ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕ್ರೀಡೆ

ಮಂಕಿಗೇಟ್ ಪ್ರಕರಣ ಪರಿಣಾಮ ಬೀರುವುದಿಲ್ಲ

Srinivasa Murthy VN
Updated On : 1 Apr 2013, 12:37 pm

ಮುಂಬೈ: 2008ರಲ್ಲಿ ಭಾರತ ತಂಡ ಆಸ್ಟ್ರೇಲಿಯಾ ಪ್ರವಾಸ ಮಾಡಿದ್ದಾಗ ಸಂಭವಿಸಿದ್ದ ಜನಾಂಗೀಯ ನಿಂದನೆಯ ಮಂಕಿಗೇಟ್ ಪ್ರಕರಣ ಈ ಬಾರಿಯ ಐಪಿಎಲ್ ವೇಳೆ ಮುಂಬೈ ಇಂಡಿಯನ್ಸ್ ತಂಡದ ಡ್ರೆಸಿಂಗ್ ರೂಮ್‌ನಲ್ಲಿ ಯಾವುದೇ ರೀತಿಯ ಪರಿಣಾಮ ಬೀರುವುದಿಲ್ಲ ಎಂದು ಮುಂಬೈ ಇಂಡಿಯನ್ಸ್ ತಂಡದ ನಾಯಕ ರಿಕಿ ಪಾಂಟಿಂಗ್ ತಿಳಿಸಿದ್ದಾರೆ.
ಆ ಪ್ರಕರಣದಲ್ಲಿ ಭಾಗಿಯಾಗಿದ್ದ ನಾಲ್ವರು ಪ್ರಮುಖ ಆಟಗಾರರಾದ ಹರ್ಭಜನ್ ಸಿಂಗ್, ಸಚಿನ್ ತೆಂಡೂಲ್ಕರ್, ರಿಕಿ ಪಾಂಟಿಂಗ್ ಈ ಬಾರಿ ಮುಂಬೈ ಇಂಡಿಯನ್ಸ್ ತಂಡದಲ್ಲಿದ್ದು, ಕಳೆದ ವರ್ಷ ಆ್ಯಂಡ್ರೂ ಸೈಮಡ್ಸ್ ಕೂಡ ಮುಂಬೈ ತಂಡದಲ್ಲಿದ್ದರು. ಅಲ್ಲದೇ ಆಗ ಭಾರತ ತಂಡದ ನಾಯಕರಾಗಿದ್ದ ಅನಿಲ್ ಕುಂಬ್ಳೆ ಈಗ ಮುಂಬೈ ತಂಡದ ತಾಂತ್ರಿಕ ಸಲಹೆಗಾರನಾಗಿದ್ದಾರೆ.
ಮುಂದಿನ ಎರಡು ತಿಂಗಳವರೆಗೂ ನಾವೆಲ್ಲರೂ ಉತ್ತಮ ಸ್ನೇಹಿತರು. ನಾನು ಈ ಬಗ್ಗೆ ಈಗಾಗಲೇ ತಂಡದ ಆಟಗಾರರಿಗೆ ಸ್ಪಷ್ಟನೆ ನೀಡಿದ್ದೇನೆ. ನಾನು ಸಚಿನ್ ಹಾಗೂ ಹರ್ಭಜನ್ ಅವರನ್ನು ಇನ್ನು ಭೇಟಿಯಾಗಿಲ್ಲ ಮುಂದಿನ ಕೆಲವು ದಿನಗಳಲ್ಲಿ ಭೇಟಿಯಾಗಲಿದ್ದೇನೆ. ಮುಂಬೈ ತಂಡದಲ್ಲಿರುವ ಎಲ್ಲಾ ಆಟಗಾರರು ಒಂದಾಗಿದ್ದೇವೆ ಎಂದು ಪಾಂಟಿಂಗ್ ತಿಳಿಸಿದರು. ನಾನು ಉತ್ತಮ ಪ್ರದರ್ಶನ ನೀಡಿ ತಂಡವನ್ನು ಚೆನ್ನಾಗಿ ಮುನ್ನಡೆಸಬೇಕು. ತಂಡದ ತಯಾರಿಗೆ ಬೇಕಾದ ಎಲ್ಲಾ ಪ್ರಯತ್ನಗಳನ್ನು ನಾವು ನಡೆಸಿದ್ದೇವೆ ಎಂದು ಪಾಂಟಿಂಗ್ ತಿಳಿಸಿದರು.
ನಾನು ಮತ್ತೇ ಐಪಿಎಲ್‌ಗೆ ಮರಳಿರುವುದರಿಂದ ಸಂತಸವಾಗಿದೆ. ನಾನು ಕಳೆದ ಬಾರಿ ಐಪಿಎಲ್ ಆಡಿದ್ದಾಗ ಮತ್ತೇ ಐಪಿಎಲ್‌ಗೆ ಮರಳುವ ಬಗ್ಗೆ ವಿಶ್ವಾಸ ವ್ಯಕ್ತಪಡಿಸಿದ್ದೆ. ನಾನು ಅಂತಾರಾಷ್ಟ್ರೀಯ ಕ್ರಿಕೆಟ್‌ನಿಂದ ನಿವೃತ್ತಿ ಪಡೆದೆ ನಂತರ ತಸ್ಮೇನಿಯಾ ತಂಡದಲ್ಲಿ ಪ್ರಸಕ್ತ ಋತುವನ್ನು ಪೂರ್ಣಗೊಳಿಸಿದ್ದು, ಮತ್ತೇ ಐಪಿಎಲ್‌ಗೆ ಮರಳಲು ಅವಕಾಶ ಮಾಡಿಕೊಟ್ಟಿತು.
ಹೆಚ್ಚಿನ ಅಂತಾರಾಷ್ಟ್ರೀಯ ವೇಳಾಪಟ್ಟಿಯ ಕಾರಣ ನಾನು ಐಪಿಎಲ್‌ನ 2ನೇ ಹಾಗೂ 3ನೇ ಆವೃತ್ತಿಯಲ್ಲಿ ಭಾಗವಹಿಸಲು ಸಾಧ್ಯವಾಗಿರಲಿಲ್ಲ. ನಾನು ಮುಂದಿನ ಎರಡು ತಿಂಗಳುಗಳ ಕಾಲ ಈ ಪಂದ್ಯಾವಳಿಯಲ್ಲಿ ಭಾಗವಹಿಸಲಿದ್ದು, ನಂತರ ಕೆಲ ದಿನಗಳ ವಿಶ್ರಾಂತಿ ನಂತರ ಕೆರಿಬಿಯನ್ ಪ್ರಿಮಿಯರ್ ಲೀಗ್‌ನಲ್ಲಿ ಭಾಗವಹಿಸಲಿದ್ದೇನೆ ಎಂದು ಹೇಳಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement