ಬೆಕ್‌ಹ್ಯಾಮ್ ವಿದಾಯ
ಡೇವಿಡ್ ಬೆಕ್‌ಹ್ಯಾಮ್ ತಮ್ಮ ಫುಟ್ಬಾಲ್ ವೃತ್ತಿ ಜೀವನಕ್ಕೆ ವಿದಾಯ ಹೇಳಿದ್ದಾರೆ.
ಲಂಡನ್: ಇಂಗ್ಲೆಂಡ್‌ನ ಖ್ಯಾತ ಫುಟ್ಬಾಲ್ ತಾರೆ ಡೇವಿಡ್ ಬೆಕ್‌ಹ್ಯಾಮ್ ತಮ್ಮ 38ನೇ ವಯಸ್ಸಿನಲ್ಲಿ ಫುಟ್ಬಾಲ್ ವೃತ್ತಿ ಜೀವನಕ್ಕೆ ವಿದಾಯ ಹೇಳಿದ್ದಾರೆ. ಗೋಲ್ಡನ್‌ಬಾಲ್ಸ್ ಎಂಬ ಅಡ್ಡ ಹೆಸರು ಹೊಂದಿದ್ದ ಇಂಗ್ಲೆಂಡ್ ಫುಟ್ಬಾಲ್ ತಂಡದ ಮಾಜಿ ನಾಯಕ ತಮ್ಮ ಬೂಟುಗಳನ್ನು ಈಗ ನೇತು ಹಾಕಲಿದ್ದಾರೆ. ಬೆಕ್‌ಹ್ಯಾಮ್ ಪ್ರಸಕ್ತ ಋತುವಿನಲ್ಲಿ ಪ್ಯಾರೀಸ್ ಸೇಂಟ್ ಜರ್ಮೈನ್ ಪರ ಫ್ರೆಂಚ್ ಲೀಗ್ ಗೆಲ್ಲುವಲ್ಲಿ ಯಶಸ್ವಿಯಾಗಿದ್ದರು. ಲಂಡನ್‌ನಿಂದ ಸ್ಥಳ ಬದಲಾವಣೆ ಮಾಡುತ್ತಿರುವ ಬೆಕ್‌ಹ್ಯಾಮ್ ಫುಟ್ಬಾಲ್‌ನಿಂದ ವಿಶ್ರಾಂತಿ ಪಡೆದು, ತಮ್ಮ ಪತ್ನಿ ವಿಕ್ಟೋರಿಯಾ ಮತ್ತು ನಾಲ್ವರು ಮಕ್ಕಳೊಂದಿಗೆ ಹೆಚ್ಚಿನ ಸಮಯ ಕಳೆಯಲು ತೀರ್ಮಾನಿಸಿದ್ದಾರೆ. ಅವರ ಅತಿ ಕಿರಿಯ ಮಗುವಿಗೆ ಈಗ ಕೇವಲ 21 ತಿಂಗಳು. 'ಫುಟ್ಬಾಲ್‌ನಲ್ಲಿ ಮುಂದುವರಿಯಲು ಅವಕಾಶ ನೀಡಿದ್ದಕ್ಕಾಗಿ ಪ್ಯಾರೀಸ್ ಸೇಂಟ್ ಜರ್ಮೈನ್‌ಗೆ ನನ್ನ ಧನ್ಯವಾದಗಳು. ಆದರೆ, ನನ್ನ ವೃತ್ತಿ ಜೀವನಕ್ಕೆ ವಿದಾಯ ಹೇಳಲು ಇದು ಸೂಕ್ತ ಸಮಯ ಎಂದು ನನಗೆ ಅನಿಸುತ್ತದೆ' ಎಂದು ಬೆಕ್‌ಹ್ಯಾಮ್ ಹೇಳಿದ್ದಾರೆ. ಬೆಕ್‌ಹ್ಯಾಮ್ ಎರಡು ದಶಕಗಳಿಗೂ ಹೆಚ್ಚಿನ ತಮ್ಮ ವೃತ್ತಿ ಜೀವನದಲ್ಲಿ ಮ್ಯಾಂಚೆಸ್ಟರ್ ಯುನೈಟೆಡ್, ರಿಯಲ್ ಮ್ಯಾಡ್ರಿಡ್, ಲಾ ಗ್ಯಾಲಾಕ್ಷಿ, ಎಸಿ ಮಿಲಾನ್ ಹಾಗೂ ಪಿಎಸ್‌ಜಿ ಪರ ಆಡಿದ್ದಾರೆ. 1992ರಲ್ಲಿ ಮ್ಯಾಂಚೆಸ್ಟರ್ ಯುನೈಟೆಡ್ ತಂಡಕ್ಕೆ ಪದಾರ್ಪಣೆ ಮಾಡವ ಮೂಲಕ ಫುಟ್ಬಾಲ್ ವೃತ್ತಿ ಜೀವನ ಆರಂಭಿಸಿದ್ದರು.