ಮನೋಜ್ ಮಂದೀಪ್‌ಗೆ ಪ್ರಶಸ್ತಿ ಖಚಿತ
ನವದೆಹಲಿ: ಕಾಮನ್ವೆಲ್ತ್ ಕ್ರೀಡಾಕೂಟದಲ್ಲಿ ಚಿನ್ನ ಗೆದ್ದ ಭಾರತದ ಬಾಕ್ಸರ್ ಮನೋಜ್ ಕುಮಾರ್ ಮತ್ತು ರಾಷ್ಟ್ರೀಯ ಚಾಂಪಿಯನ್ ಮಂದೀಪ್ ಜಂಗ್ರಾ ಸೇರಿದಂತೆ ಒಟ್ಟು ಮೂವರು ಭಾರತೀಯರು ಸಿಪ್ರಸ್ ಬಾಕ್ಸಿಂಗ್ ಪಂದ್ಯಾವಳಿಯಲ್ಲಿ ಪ್ರಶಸ್ತಿ ಖಚಿತಪಡಿಸಿಕೊಂಡಿದ್ದಾರೆ. ಮನೋಜ್ (64ಕೆಜಿ) ಕ್ವಾರ್ಟರ್‌ಫೈನಲ್ ಪಂದ್ಯದಲ್ಲಿ ಸ್ಪೇನ್‌ನ ಫ್ರಾಂಕ್ ಉರ್ಕೈಟ್ ಅವರನ್ನು 15-13 ಅಂಕಗಳಿಂದ ಪರಾಭವಗೊಳಿಸುವ ಮೂಲಕ ಸೆಮಿಫೈನಲ್ ಪ್ರವೇಶಿಸಿದರು. ಮಂದೀಪ್ ಸಿಂಗ್ (69ಕೆಜಿ) ಲೆಬಾನಾನ್‌ಗೆ ಅಹ್ಮದ್ ಅಲ್ ನಾಬೌಡೆ ಅವರನ್ನು ಸೋಲಿಸುವ ಮೂಲಕ ಭಾರತ ಪ್ರಭುತ್ವ ಮೆರಿಯಿತು. ಏತನ್ಮಧ್ಯೆ, ಅಂತಾರಾಷ್ಟ್ರೀಯ ಪಂದ್ಯಾವಳಿಗೆ ಪದಾರ್ಪಣೆ ಮಾಡಿದ ಜಾಗ್ರೂಪ್ ಸಿಂಗ್ (81ಕೆಜಿ) ಈಜಿಪ್ಟ್‌ನ ಇಬ್ರಾಹಿಮ್ ಅವರನ್ನು ಪರಾಭವಗೊಳಿಸಿದರು. ಹೀಗಾಗಿ ಈ ಮೂವರು ಭಾರತೀಯ ಆಟಗಾರರು ಕಂಚಿನ ಪದಕ ಖಚಿತಪಡಿಸಿಕೊಂಡಿದ್ದಾರೆ. ಆದರೆ, ಒಲಿಂಪಿಕ್ಸ್ ಕ್ರೀಡಾಕೂಟದಲ್ಲಿ ಕ್ವಾರ್ಟರ್‌ಫೈನಲ್ ಪ್ರವೇಶಿಸಿದ್ದ ಭಾರತದ ಎಲ್. ದೇವೇಂದ್ರೋ ಸಿಂಗ್ (49ಕೆಜಿ)ಅಲ್ಜೇರಿಯಾದ ಫಸ್ಸಿ ಮೊಹ್ರಮ್ಮದ್ ವಿರುದ್ಧ ಸೋಲನುಭವಿಸಿದರು.
ಪ್ರಶಸ್ತಿ ಸುತ್ತಿಗೆ ನ್ಯಾನೋ, ದಿಲ್ಬಾಗ್
ನವದೆಹಲಿ: ಥೋಖಮ್ ನ್ಯಾನೋ ಸಿಂಗ್ (49ಕೆಜಿ) ಮತ್ತು ದಿಲ್ಬಾಗ್ ಸಿಂಗ್ (69ಕೆಜಿ) ರಷ್ಯಾದಲ್ಲಿ ನೆಡಯುತ್ತಿರುವ ಖಬಾರೋಸ್ಕ್ ಅಂತಾರಾಷ್ಟ್ರೀಯ ಬಾಕ್ಸಿಂಗ್ ಪಂದ್ಯಾವಳಿಯ ಸೆಮಿಫೈನಲ್ ಪ್ರವೇಶಿಸಿದ್ದಾರೆ. ರಾಷ್ಟ್ರೀಯ ಚಾಂಪಿಯನ್ ಮತ್ತು ರಾಷ್ಟ್ರೀಯ ಕ್ರೀಡಾಕೂಟದಲ್ಲಿ ಚಿನ್ನದ ಪದಕ ಗೆದ್ದ ನ್ಯಾನೋ ಕ್ವಾರ್ಟರ್‌ಫೈನಲ್ ಪಂದ್ಯದಲ್ಲಿ ಫಿಲಿಪಿನ್ಸ್‌ನ ಲಾಡೋನ್ ರೋಗೆನ್ ಅವರನ್ನು ಸುಲಭವಾಗಿ ಪರಾಭವಗೊಳಿಸಿದರು.
22 ವರ್ಷದ ನ್ಯಾನೋ ಸಿಂಗ್ ಬಲಿಷ್ಠ ಹೋರಾಟ ನೀಡುವ ಮೂಲಕ ಫಿಲಿಪಿನ್ಸ್ ಆಟಗಾರನನ್ನು 12-8 ಅಂಕಗಳಿಂದ ಸೋಲಿಸುವ ಮೂಲಕ ಸೆಮೀಸ್‌ಗೆ ಹೆಜ್ಜೆ ಹಾಕಿದರು. ಸೆಮೀಸ್‌ನಲ್ಲಿ ನ್ಯಾನೋ ಸಿಂಗ್ ದಕ್ಷಿಣ ಕೊರಿಯಾದ ರಿ ಚುಂಗ್ ಹೇಕ್ ಅವರನ್ನು ಎದುರಿಸಲಿದ್ದಾರೆ.ನಂತರ ನಡೆದ ಪಂದ್ಯದಲ್ಲಿ ಕಾಮನ್ವೆಲ್ತ್ ಕ್ರೀಡಾಕೂಟದಲ್ಲಿ ಕಂಚಿನ ಪದಕಗೆದ್ದ ದಿಲ್ಬಾಗ್ ಸಿಂಗ್ (69ಕೆಜಿ) ಹಂಗೇರಿಯ ಸಿಲ್ವೈ ಲಾಸ್ಜ್‌ಲೋ ಅವರನ್ನು 17-6 ಅಂಕಗಳಿಂದ ಸುಲಭವಾಗಿ ಮಣಿಸಿದರು.