ಸಾನಿಯಾ ಜೋಡಿ ಕ್ವಾರ್ಟರ್‌ಫೈನಲ್‌ಗೆ
ರೋಮ್: ಭಾರತದ ಸಾನಿಯಾ ಮಿರ್ಜಾ ಮತ್ತು ಅಮೆರಿಕದ ಬೆಥನೀ ಮಾಟೆಕ್ ಸ್ಯಾಂಡ್ಸ್ ಜೋಡಿ, ರೋಮ್‌ನಲ್ಲಿ ನಡೆಯುತ್ತಿರುವ ಡಬ್ಲ್ಯೂಟಿಎ ಪ್ರೀಮಿಯರ್ ಪಂದ್ಯಾವಳಿಯ ಕ್ವಾರ್ಟರ್‌ಫೈನಲ್ ಪ್ರವೇಶಿಸಿದೆ.6ನೇ ಶ್ರೇಯಾಂಕ ಪಡೆದಿರುವ ಭಾರತ- ಅಮೆರಿಕ ಜೋಡಿ, 1 ಗಂಟೆ 13 ನಿಮಿಷಗಳ ಕಾಲ ನಡೆದ ದ್ವಿತೀಯ ಸುತ್ತಿನ ಪಂದ್ಯದಲ್ಲಿ ಇಟಲಿಯ ಫ್ರಾನ್ಸೆಸ್ಕಾ ಚಿವೋನೆ ಮತ್ತು ಆಸ್ಟ್ರೇಲಿಯಾದ ಸಮಂತಾ ಸ್ಟಾಸರ್ ಜೋಡಿಯನ್ನು 6-4, 6-3 ನೇರ ಸೆಟ್‌ಗಳಿಂದ ಪರಾಭವಗೊಳಿಸಿತು.
ಪಂದ್ಯದಲ್ಲಿ ಗೆದ್ದ ಭಾರತ- ಅಮೆರಿಕ ಜೋಡಿ 59 ಅಂಕಗಳನ್ನು ಗಳಿಸಿದರೆ, ಸಮಂತಾ ಮತ್ತು ಫ್ರಾನ್ಸೆಸ್ಕಾ ಜೋಡಿ 47 ಅಂಕಗಳನ್ನು ಗಳಿಸಿತು.
ಪಂದ್ಯದಲ್ಲಿ ಉಭಯ ತಂಡಗಳಿಗೂ ಹಲವಾರು ಬ್ರೇಕ್ ಅವಕಾಶಗಳು ದೊರಕಿದ್ದವು. ಆದರೆ, ಅವುಗಳನ್ನು ಸದುಪಯೋಗಪಡಿಸಿಕೊಳ್ಳುವಲ್ಲಿ. ಸಾನಿಯಾ- ಬೇಥನಿ ಜೋಡಿ ತಮಗೆ ದೊರಕಿದ 12 ಬ್ರೇಕ್‌ಗಳಲ್ಲಿ 5ದನ್ನು ಸದುಪಯೋಗಪಡಿಸಿಕೊಂಡಿತು. ಇನ್ನು ಎದುರಾಳಿ ದೊರಕದ 11 ಬ್ರೇಕ್‌ಗಳಲ್ಲಿ 3ರನ್ನು ಮಾತ್ರ ಸದುಪಯೋಗಪಡಿಸಿಕೊಂಡಿತು.
ಸಾನಿಯಾ- ಬೇಥನಿ ಈಗ ಕ್ವಾರ್ಟರ್‌ಫೈನಲ್ ಪಂದ್ಯದಲ್ಲಿ ಸ್ಥಳೀಯ ಫೇವರಿಟ್ ಸರಾ ಎರ್ರಾನಿ ಮತ್ತು ರಾಬರ್ಟ್ ವಿನ್ಸಿ ಜೋಡಿಯನ್ನು ಎದುರಿಸಲಿದ್ದು, ಕಠಿಣ ಸವಾಲು ಎದುರಾಗಿದೆ.