ಸನ್‌ರೈಸರ್ಸ್ ಪ್ಲೇ ಆಫ್‌ಗೆ, ಆರ್‌ಸಿಬಿ ಮನೆಗೆ
ಸನ್‌ರೈಸರ್ಸ್ ಬೌಲರ್‌ಗಳ ಮಾರಕ ಬೌಲಿಂಗ್ ನಂತರ ಆರಂಭಿಕ ಬ್ಯಾಟ್ಸ್‌ಮನ್‌ಗಳ ಉತ್ತಮ ಬ್ಯಾಟಿಂಗ್ ನೆರವಿನೊಂದಿಗೆ..
ಹೈದರಾಬಾದ್: ಸನ್‌ರೈಸರ್ಸ್ ಬೌಲರ್‌ಗಳ ಮಾರಕ ಬೌಲಿಂಗ್ ನಂತರ ಆರಂಭಿಕ ಬ್ಯಾಟ್ಸ್‌ಮನ್‌ಗಳ ಉತ್ತಮ ಬ್ಯಾಟಿಂಗ್ ನೆರವಿನೊಂದಿಗೆ ಸನ್‌ರೈಸರ್ಸ್ ತಂಡ ಕೋಲ್ಕತಾ ನೈಟ್‌ರೈಡರ್ಸ್ ವಿರುದ್ಧ 5 ವಿಕೆಟ್‌ಗಳ ಜಯ ಸಾಧಿಸಿತು. ಈ ಮೂಲಕ ತಮ್ಮ ಚೊಚ್ಚಲ ಐಪಿಎಲ್‌ನಲ್ಲಿ ರೈಸರ್ಸ್ ಪ್ಲೇ ಆಫ್ ಹಂತಕ್ಕೆ ಪ್ರವೇಶಿಸಿತು.
ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಲು ನಿರ್ಧರಿಸಿದ ಕೆಕೆಆರ್ ನಿಗದಿತ 20 ಓವರ್‌ಗಳಲ್ಲಿ 7 ವಿಕೆಟ್ ನಷ್ಟಕ್ಕೆ 130 ರನ್‌ಗಳಿಸಿತು. ಇದಕ್ಕೆ ಉತ್ತರವಾಗಿ ಸನ್‌ರೈಸರ್ಸ್ ತಂಡ 18.5 ಓವರ್‌ಗಳಲ್ಲಿ 5 ವಿಕೆಟ್ ಕಳೆದುಕೊಂಡು 132 ರನ್‌ಗಳಿಸಿ ಗೆಲವಿನ ನಗೆ ಬೀರಿತು.
ಈ ಪಂದ್ಯದಲ್ಲಿ ಕೆಕೆಆರ್ ಸೋತ ಹಿನ್ನಲೆಯಲ್ಲಿ ಪ್ಲೇ ಆಫ್ ಆಸೆ ಜೀವಂತವಾಗಿರಿಸಿಕೊಂಡಿದ್ದ ಆರ್‌ಸಿಬಿ ನಿರಾಸೆ ಅನುಭವಿಸಬೇಕಾಯಿತು.
ಸನ್‌ರೈಸರ್ಸ್ ಆಕ್ರಮಣಕಾರಿ ಬೌಲಿಂಗ್ ಪ್ರದರ್ಶನ ನೀಡಿದ ಹಿನ್ನೆಲೆಯಲ್ಲಿ ರಕ್ಷಣಾತ್ಮಕ ಆಟಕ್ಕೆ ಮುಂದಾದ ಕೆಕೆಆರ್ ತಂಡದ ಆರಂಭಿಕರಾದ ಬಿಸ್ಲಾ ಹಾಗೂ ಗೌತಮ್ ಗಂಭೀರ್ ತಂಡಕ್ಕೆ 25 ರನ್‌ಗಳ ಜತೆಯಾಟ ನೀಡಿದರು. ಈ ವೇಳೆ 15 ರನ್‌ಗಳಿಸಿದ್ದ ಬಿಸ್ಲಾ ಪೆರೇರಾ ಎಸೆತದಲ್ಲಿ ವೈಟ್‌ಗೆ ಕ್ಯಾಚ್ ನೀಡಿದರು.
ನಂತರ 10 ರನ್‌ಗಳಿಸಿದ್ದ ಗಂಭೀರ್, ಸಾಮಂತ್ರೆ ಅವರ ಚುರುಕಿನ ಫೀಲ್ಡಿಂಗ್‌ಗೆ ರನೌಟ್ ಆದರು. ಈ ವೇಳೆ ಜತೆಯಾದ ಕಾಲಿಸ್ ಹಾಗೂ ಮಾರ್ಗನ್ ತಂಡವನ್ನು ಮೇಲೆತ್ತುವಲ್ಲಿ ವಿಫಲರಾದರು. 9 ಎಸೆತಗಳಲ್ಲಿ 9 ರನ್‌ಗಳಿಸಿದ್ದ ಮಾರ್ಗನ್, ಕರಣ್ ಎಸೆತದಲ್ಲಿ ಎಲ್‌ಬಿಡಬ್ಲ್ಯೂ ಬಲೆಗೆ ಬಿದ್ದರು. ನಂತರ ಬಂದ ಯೂಸುಫ್ ಪಠಾಣ್, ಕಾಲಿಸ್ ಜತೆಗೂಡಿ 30 ರನ್‌ಗಳ ಜತೆಯಾಟ ನೀಡಿದರು. 24 ರನ್‌ಗಳಿಸಿದ್ದ ಕಾಲಿಸ್, ಸ್ಟೇಯ್ನ್ ಎಸೆತದಲ್ಲಿ ಧವನ್‌ಗೆ ಕ್ಯಾಚ್ ನೀಡಿ ಹೊರ ನಡೆದರು. ನಂತರ ಬಂದ ಡಸ್ಕೆಟ್ ಕೇವಲ 1 ರನ್‌ಗಳಿಸಿ ಅಮಿತ್ ಮಿಶ್ರಾಗೆ ವಿಕೆಟ್ ಒಪ್ಪಿಸಿದರು. ನಂತರ ಬಂದ ದೋಗ್ರಾ 5 ರನ್‌ಗಳಿಸಿ ಸ್ಟೇಯ್ನ್‌ಗೆ ಕ್ಯಾಚ್ ನೀಡಿದರು. ಅಂತಿಮವಾಗಿ ಉತ್ತಮ ಬ್ಯಾಟಿಂಗ್ ನಡೆಸಿದ ಪಠಾಣ್ 29 ಎಸೆತಗಳಲ್ಲಿ ಅಜೇಯ 49 ರನ್‌ಗಳಿಸಿದರು.
ಈ ಮೊತ್ತವನ್ನು ಬೆನ್ನಟ್ಟಿದ ಸನ್‌ರೈಸರ್ಸ್ ತಂಡ ಉತ್ತಮ ಆರಂಭವನ್ನು ಪಡೆಯಿತು. ಆರಂಭಿಕರಾಗಿ ಕಣಕ್ಕಿಳಿದ ಪಾರ್ಥೀವ್ ಪಟೇಲ್ ಹಾಗೂ ಶಿಖರ್ ಧವನ್ 89 ರನ್‌ಗಳ ಜತೆಯಾಟ ನೀಡಿದರು. ಈ ವೇಳೆ 47 ರನ್‌ಗಳಿಸಿದ್ದ ಪಟೇಲ್, ಇಕ್ಬಾಲ್ ಎಸೆತದಲ್ಲಿ ಎಲ್‌ಬಿಡಬ್ಲ್ಯೂ ಆದರು. ನಂತರ ಧವನ್ ಕೂಡ ಇಕ್ಬಾಲ್ ಎಸೆತದಲ್ಲಿ ಎಲ್‌ಬಿಡಬ್ಲ್ಯೂ ಆದರು.
ಈ ವೇಳೆ ನಾಟಕೀಯ ತಿರುವು ಪಡೆದ ಪಂದ್ಯದಲ್ಲಿ ಸನ್‌ರೈಸರ್ಸ್ ತಂಡ ಇನ್ನು 3 ವಿಕೆಟ್‌ಗಳನ್ನು ಸತತವಾಗಿ ಕಳೆದುಕೊಂಡಿತು. ಅಂತಿಮ ಎರಡು ಓವರ್‌ಗಳಲ್ಲಿ 15 ರನ್ ಅಗತ್ಯವಿದ್ದಾಗ ಸಾಮಿ 2 ಸಿಕ್ಸರ್ ಬಾರಿಸಿ ತಂಡಕ್ಕೆ ಜಯ ತಂದುಕೊಟ್ಟರು.
ಸ್ಕೋರ್ ಬೋರ್ಡ್
ಕೋಲ್ಕತಾ ನೈಟ್‌ರೈಡರ್ಸ್: 130/7 (20 ಓವರ್)
ಬಿಸ್ಲಾ ಸಿ ವೈಟ್ ಬಿ ಪೆರೇರಾ 15(18), ಗಂಭೀರ್ ರನೌಟ್ (ಸಾಮಂತ್ರೆ/ಪಟೇಲ್) 10(17), ಕಾಲಿಸ್ ಸಿ ಧವನ್ ಬಿ ಸ್ಟೇಯ್ನ್ 24(29), ಮಾರ್ಗನ್ ಎಲ್‌ಬಿಡಬ್ಲ್ಯೂ ಬಿ ಕರಣ್ 9(9), ಯೂಸುಫ್ , ಡಸ್ಕೆಟ್ ಎಲ್‌ಬಿಡಬ್ಲ್ಯೂ ಬಿ ಮಿಶ್ರಾ 1(5), ದೋಗ್ರಾ ಸಿ ಪೆರೇರಾ ಬಿ ಸ್ಟೇಯ್ನ್ 5(8), ನಾರಾಯಣ್ ಸಿ ಪೆರೇರಾ ಬಿ ಆನಂದ್ 1(2), ಇಕ್ಬಾಲ್ ಅಜೇಯ 2(3), ಇತರೆ 14
ವಿಕೆಟ್ ಪತನ: 1-25, 2-42, 3-59, 4-89, 5-95, 6-111, 7-121
ಬೌಲಿಂಗ್: ಸ್ಟೇಯ್ನ್ 4-0-24-2, ಆನಂದ್ 4-0-22-1, ಪೆರೇರಾ 4-0-33-1, ಸಾಮಿ 1-0-9-0, ಮಿಶ್ರಾ 4-0-20-1, ಕರಣ್ 3-0-15-1.
ಸನ್‌ರೈಸರ್ಸ್ ಹೈದರಾಬಾದ್: 132/5 (18.5 ಓವರ್)
ಪಟೇಲ್ ಎಲ್‌ಬಿಡಬ್ಲ್ಯೂ ಬಿ ಇಕ್ಬಾಲ್ 47(37), ಧವನ್ ಎಲ್‌ಬಿಡಬ್ಲ್ಯೂ ಬಿ ಇಕ್ಬಾಲ್ 42(35), ವಿಹಾರಿ ಸಿ ದೋಗ್ರಾ ಬಿ ಇಕ್ಬಾಲ್ 6(13), ವೈಟ್ ರನೌಟ್ (ಮಾರ್ಗನ್/ಬಿಸ್ಲಾ) 2(4), ಪೆರೇರಾ ಬಿ ಶಮಿ 4(10), ಸಾಮಿ ಅಜೇಯ 17(12), ಸಾಮಂತ್ರೆ ಅಜೇಯ 5(2), ಇತರೆ 9
ವಿಕೆಟ್ ಪತನ: 1-89, 2-100, 3-103, 4-108, 5-112
ಬೌಲಿಂಗ್: ಯೂಸುಫ್ 4-0-29-0, ಸಾಗ್ವಾನ್ 2-0-17-0, ನಾರಾಯಣ್ 4-1-11-0, ಶಮಿ 4-0-32-1, ಕಾಲಿಸ್ 1-0-13-0, ಅಬ್ದುಲ್ಲಾ 3.5-0-29-3
ಪಂದ್ಯಶ್ರೇಷ್ಠ: ಪಾರ್ಥೀವ್ ಪಟೇಲ್