲಿ ಮುನ್ನಡೆಸಿದ್ದಾರೆ. ಹಾಗಾಗಿ ಸಚಿನ್ ಅವರ ನಿವೃತ್ತಿ ಬಗ್ಗೆ ಯಾರು ಒತ್ತಡ ಹೇರಬಾರದು. ಸಚಿನ್ಗೆ ಕ್ರಿಕೆಟ್ನಿಂದ ನಿವೃತ್ತಿ ಪಡೆಯಬೇಕೆನಿಸಿದಾಗ ಅವರು ತಮ್ಮ ನಿರ್ಧಾರ ತೆಗೆದುಕೊಳ್ಳಲು ಬಿಡಬೇಕು ಎಂದು ತಿಳಿಸಿದರು.