ಚೆಸ್: ವಿಶ್ವನಾಥನ್ ಆನಂದ್ಗೆ ಜಯ
ಸೊರ್ಹಿಡ್ಲ್: ವಿಶ್ವ ಚಾಂಪಿಯನ್ ವಿಶ್ವನಾಥನ್ ಆನಂದ್ ತಮ್ಮ ಉತ್ತಮ ಪ್ರದರ್ಶನವನ್ನು ಮುಂದುವರಿಸಿದ್ದು, ನಾರ್ವೆ ಸೂಪರ್ ಚೆಸ್ ಪಂದ್ಯಾವಳಿಯ 7ನೇ ಸುತ್ತಿನಲ್ಲಿ ಅಜರ್ಬಜೆನ್ನ ತೈಮೊರ್ ರಾಡ್ಜಬೊವ್ ವಿರುದ್ಧ ಜಯ ಸಾಧಿಸಿದ್ದಾರೆ. ಪಂದ್ಯಾವಳಿಯಲ್ಲಿ ಪ್ರಮುಖವಾಗಿದ್ದ ಪಂದ್ಯದಲ್ಲಿ ಆನಂದ್ ಉತ್ತಮ ಪ್ರದರ್ಶನ ನೀಡಿ ಜಯ ಸಾಧಿಸಿದ್ದಾರೆ. ಈ ಜಯದ ಮೂಲಕ ಪೂರ್ಣ ಅಂಕ ಪಡೆದ ಆನಂದ್, ಪಂದ್ಯಾವಳಿಯಲ್ಲಿ 4 ಅಂಕಗಳನ್ನು ಪಡೆಯುವ ಮೂಲಕ ಜಂಟಿ 3ನೇ ಸ್ಥಾನದಲ್ಲಿದ್ದಾರೆ. ಇನ್ನು 7ನೇ ಸುತ್ತಿನ ಉಳಿದ ಪಂದ್ಯದಲ್ಲಿ ಜಾನ್ ಹ್ಯಾಮ್ಮರ್ ತಮ್ಮ ಎದುರಾಳಿ ಮ್ಯಾಗ್ನಸ್ ಕಾರ್ಲ್ಸೆನ್ ವಿರುದ್ಧ ಸೋಲನುಭವಿಸಿದ್ದಾರೆ. ಸೆರ್ಗೆ ಕರ್ಜಕಿನ್ ತಮ್ಮ ಪ್ರತಿಸ್ಪರ್ಧಿ ಹಿಕಿರು ನಕಮುಕರ ವಿರುದ್ಧ ಜಯ ಸಾಧಿಸಿದ್ದಾರೆ. ಉಳಿದಂತೆ ವಾಂಗ್ ಹೂ ತಮ್ಮ ಎದುರಾಳಿ ಲೆವೊನ್ ಅರೋನಿಯನ್ ವಿರುದ್ಧ ಹಾಗೂ ಪೀಟರ್ ಸ್ವಿಡ್ಲರ್ ತಮ್ಮ ಎದುರಾಳಿ ವೆಸೆಲಿನ್ ಟೊಪಲೋವ್ ವಿರುದ್ಧ ಡ್ರಾ ಸಾಧಿಸಿದ್ದಾರೆ.
ಚಾಂಪಿಯನ್ಸ್ ಟ್ರೋಫಿ: ಅಂಪೈರ್, ರೆಫ್ರಿ ನೇಮಕ
ದುಬೈ: ಮುಂದಿನ ತಿಂಗಳು ನಡೆಯಲಿರುವ ಚಾಂಪಿಯನ್ಸ್ ಟ್ರೋಫಿಯ ಅಭ್ಯಾಸ ಹಾಗೂ ಲೀಗ್ ಪಂದ್ಯಾವಳಿಗೆ ಅಂಪೈರ್ ಹಾಗೂ ಪಂದ್ಯದ ರೆಫ್ರಿಗಳನ್ನು ಗುರುವಾರ ಐಸಿಸಿ ನೇಮಕ ಮಾಡಿದೆ. ಈ ಪಂದ್ಯವಳಿಗೆ ರೆಫ್ರಿಗಳಾಗಿ ಕ್ರಿಸ್ ಬ್ರಾಡ್, ಜಾವಗಲ್ ಶ್ರೀನಾಥ್ ಮತ್ತು ಆ್ಯಂಡಿ ಪೈಕ್ರಾಫ್ಟ್ ಆಯ್ಕೆ ಮಾಡಲಾಗಿದೆ. ಇನ್ನು ಪಂದ್ಯಾವಳಿಗೆ 12 ಅಂಪೈರ್ಗಳನ್ನು ನೇಮಕ ಮಾಡಲಾಗಿದ್ದು, ಐಸಿಸಿ ಅಂಪೈರ್ಗಳಾದ ಬಿಲ್ಲಿ ಬೌಡೆನ್, ಅಲೀಂ ದಾರ್, ಕುಮಾರ್ ಧರ್ಮಸೇನಾ, ಸ್ಟೀವ್ ಡೆವಿಸ್, ಮಾರಿಸ್ ಎರಾಮಸ್, ಇಯಾನ್ ಗೌಲ್ಡ್, ಟೋನಿ ಹಿಲ್, ರಿಚರ್ಡ್ ಕೆಟಲ್ಬ್ರೊ, ನೇಗಿಲ್ ಲಾಂಗ್, ಬ್ರೂಸ್ ಆಕ್ಸೆನ್ಫ್ರೊರ್ಡ್, ಅಸದ್ ರೌಫ್ ಮತ್ತು ರೊಡ್ ಟಕ್ಕರ್ ಅವರನ್ನು ನೇಮಿಸಲಾಗಿದೆ.