ಹೈದರಾಬಾದ್ಗೆ ಅಲ್ಪ ಗುರಿ ನೀಡಿದ ಕೆಕೆಆರ್
ಹೈದರಾಬಾದ್: ಸನ್ರೈಸರ್ಸ್ ಬೌಲರ್ಗಳ ಮಾರಕ ಬೌಲಿಂಗ್ಗೆ ಆರಂಭದಲ್ಲಿ ತತ್ತರಿಸಿ ಕೋಲ್ಕತಾ ನೈಟ್ರೈಡರ್ಸ್ ತಂಡದ ಬ್ಯಾಟ್ಸ್ಮನ್ಗಳು, ನಂತರ ಯೂಸೂಫ್ ಪಠಾಣ್ ಸ್ಫೋಟಕ ಬ್ಯಾಟಿಂಗ್ ನೆರವಿನಿಂದ 130ರನ್ ಕಲೆ ಹಾಕಿತು.
ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಲು ನಿರ್ಧರಿಸಿದ ಕೆಕೆಆರ್ ನಿಗದಿತ 20 ಓವರ್ಗಳಲ್ಲಿ 7 ವಿಕೆಟ್ ನಷ್ಟಕ್ಕೆ 130 ರನ್ಗಳಿಸಿತು. ಪತ್ರಿಕೆ ಮುದ್ರಣಕ್ಕೆ ಹೋಗುವ ಮುನ್ನ ಸನ್ರೈಸರ್ಸ್ ತಂಡದ ಇನಿಂಗ್ಸ್ ಆರಂಭವಾಗಿರಲಿಲ್ಲ.
ಸನ್ರೈಸರ್ಸ್ ಆಕ್ರಮಣಕಾರಿ ಬೌಲಿಂಗ್ಗೆ ರಕ್ಷಣಾತ್ಮಕ ಆಟಕ್ಕೆ ಮುಂದಾದ ಕೆಕೆಆರ್ ತಂಡದ ಆರಂಭಿಕರಾದ ಬಿಸ್ಲಾ ಹಾಗೂ ಗೌತಮ್ ಗಂಭೀರ್ ತಂಡಕ್ಕೆ 25 ರನ್ಗಳ ಜತೆಯಾಟ ನೀಡಿದರು. ಈ ವೇಳೆ 15 ರನ್ಗಳಿಸಿದ್ದ ಬಿಸ್ಲಾ ಪೆರೇರಾ ಎಸೆತದಲ್ಲಿ ವೈಟ್ಗೆ ಕ್ಯಾಚ್ ನೀಡಿದರು.
ನಂತರ 10 ರನ್ಗಳಿಸಿದ್ದ ಗಂಭೀರ್, ಸಾಮಂತ್ರೆ ಅವರ ಚುರುಕಿನ ಫೀಲ್ಡಿಂಗ್ಗೆ ರನೌಟ್ ಆದರು. ಈ ವೇಳೆ ಜತೆಯಾದ ಕಾಲಿಸ್ ಹಾಗೂ ಮಾರ್ಗನ್ ತಂಡವನ್ನು ಮೇಲೆತ್ತುವಲ್ಲಿ ವಿಫಲರಾದರು. 9 ಎಸೆತಗಳಲ್ಲಿ 9 ರನ್ಗಳಿಸಿದ್ದ ಮಾರ್ಗನ್, ಕರಣ್ ಎಸೆತದಲ್ಲಿ ಎಲ್ಬಿಡಬ್ಲ್ಯೂ ಬಲೆಗೆ ಬಿದ್ದರು. ನಂತರ ಬಂದ ಯೂಸುಫ್ ಪಠಾಣ್, ಕಾಲಿಸ್ ಜತೆಗೂಡಿ 30 ರನ್ಗಳ ಜತೆಯಾಟ ನೀಡಿದರು.
ಈ ವೇಳೆ 24 ರನ್ಗಳಿಸಿದ್ದ ಕಾಲಿಸ್, ಸ್ಟೇಯ್ನ್ ಎಸೆತದಲ್ಲಿ ಧವನ್ಗೆ ಕ್ಯಾಚ್ ನೀಡಿ ಹೊರ ನಡೆದರು. ನಂತರ ಬಂದ ಡಸ್ಕೆಟ್ ಕೇವಲ 1 ರನ್ಗಳಿಸಿ ಅಮಿತ್ ಮಿಶ್ರಾಗೆ ವಿಕೆಟ್ ಒಪ್ಪಿಸಿದರು. ನಂತರ ಬಂದ ದೋಗ್ರಾ 5 ರನ್ಗಳಿಸಿ ಸ್ಟೇಯ್ನ್ಗೆ ಕ್ಯಾಚ್ ನೀಡಿದರು. ಅಂತಿಮವಾಗಿ ಉತ್ತಮ ಬ್ಯಾಟಿಂಗ್ ನಡೆಸಿದ ಪಠಾಣ್ 29 ಎಸೆತಗಳಲ್ಲಿ ಅಜೇಯ 49 ರನ್ಗಳಿಸಿದರು.
ಸ್ಕೋರ್ ಬೋರ್ಡ್
ಕೋಲ್ಕತಾ ನೈಟ್ರೈಡರ್ಸ್ 130/7 (20 ಓವರ್)
ಬಿಸ್ಲಾ ಸಿ ವೈಟ್ ಬಿ ಪೆರೇರಾ 15(18), ಗಂಭೀರ್ ರನೌಟ್ (ಸಾಮಂತ್ರೆ/ಪಟೇಲ್) 10(17), ಕಾಲಿಸ್ ಸಿ ಧವನ್ ಬಿ ಸ್ಟೇಯ್ನ್ 24(29), ಮಾರ್ಗನ್ ಎಲ್ಬಿಡಬ್ಲ್ಯೂ ಬಿ ಕರಣ್ 9(9), ಯೂಸುಫ್ , ಡಸ್ಕೆಟ್ ಎಲ್ಬಿಡಬ್ಲ್ಯೂ ಬಿ ಮಿಶ್ರಾ 1(5), ದೋಗ್ರಾ ಸಿ ಪೆರೇರಾ ಬಿ ಸ್ಟೇಯ್ನ್ 5(8), ನಾರಾಯಣ್ ಸಿ ಪೆರೇರಾ ಬಿ ಆನಂದ್ 1(2), ಇಕ್ಬಾಲ್ ಅಜೇಯ 2(3), ಇತರೆ 14
ವಿಕೆಟ್ ಪತನ: 1-25, 2-42, 3-59, 4-89, 5-95, 6-111, 7-121
ಬೌಲಿಂಗ್: ಸ್ಟೇಯ್ನ್ 4-0-24-2, ಆನಂದ್ 4-0-22-1, ಪೆರೇರಾ 4-0-33-1, ಸಾಮಿ 1-0-9-0, ಮಿಶ್ರಾ 4-0-20-1, ಕರಣ್ 3-0-15-1