ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕ್ರೀಡೆ

ಬೆಳ್ಳಿಗೆ ತೃಪ್ತಿಪಟ್ಟ ನ್ಯಾನೋ, ದಿಲ್ಬಾಗ್ ಸಿಂಗ್

Srinivasa Murthy VN
Updated On : 21 May 2013, 11:55 am

ನವದೆಹಲಿ: ಭಾರತದ ಥೊಕ್ಕಮ್ ನ್ಯಾನೋ ಸಿಂಗ್ (49ಕೆಜಿ) ಮತ್ತು ದಿಲ್ಬಾಗ್ ಸಿಂಗ್ (69ಕೆಜಿ) ಅವರು ರಷ್ಯಾದಲ್ಲಿ ನಡೆದ ಅಂತಾರಾಷ್ಟ್ರೀಯ ಬಾಕ್ಸಿಂಗ್‌ನ ಫೈನಲ್ ಪಂದ್ಯದಲ್ಲಿ ಸೋಲುವ ಮೂಲಕ ಕಂಚಿನ ಪದಕಕ್ಕೆ ತೃಪ್ತಿಪಟ್ಟಿದ್ದಾರೆ. ಇದರೊಂದಿಗೆ ಭಾರತ ಪಂದ್ಯಾವಳಿಯಲ್ಲಿ ಒಟ್ಟು 5 ಪದಕಗಳನ್ನು ಪಡೆಯಿತು. ನ್ಯಾನೋ ಫೈನಲ್‌ನಲ್ಲಿ ಸ್ಥಳೀಯ ಆಟಗಾರ ಸಾಗಾಲೋ ಬಾತೋರ್ ವಿರುದ್ಧ 8-12 ಅಂತರದಿಂದ ಸೋಲನುಭವನಿಸಿದರೆ, ದಿಲ್ಬಾಗ್ ಸಿಂಗ್ ಅವರು ಕಜಕಸ್ತಾನದ ಕೊಝಾಬೆಕೋವ್ ಬಾಕಿತ್ಝಾನ್ ವಿರುದ್ಧ 3-9 ಅಂತರದಿಂದ ಸೋಲನುಭವಿಸಿದರು. ನ್ಯಾನೋ ಸಿಂಗ್ ಆಕರ್ಷಕ ಹೋರಾಟದ ಮಧ್ಯೆಯೂ ಸೋಲನುಭವಿಸಿದರು. ಆದರೆ, ದಿಲ್ಬಾಗ್ ಸಿಂಗ್ ಹೆಚ್ಚು ಅಂತರದಿಂದ ಕೈಚೆಲ್ಲಿದರು.ಇದಕ್ಕೂ ಮುನ್ನ ಸುನಿಲ್ ಕುಮಾರ್ (52ಕೆಜಿ), ಶಿವ ಥಾಪ (56ಕೆಜಿ) ಹಾಗೂ ಸತೀಶ್ ಕುಮಾರ್ (91ಕೆಜಿ) ಪಂದ್ಯಾವಳಿಯ ಸೆಮಿಫೈನಲ್ಲಿ ಕೈಚೆಲ್ಲುವ ಮೂಲಕ ಕಂಚಿನ ಪದಕ ಪಡೆದರು.
ಸಿಪ್ರಸ್‌ನಲ್ಲಿ 10 ಪದಕ: ಸಿಪ್ರಸ್‌ನ ಲಿಮಾಸ್ಸೋಲ್‌ನಲ್ಲಿ ನಡೆದ ಅಂತಾರಾಷ್ಟ್ರೀಯ ಆಹ್ವಾನಿತ ಬಾಕ್ಸಿಂಗ್ ಪಂದ್ಯಾವಳಿಯಲ್ಲಿ ಭಾರತದ ಬಾಕ್ಸರ್‌ಗಳು 4 ಚಿನ್ನದ ಪದಕ ಸೇರಿದಂತೆ ಒಟ್ಟು 10 ಪದಕಗಳನ್ನು ಗೆದ್ದುಕೊಂಡಿದ್ದಾರೆ. ಮದನ್ ಲಾಲ್ (52ಕೆಜಿ), ದುರ್ಗಾರ್ ರಾವ್ (56ಕೆಜಿ), ಮಂದೀಪ್ ಸಿಂಗ್ (69ಕೆಜಿ) ಹಾಗೂ ಪ್ರವೀಣ್ ಕುಮಾರ್ (91ಕೆಜಿ) ಚಿನ್ನದ ಪದಕ ಗೆದ್ದರೆ, ಮನೋಜ್ ಕುಮಾರ್ (64ಕೆಜಿ), ದಿನೇಶ್ ಕುಮಾರ್ (91ಕೆಜಿ) ಹಾಗೂ ಸುಖದೀಪ್ ಸಿಂಗ್ (75ಕೆಜಿ) ಬೆಳ್ಳಿಗೆ ತೃಪ್ತಿಪಟ್ಟರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement