ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕ್ರೀಡೆ

ಡೇರ್‌ ಡೆವಿಲ್ಸ್‌ಗೆ ಕೊನೆಯ ಸ್ಥಾನ

Srinivasa Murthy VN
Updated On : 20 May 2013, 11:59 am

ಪುಣೆ: ಕಳೆದ ಆವೃತ್ತಿಯ ಲೀಗ್ ಹಂತದಲ್ಲಿ 22 ಅಂಕಗಳೊಂದಿಗೆ ಅಗ್ರ ಸ್ಥಾನದಲ್ಲಿದ್ದ ಡೆಲ್ಲಿ ಡೇರ್‌ಡೆವಿಲ್ಸ್ ತಂಡ, ಈ ಆವೃತ್ತಿಯಲ್ಲಿ ಕೇವಲ 6 ಅಂಕಗಳನ್ನು ಪಡೆಯುವ ಮೂಲಕ ಕೊನೆ ಸ್ಥಾನಕ್ಕೆ ತಳ್ಳಲ್ಪಟ್ಟಿದೆ. ಪುಣೆ ವಾರಿಯರ್ಸ್ ವಿರುದ್ಧ ತಮ್ಮ ಕೊನೆ ಪಂದ್ಯವನ್ನಾಡಿದ ಡೆಲ್ಲಿ ಡೇರ್‌ಡೆವಿಲ್ಸ್ ತಂಡ 38 ರನ್‌ಗಳ ಸೋಲನುಭವಿಸುವ ಮೂಲಕ ಮತ್ತೆ ಮುಖಭಂಗ ಅನುಭವಿಸಿತು.
ಟಾಸ್ ಗೆದ್ದ ಪುಣೆ ವಾರಿಯರ್ಸ್ ತಂಡ ನಿಗದಿತ 20 ಓವರ್‌ಗಳಲ್ಲಿ 5 ವಿಕೆಟ್ ಕಳೆದುಕೊಂಡು 172 ರನ್‌ಗಳನ್ನು ಕಲೆಹಾಕಿತು. ಈ ಮೊತ್ತವನ್ನು ಬೆನ್ನಟ್ಟಿದ ಪುಣೆ ತಂಡ 20 ಓವರ್‌ಗಳಲ್ಲಿ 9 ವಿಕೆಟ್ ಕಳೆದುಕೊಂಡು ಕೇವಲ 134 ರನ್‌ಗಳನ್ನಷ್ಟೇ ಕಲೆಹಾಕಿತು. ಪುಣೆ ತಂಡದ ಪರ ನಾಯಕ ಏರಾನ್ ಫಿಂಚ್ 34 ಎಸೆತಗಳಲ್ಲಿ 52 ಹಾಗೂ 23 ಎಸೆತಗಳಲ್ಲಿ ಅಜೇಯ 44 ರನ್‌ಗಳಿಸಿದ ಲೂಕ್ ರೈಟ್ ತಂಡ ಸಾವಾಲಿನ ಮೊತ್ತವನ್ನು ಪೇರಿಸಲು ನೆರವಾದರು.
ನಂತರ ಪುಣೆ ನೀಡಿದ ಸವಾಲಿನ ಮೊತ್ತವನ್ನು ಬೆನ್ನಟ್ಟಿದ ಡೆವಿಲ್ಸ್ ತಂಡ ಆರಂಭದಿಂದಲೇ ನಿರಂತರವಾಗಿ ವಿಕೆಟ್ ಕಳೆದುಕೊಳ್ಳುತ್ತಾ ಪಂದ್ಯವನ್ನು ಕೈಚೆಲ್ಲಿದರು. ಡೆವಿಲ್ಸ್ ಪರ ಗೌತಮ್ 30 ಹಾಗೂ ಇರ್ಫಾನ್ 24 ರನ್‌ಗಳಿಸಿದ್ದು ಹೊರತು ಪಡಿಸಿದರೆ ಉಳಿದ ಯಾವುದೇ ಬ್ಯಾಟ್ಸ್‌ಮನ್ 20ಕ್ಕು ಹೆಚ್ಚು ರನ್‌ಗಳಿಸಲಿಲ್ಲ. ಇನ್ನು ಪುಣೆ ತಂಡದ ಪರ ಅಲಿ ಮುರ್ತಾಜಾ ಹಾಗೂ ಮ್ಯಾಥ್ಯೂಸ್ ತಲಾ 3 ವಿಕೆಟ್ ಪಡೆದು ಯಶಸ್ವಿ ಬೌಲರ್ ಎನಿಸಿದರು. ಇನ್ನು ಬ್ಯಾಟಿಂಗ್‌ನಲ್ಲಿ ಅಜೇಯ 44 ರನ್ ಗಳಿಸಿದ ಲೂಕ್ ರೈಟ್ ಪಂದ್ಯ ಶ್ರೇಷ್ಠ ಪ್ರಶಸ್ತಿ ಪಡೆದರು.

ಸ್ಕೋರ್ ಬೋರ್ಡ್

ಪುಣೆ ವಾರಿಯರ್ಸ್ 172/5 (20 ಓವರ್)
ಉತ್ತಪ್ಪ ಸಿ ವಾರ್ನರ್ ಬಿ ಯಾದವ್ 24(20), ಫಿಂಚ್ ಸಿ ಸೆಹ್ವಾಗ್ ಬಿ ಕೌಲ್ 52 (34), ಮನಿಷ್ ಬಿ ನದೀಂ 10(14), ಯುವರಾಜ್ ಸಿ ಸೆಹ್ವಾಗ್ ಬಿ ಪಠಾಣ್ 3(7), ಮ್ಯಾಥ್ಯೂಸ್ ಅಜೇಯ 30(22), ರೈಟ್ ಸಿ ಸೆಹ್ವಾಗ್ ಬಿ ಕೌಲ್ 44(23), ಗೊಮೇಜ್ ಅಜೇಯ 4(1), ಇತರೆ 5
ವಿಕೆಟ್ ಪತನ: 1-38, 2-74, 3-91, 4-96, 5-167
ಬೌಲಿಂಗ್: ಪಠಾಣ್ 4-0-34-1, ಮಾರ್ಕೆಲ್ 4-0-36-0, ಕೌಲ್ 4-0-27-2, ಯಾದವ್ 4-0-52-1, ನದೀಂ 4-0-21-1.
ಡೆಲ್ಲಿ ಡೇರ್‌ಡೆವಿಲ್ಸ್ 134/9 (20 ಓವರ್)
ಜಯವರ್ಧನೆ ಸಿ ರೈಟ್ ಬಿ ಮುರ್ತಾಜಾ 14(13), ವಾರ್ನರ್ ಸಿ ಉತ್ತಪ್ಪ ಬಿ ಪಾರ್ನೆಲ್ 2(5), ಭರತ್ ಎಲ್‌ಬಿಡಬ್ಲ್ಯೂ ಬಿ ಮುರ್ತಾಜಾ 16(18), ಸೆಹ್ವಾಗ್ ಸಿ ಗೊಮೇಜ್ ಬಿ ಮುರ್ತಾಜಾ 11(10), ರೊಹ್ರೆರ್ ಬಿ ದಿಂಡಾ 7(9), ಇರ್ಫಾನ್ ಸಿ ಪಾಂಡೆ ಬಿ ಮ್ಯಾಥ್ಯೂಸ್ 24(28), ಗೌತಮ್ ಸಿ ಗೊಮೇಜ್ ಬಿ ಮ್ಯಾಥ್ಯೂಸ್ 30(23), ಮಾರ್ಕೆಲ್ ಸಿ ಪಾರ್ನೆಲ್ ಬಿ ಮ್ಯಾಥ್ಯೂಸ್ 0(1), ಯಾದವ್ ಅಜೇಯ 8(9), ನದೀಂ ಸಿ ಮ್ಯಾಥ್ಯೂಸ್ ಬಿ ದಿಂಡಾ 6(5), ಕೌಲ್ ಅಜೇಯ 0(0), ಇತರೆ 16
ವಿಕೆಟ್ ಪತನ: 1-17, 2-40, 3-55, 4-55, 5-64, 6-118, 7-119, 8-125, 9-133
ಬೌಲಿಂಗ್: ಪಾರ್ನೆಲ್ 3-0-36-1, ಭುವನೇಶ್ವರ್ 4-0-26-0, ದಿಂಡಾ 4-0-21-2, ಮುರ್ತಾಜಾ 4-0-15-3, ಯುವರಾಜ್ 2-0-17-0, ಮ್ಯಾಥ್ಯೂಸ್ 3-0-14-3

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement