ಪ್ಲೇ ಆಫ್ ಸನಿಹಕ್ಕೆ ಸನ್
ಸನ್‌ರೈಸರ್ಸ್ ಹೈದರಾಬಾದ್ ತಂಡದ ಮಾರಕ ಬೌಲಿಂಗ್ ದಾಳಿಗೆ ಬೆದರಿದ ರಾಜಸ್ಥಾನ ರಾಯಲ್ಸ್ ತಂಡ 23 ರನ್‌ಗಳ ಅಂತರದಿಂದ ಪರಾಭವ ಹೊಂದಿತು.
ಹೈದರಾಬಾದ್: ಸನ್‌ರೈಸರ್ಸ್ ಹೈದರಾಬಾದ್ ತಂಡದ ಮಾರಕ ಬೌಲಿಂಗ್ ದಾಳಿಗೆ ಬೆದರಿದ ರಾಜಸ್ಥಾನ ರಾಯಲ್ಸ್ ತಂಡ 23 ರನ್‌ಗಳ ಅಂತರದಿಂದ ಪರಾಭವ ಹೊಂದಿತು.
ಇದರೊಂದಿಗೆ ಹೈದರಾಬಾದ್ ಪ್ಲೇ ಆಫ್ ಹಂತ ಪ್ರವೇಶಿಸುವ ಆಶೆ ಚಿಗುರೊಡೆದಿದೆ. ಅಂಕಪಟ್ಟಿಯಲ್ಲಿ 4ನೇ ಸ್ಥಾನದಲ್ಲಿರುವ ಹೈದರಾಬಾದ್ ಇನ್ನೊಂದು ಲೀಗ್ ಪಂದ್ಯದಲ್ಲಿ ಗೆದ್ದರೆ, ನಿರಾಳವಾಗಿ ಪ್ಲೇ ಆಫ್ ಪ್ರವೇಶಿಸಲಿದೆ.
ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡ ಹೈದರಾಬಾದ್ ನಿಗದಿತ ಓವರ್‌ಗಳಲ್ಲಿ 9 ವಿಕೆಟ್ ಕಳೆದುಕೊಂಡು 136 ರನ್ ಗಳಿಸಿತು. ನಂತರ 137 ರನ್‌ಗಳ ಗುರಿಯನ್ನು ಬೆನ್ನಟ್ಟಿದ ರಾಜಸ್ಥಾನ ತಂಡವನ್ನು ಕೇವಲ 113 ರನ್‌ಗಳಿಗೆ ನಿಯಂತ್ರಿಸಿದ ಸನ್‌ರೈಸರ್ಸ್ ಗೆಲುವಿನ ಕೇಕೆ ಹಾಕಿತು. ರಾಜಸ್ಥಾನ ಪರ ರಾಹುಲ್ ದ್ರಾವಿಡ್ (25), ಅಜಿಂಕ್ಯ ರಹಾನೆ (12), ಶೇನ್ ವ್ಯಾಟ್ಸನ್ (11) ಹಾಗೂ ಕೆವಿನ್ ಕೂಪರ್ ಮಾತ್ರ ಎರಡಂಕಿ ದಾಟಿದರು.
ಸನ್‌ರೈಸರ್ಸ್ ಪರ ಡೇಲ್ ಸ್ಟೇಯ್ನ್, ಕರಣ್ ಶರ್ಮಾ, ಅಮಿತ್ ಮಿಶ್ರಾ ಹಾಗೂ ತಿಸರಾ ಪೆರೇರಾ ತಲಾ 2 ವಿಕೆಟ್ ಕಬಳಿಸಿದರು.
ಇದಕ್ಕೂ ಮುನ್ನ ಬ್ಯಾಟ್ ಮಾಡಿದ ಹೈದರಾಬಾದ್ ಬಿಪ್ಲಬ್ ಸಾಮಂತ್ರೆ (55) ಅರ್ಧ ಶತಕದ ನೆರವಿನೊಂದಿಗೆ 9 ವಿಕೆಟ್ ನಷ್ಟಕ್ಕೆ 136 ರನ್ ಕಲೆ ಹಾಕಿತ್ತು.
ರಾಜಸ್ಥಾನ ರಾಯಲ್ಸ್ ಪರ ಮಾರಕ ಬೌಲಿಂಗ್ ದಾಳಿ ಪ್ರದರ್ಶಿಸಿದ ಜೇಮ್ಸ್ ಫಾಕ್ನರ್ ನಾಲ್ಕುವ ಓವರ್‌ಗಳಲ್ಲಿ ಕೇವಲ 16 ರನ್ ನೀಡಿ 5 ವಿಕೆಟ್ ಕಬಳಿಸಿದರು. ಶೇನ್ ವ್ಯಾಟ್ಸನ್ ಮತ್ತು ಸಿದ್ದಾರ್ಥ್ ತ್ರಿವೇದಿ ತಲಾ 1 ವಿಕೆಟ್ ಕಬಳಿಸಿದರು. ಇದರೊಂದಿಗೆ ಫಾಕ್ನರ್ 14 ಪಂದ್ಯಗಳಿಂದ 26 ವಿಕೆಟ್ ಪಡೆದು ಪಂದ್ಯಾವಳಿಯಲ್ಲಿ ಅತಿ ಹೆಚ್ಚು ವಿಕೆಟ್ ಪಡೆದ ಬೌಲರ್ ಎನಿಸಿದ್ದಾರೆ.
ಸನ್‌ರೈಸರ್ಸ್ ಪರ ಅತ್ಯುತ್ತಮ ಬೌಲಿಂಗ್ ಪ್ರದರ್ಶಿಸಿದ ಅಮಿತ್ ಮಿಶ್ರಾ ಪಂದ್ಯಶ್ರೇಷ್ಠ ಪ್ರಶಸ್ತಿಗೆ ಭಾಜನಾದರು.
ಪ್ಲೇ ಆಫ್‌ನಿಂದ ದೂರ: ಸನ್‌ರೈಸರ್ಸ್ ಗೆಲವಿನಿಂದ ಒಟ್ಟು 18 ಅಂಕ ಗಳಿಸಿದ್ದು, ಪಂಜಾಬ್ ತಂಡ ಮುಂದಿನ ಪಂದ್ಯದಲ್ಲಿ ಗೆದ್ದರೂ ಒಟ್ಟು 16 ಅಂಕ ಮಾತ್ರ ಪಡೆಯಲಿದೆ. ಹಾಗಾಗಿ, ಪಂಜಾಬ್‌ನ ಪ್ಲೇ ಆಫ್ ಕನಸು ಕಮರಿದೆ.
ಸ್ಕೋರ್ ಬೋರ್ಡ್
ಸನ್‌ರೈಸರ್ಸ್ ಹೈದರಾಬಾದ್ 136/9(20 ಓವರ್)
ಪಟೇಲ್ ಬಿ ಫಾಕ್ನರ್ 2(6), ಧವನ್ ಸಿ ರಹಾನೆ ಬಿ ಫಾಕ್ನರ್ 1(3), ವಿಹಾರಿ ಸಿ ಸಚಿನ್ ಬೇಬಿ ಬಿ ತ್ರಿವೇದಿ 19(28), ವೈಟ್ ಸಿ ತ್ರಿವೇದಿ ಬಿ ವ್ಯಾಟ್ಸನ್ 0(1), ಸಾಮಂತ್ರೆ ಸಿ ಕೂಪರ್ ಬಿ ಫಾಕ್ನರ್ 55 (45), ಸಾವಿರ್ಸಿ ಹಾಡ್ಜ್ ಬಿ ಫಾಕ್ನರ್ 23(19), ಪೆರೇರಾ ಅಜೇಯ 17(12), ಸ್ಟೇಯ್ನ್ ಬಿ ಫಾಕ್ನರ್ 0(1), ಕರಣ್ ರನೌಟ್ (ಬಿನ್ನಿ/ಕೂಪರ್), ಅಮಿತ್ ರನೌಟ್ (ಕೂಪರ್) ಇತರೆ 14; ವಿಕೆಟ್ ಪತನ: 1-3, 2-4, 3-5, 4-49, 5-105, 6-125, 7-129, 8-136, 9-136
ಬೌಲಿಂಗ್: ಹಾಡ್ಜ್ 1-0-3-0, ಫಾಕ್ನರ್ 4-1-16-5, ವ್ಯಾಟ್ಸನ್ 3-0-19-1, ತಂಬೆ 3-0-20-0, ಬಿನ್ನಿ 1-0-9-0, ತ್ರಿವೇದಿ 4-0-20-1, ಕೂಪರ್ 4-0-39-0
ರಾಜಸ್ಥಾನ ರಾಯಲ್ಸ್ 113/9 (20 ಓವರ್)
ದ್ರಾವಿಡ್ ರನೌಟ್ (ವೈಟ್) 25(24), ರಹಾನೆ ಸಿ ಧವನ್ ಬಿ ಕರಣ್ 12(25), ವ್ಯಾಟ್ಸನ್ ಸಿ ಸಾಮಿ ಬಿ ಪೆರೇರಾ 11(20), ಸ್ಯಾಮ್ಸನ್ ಸಿ ಸ್ಟೇಯ್ನ್ ಬಿ ಮಿಶ್ರಾ 5(7), ಬಿನ್ನಿ ಬಿ ಪೆರೇರಾ 8(8), ಹಾಡ್ಜ್ ಬಿ ಸ್ಟೇಯ್ನ್ 8(7), ಸಚಿನ್ ಬೇಬಿ ಎಲ್‌ಬಿಡಬ್ಲ್ಯೂ ಬಿ ಮಿಶ್ರಾ 3(7), ಫಾಕ್ನರ್ ಸಿ ಪೆರೇರಾ ಬಿ ಕರಣ್ 6(3), ಕೂಪರ್ ಸಿ ಸಾಮಂತ್ರೆ ಬಿ ಸ್ಟೇಯ್ನ್ 26(12), ತಂಬೆ ಅಜೇಯ 3(6), ತ್ರಿವೇದಿ ಅಜೇಯ 0(1), ಇತರೆ 6
ವಿಕೆಟ್ ಪತನ: 1-39, 2-40, 3-51, 4-61, 5-65, 6-75, 7-82, 8-85, 9-112
ಬೌಲಿಂಗ್: ಸ್ಟೇಯ್ನ್ 4-0-17-2, ಇಶಾಂತ್ 4-0-22-0, ಕರಣ್ 4-0-33-2, ಸಾಮಿ 1-0-4-0, ಮಿಶ್ರಾ 4-0-8-2, ಪೆರೇರಾ 3-0-25-2