ಬ್ಯಾಸ್ಕೆಟ್‌ಬಾಲ್: ಚಿನ್ನ ಗೆದ್ದ ವನಿತೆಯರು
ದೊಹಾ: ಮಂಗೋಲಿಯಾ ವಿರುದ್ಧ ಅಂತಿಮ ಪ್ಲೇ ಆಫ್‌ನಲ್ಲಿ ಉತ್ತಮ ಪ್ರದರ್ಶನ ನೀಡಿದ ಭಾರತ ವನಿತೆಯರ ತಂಡ ಏಷ್ಯಾ ಎಫ್‌ಐಬಿಎ ಉದ್ಘಾಟನಾ ಪಂದ್ಯಾವಳಿಯಲ್ಲಿ ಚಿನ್ನದ ಪದಕ ಪಡೆದಿದ್ದಾರೆ.
ಪಂದ್ಯಾವಳಿಯ ಮೊದಲ ದಿನದಲ್ಲಿ ಸತತ ಮೂರು ಂದ್ಯಗಳಲ್ಲಿ ಜಯ ಸಾಧಿಸುವ ಮೂಲಕ ಉತ್ತಮ ಆರಂಭವನ್ನು ಪಡೆದಿದ್ದ ಗೀತು ಅನ್ನಾ ಜೋಸ್ ನೇತೃತ್ವದ ಭಾರತ ತಂಡ, ಪ್ಲೇ ಆಫ್‌ನ ಮೂರೂ ಪಂದ್ಯಗಳಲ್ಲೂ ಜಯ ಸಾಧಿಸಿತು. ಈ ಮೂಲಕ ಪ್ಲೇ ಆಫ್‌ನ ಮೂರೂ ಪಂದ್ಯಗಳಿಂದ 21 ಅಂಕಗಳನ್ನು ಪಡೆದಿತ್ತು.
ನಾವು ನಮ್ಮ ಗುರಿಯನ್ನು ತಲುಪಿದ್ದೇವೆ. ತಂಡದ ಪ್ರತಿಯೊಬ್ಬರು ತಮ್ಮ ಕಾಣಿಕೆಯನ್ನು ನೀಡಿದ್ದು ನಮ್ಮ ತಂತ್ರಗಾರಿಕೆ ಫಲ ನೀಡಿದೆ ಎಂದು ಭಾರತ ವನಿತೆ ತಂಡದ ನಾಯಕಿ ಜೋಸ್ ತಿಳಿಸಿದರು.
ಈ ಮೂಲಕ ಭಾರತ ತಂಡ ಏಷ್ಯಾ ಎಫ್‌ಐಬಿಎ ಮಟ್ಟದ ಪಂದ್ಯಾವಳಿಯಲ್ಲಿ ಮೊದಲ ಬಾರಿಗೆ ಚಿನ್ನದ ಪದಕ ಪಡೆದಿದೆ.
ಎದುರಾಳಿಗಳ ರಕ್ಷಣಾ ವಿಭಾಗದ ಸವಾಲನ್ನು ಮೆಟ್ಟಿನಿಂತ ಅನಿತಾ ಪೌಲ್‌ದುರಾಯ್, ತಮ್ಮ ಕೌಶಲ್ಯಯುತ ಶೂಟ್‌ನಿಂದ ಹೆಚ್ಚು ಅಂಕಗಳನ್ನು ತಂದುಕೊಟ್ಟರು.