ಭೂಪತಿ- ಬೋಪಣ್ಣ ಕ್ವಾರ್ಟರ್ಫೈನಲ್ಗೆ
ರೋಮ್: ಮಹೇಶ್ ಭೂಪತಿ ಮತ್ತು ರೋಹನ್ ಬೋಪಣ್ಣ ಜೋಡಿ, ರೋಮ್ ಮಾಸ್ಟರ್ಸ್ ಕ್ವಾರ್ಟರ್ಫೈನಲ್ ಪ್ರವೇಶಿಸಿದೆ. ಆದರೆ, ಭಾರತದ ಇನ್ನೊಬ್ಬ ಹಿರಿಯ ಟೆನಿಸ್ ತಾರೆ ಲಿಯಾಂಡರ್ ಪೇಸ್ ಮತ್ತು ಆಸ್ಟ್ರೇಲಿಯಾದ ಜರ್ಗನ್ ಮೇಲ್ಜರ್ ಜೋಡಿ ಸೋಲನುಭವಿಸಿದೆ.
ಆರನೇ ಶ್ರೇಯಾಂಕ ಪಡೆದಿದ್ದ ಭಾರತದ ಭೂಪತಿ ಮತ್ತು ಬೋಪಣ್ಣ ಜೋಡಿ, ಶ್ರೇಯಾಂಕ ಪಡೆಯದ ಇಂಗ್ಲೆಂಡ್ನ ಡೋಮಿನಿಕ್ ಇಂಗ್ಲಾಟ್ ಮತ್ತು ಜೋನಾಥನ್ ಮರ್ರೆ ಜೋಡಿಯನ್ನು ದ್ವಿತೀಯ ಸುತ್ತಿನಲ್ಲಿ 6-2, 6-3 ನೇರ ಸೆಟ್ಗಳಿಂದ ಪರಾಭವಗೊಳಿಸಿತು.
ಆದರೆ, ಪೇಸ್- ಮೇಲ್ಜರ್ ಜೋಡಿ, ಮೆಕ್ಸಿಕೋದ ಸ್ಯಾಂಟಿಗೋ ಗೋಜಾಲೆಜ್ ಮತ್ತು ಸ್ಕಾಟ್ ಲಿಪ್ಸಕೆ ಜೋಡಿ ವಿರುದ್ಧ 6-7 (4), 6-7 (3) ಸೆಟ್ಗಳಿಂದ ಸೋಲನುಭವಿಸಿತು.
ಭೂಪತಿ ಮತ್ತು ಬೋಪಣ್ಣ ಜೋಡಿ ಕ್ವಾರ್ಟರ್ಫೈನಲ್ ಪಂದ್ಯದಲ್ಲಿ ಚೆಕ್ ಗಣರಾಜ್ಯದ ತಾಮಸ್ ಬೆರ್ಡಿಚ್ ಮತ್ತು ರಾಡೆಕ್ ಸ್ಟಿಪಾನೆಕ್ ಜೋಡಿಯನ್ನು ಎದುರಿಸಲಿದೆ.