ಆರ್ಸಿಬಿಗೆ ಭರ್ಜರಿ ಜಯ
ಭರವಸೆಯಿಂದ ಕಾದು ಕುಳಿತ ಅಭಿಮಾನಿಗಳಿಗೆ ನಿರಾಸೆಯಾಗಲಿಲ್ಲ. ಆರ್ಸಿಬಿ, ಸಿಎಸ್ಕೆ ವಿರುದ್ಧ ಜಯ ಸಾಧಿಸಿತು.
ಬೆಂಗಳೂರು: ಮಳೆಯ ಆರ್ಭಟದ ನಡುವೆಯೂ ಪಂದ್ಯ ನಡೆಯುವ ಭರವಸೆಯಿಂದ ಕಾದು ಕುಳಿತ ಅಭಿಮಾನಿಗಳಿಗೆ ನಿರಾಸೆಯಾಗಲಿಲ್ಲ. ಗೆಲ್ಲಲೇಬೇಕಾದ ಪಂದ್ಯದಲ್ಲಿ ಆರ್ಸಿಬಿ ತಂಡ ಸಿಎಸ್ಕೆ ವಿರುದ್ಧ 24 ರನ್ ಗಳ ಜಯ ಸಾಧಿಸಿತು. ಮಳೆಯ ಕಾರಣ ಪಂದ್ಯವನ್ನು ತಲಾ 8 ಓವರ್ಗಳಿಗೆ ಇಳಿಸಲಾಯಿತು. ನಂತರ ಟಾಸ್ ಗೆದ್ದು ಫೀಲ್ಡಿಂಗ್ ಆಯ್ದುಕೊಂಡ ಚೆನ್ನೈ ಸೂಪರ್ ಕಿಂಗ್ಸ್ ತಂಡ ನಿಗದಿತ 8 ಓವರ್ಗಳಲ್ಲಿ 2 ವಿಕೆಟ್ ಪಡೆದು 106ರನ್ಗಳನ್ನು ನೀಡಿತು.
ಆರ್ಸಿಬಿ ಪರ ಆರಂಭಿಕರಾಗಿ ಕಣಕ್ಕಿಳಿದ ನಾಯಕ ಕೊಹ್ಲಿ ಹಾಗೂ ಕ್ರೀಸ್ ಗೇಯ್ಲ್ ತಂಡಕ್ಕೆ ಉತ್ತಮ ಆರಂಭ ನೀಡಿದರು. ಈ ವೇಳೆ ನಿಧಾನಗತಿ ಆರಂಭ ಪಡೆದು ನಂತರ 4 ಸಿಕ್ಸರ್ ಬಾರಿಸಿದ ಗೇಯ್ಲ್, ಬ್ರಾವೊ ಎಸೆತದಲ್ಲಿ ಹಸ್ಸಿಗೆ ಕ್ಯಾಚ್ ನೀಡಿದರು. ಕೇವಲ 13 ಎಸೆತಗಳನ್ನು ಎದುರಿಸಿದ ಗೇಯ್ಲ್ 28 ರನ್ಗಳಿಸಿದರು. ನಂತರ ಬಂದ ಡಿವಿಲಿಯರ್ಸ್ ಕೇವಲ 3 ಎಸೆತಗಳಲ್ಲಿ 5 ರನ್ಗಳಿಸಿ ಮೊಹಿತ್ ಎಸೆತದಲ್ಲಿ ಜಡೇಜಾಗೆ ಕ್ಯಾಚ್ ನೀಡಿದರು.
ನಂತರ ಬಂದ ಹೆನ್ರಿಕೇಸ್ 3 ಎಸೆತಗಳನ್ನು ಎದುರಿಸಿ 12 ರನ್ಗಳಿಸಿ ಅಜೇಯರಾಗುಳಿದರು. ಇದಕ್ಕು ಮುನ್ನ ಆರಂಭಿಕರಾಗಿ ಕಣಕ್ಕಿಳಿದ ಕೊಹ್ಲಿ ಅದ್ಭುತ ಬ್ಯಾಟಿಂಗ್ ನಡೆಸಿದರು. 29 ಎಸೆತಗಳನ್ನು ಎದುರಿಸಿದ ಕೊಹ್ಲಿ 6 ಬೌಂಡರಿಗಳು ಹಾಗೂ 4 ಸಿಕ್ಸರ್ ಬಾರಿಸಿ ಅಜೇಯ 56 ರನ್ಗಳಿಸಿದರು.
ಈ ಮೊತ್ತವನ್ನು ಬೆನ್ನಟ್ಟಿದ ಚೆನ್ನೈ ಸೂಪರ್ ಕಿಂಗ್ಸ್ ತಂಡ 8 ಓವರ್ಗಳಲ್ಲಿ 6 ವಿಕೆಟ್ ಕಳೆದುಕೊಂಡು 82 ರನ್ಗಳಿಸಿತು.
ಸಿಎಸ್ಕೆ ಪರ ಆರಂಭಿಕರಾಗಿ ಕಣಕ್ಕಿಳಿದ ಮುರಳಿ ವಿಜಯ್ (32) ಹಾಗೂ ಮೈಕ್ ಹಸ್ಸಿ (6) ಜಹೀರ್ ಖಾನ್ ಎಸೆತದಲ್ಲಿ ಕೀಪರ್ ಅರುಣ್ ಕಾರ್ತಿಕ್ಗೆ ಕ್ಯಾಚ್ ನೀಡಿದರು. ನಂತರ ಬಂದ ರೈನಾ ಮೊದಲ ಎಸೆತದಲ್ಲಿ ವಿನಯ್ಗೆ ಕ್ಯಾಚ್ ನೀಡಿದರು. ನಂತರ ಬಂದ ಬ್ರಾವೊ 11, ಧೋನಿ 24, ಜಡೇಜಾ 7 ಹಾಗೂ ಬದ್ರಿನಾಥ್ ಅಜೇಯ 0 ರನ್ಗಳಿಸಿದರು.
ಸ್ಕೋರ್ ಬೋರ್ಡ್
ರಾಯಲ್ ಚಾಲೆಂಜರ್ಸ್ ಬೆಂಗಳೂರು 106/2 (8 ಓವರ್)
ಗೇಯ್ಲ್ ಸಿ ಹಸ್ಸಿ ಬಿ ಬ್ರಾವೊ 28(13), ಕೊಹ್ಲಿ ಅಜೇಯ 56(29), ಡಿವಿಲಿಯರ್ಸ್ ಸಿ ಜಡೇಜಾ ಬಿ ಮೊಹಿತ್ 5(3), ಹೆನ್ರಿಕೇಸ್ ಅಜೇಯ 12(3), ಇತರೆ 5
ವಿಕೆಟ್ ಪತನ: 1-67, 2-76
ಬೌಲಿಂಗ್: ಅಶ್ವಿನ್ 2-0-21-0, ಮೊರಿಸ್ 2-0-22-0, ಹೊಲ್ಡರ್ 1-0-20-0, ಬ್ರಾವೊ 2-0-26-1, ಮೊಹಿತ್ 1-0-14-1
ಚೆನ್ನೈ ಸೂಪರ್ ಕಿಂಗ್ಸ್ 82/6 (8 ಓವರ್ )
ಹಸ್ಸಿ ಸಿ ಅರುಣ್ ಬಿ ಜಹೀರ್ 6(5), ವಿಜಯ್ ಸಿ ಗೇಯ್ಲ್ ಬಿ ರಾಮ್ಪಾಲ್ 32(18), ರೈನಾ ಸಿ ವಿನಯ್ ಬಿ ಜಹೀರ್ 0(1), ಬ್ರಾವೊ ಸಿ ತಿವಾರಿ ಬಿ ವಿನಯ್ 11(9), ಧೋನಿ ಸಿ ಉನಾದ್ಕತ್ ಬಿ ಜಹೀರ್ 24(10), ಜಡೇಜಾ ಸಿ ಮತ್ತು ಬಿ ಜಹೀರ್ , ಬದ್ರಿನಾಥ್ ಅಜೇಯ 0(0)ಇತರೆ 2
ವಿಕೆಟ್ ಪತನ: 1-11, 2-11, 3-29, 4-56, 5-78, 6-82
ಬೌಲಿಂಗ್: ರಾಮ್ಪಾಲ್ 2-0-20-1, ಜಹೀರ್ 2-0-17-4, ಉನಾದ್ಕತ್ 2-0-16-0, ವಿನಯ್ 1-0-10-1, ಆರ್.ಪಿ ಸಿಂಗ್ 1-0-19-0
ಪಂದ್ಯಶ್ರೇಷ್ಠ: ವಿರಾಟ್ ಕೊಹ್ಲಿ