ಮುದ್ರಣಾಲಯಕ್ಕೆ ಜಯ
ಬೆಂಗಳೂರು: ನಗರದ ಫುಟ್ಬಾಲ್ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಬಿ ಡಿವಿಷನ್ ಫುಟ್ಬಾಲ್ ಪಂದ್ಯಾವಳಿಯಲ್ಲಿ ಸರ್ಕಾರಿ ಮುದ್ರಣಾಲಯ ತಂಡವು ಭಾರತೀಯ ರಿಸರ್ವ್ ಬ್ಯಾಂಕ್ ತಂಡದ ವಿರುದ್ಧ 4-1 ಅಂತರದಲ್ಲಿ ಜಯ ಸಾಧಿಸಿದೆ. ಸರ್ಕಾರಿ ಮುದ್ರಣಾಲಯ ತಂಡದ ಪರ ರಾಜು 12ನೇ ಹಾಗೂ 52ನೇ ನಿಮಿಷದಲ್ಲಿ ಗೋಲು ದಾಖಲಿಸಿದರೆ, ಕಿರಣ್ 36 ಮತ್ತು ಪ್ರಸಾದ್ 48ನೇ ನಿಮಿಷದಲ್ಲಿ ಗೋಲು ದಾಖಲಿಸಿದರು. ಇನ್ನು ಭಾರತೀಯ ರಿಸರ್ವ್ ಬ್ಯಾಂಕ್ ತಂಡದ ಪರ ರಾಕೇಶ್ 2ನೇ ನಿಮಿಷದಲ್ಲಿ ಗೋಲು ದಾಖಲಿಸಿದರು. ಇನ್ನು ದಿನದ ಮತ್ತೊಂದು ಪಂದ್ಯದಲ್ಲಿ ಶ್ರೀಗಜಾನನ ತಂಡವು ಓರಿಯೆಂಟಲ್ ತಂಡದ ವಿರುದ್ಧ 0-1 ಅಂತರದಲ್ಲಿ ಮುಖಭಂಗ ಅನುಭಸಿದರು.
ಆದಿಲ್, ಪ್ರಣವ್ ದ್ವಿತೀಯ ಸುತ್ತಿಗೆ
ಬೆಂಗಳೂರು: ಕರ್ನಾಟಕದ ಆದಿಲ್ ಕಲ್ಯಾಣಪುರ ಮತ್ತು ಸಾಯಿ ಪ್ರಣವ್ ಪೊನಾಕ್ ನಗರದಲ್ಲಿ ನಡೆಯತ್ತಿರುವ ಏಷ್ಯನ್ ರ್ಯಾಂಕಿಂಗ್ ಜೂನಿಯರ್ ಟೆನಿಸ್ ಪಂದ್ಯಾವಳಿಯ ಬಾಲಕರ ಸಿಂಗಲ್ಸ್ನ ಪ್ರಧಾನ ಸುತ್ತಿನ ಮೊದಲ ಪಂದ್ಯದಲ್ಲಿ ಜಯ ಸಾಧಿಸಿದ್ದಾರೆ.2ನೇ ಶ್ರೇಯಾಂಕ ಪಡೆದಿರುವ ಕಲ್ಯಾಣಪುರ ತಮ್ಮ ಎದುರಾಳಿ ರೋನಿತ್ ರಾಣಾ ಅವರನ್ನು 6-0, 6-1 ಸೆಟ್ಗಳಿಂದ ಪರಾಭವಗೊಳಿಸಿದರು. ಇನ್ನು 3ನೇ ಶ್ರೇಯಾಂಕ ಪಡೆದಿರುವ ಪ್ರಣವ್ ಆಂಧ್ರಪ್ರದೇಶದ ಸಾಯಿ ಕಾರ್ತೀಕ್ ಗುಂಟಾ ಅವರನ್ನು 6-1, 6-3 ಸೆಟ್ಗಳಿಂದ ಸೋಲಿಸಿ ದ್ವಿತೀಯ ಸುತ್ತಿಗೆ ಪ್ರವೇಶಿಸಿದರು.ಆದರೆ, ಕರ್ನಾಟಕದ ಇನ್ನೊಬ್ಬ ಆಟಗಾರ ಸಿ.ಎಚ್ ಅರ್ಜುನ್ ಅವರು ದುರ್ಗಾ ಹಿಮ್ಮಕೇಶ್ ವಿರುದ್ಧ 4-6, -2, 1-6 ಸೆಟ್ಗಳಿಂದ ಸೋಲುವ ಮುನ್ನ ಬಲಿಷ್ಠ ಹೋರಾಟ ನಡೆಸಿದರು. ಅಗ್ರ ಶ್ರೇಯಾಂಕ ಪಡೆದಿರುವ ಮಹಾರಾಷ್ಟ್ರದ ಸಿದ್ಧಾಂತ್ ಜಗದೀಶ್ ಬಾಂಥಿಯಾ ಮತ್ತು 4ನೇ ಶ್ರೇಯಾಂಕ ಪಡೆದಿರುವ ಮೇಘಾ ಪಟೇಲ್ ಸಹ ಸುಲಭವಾಗಿ ಜಯ ಕಾಣುವ ಮೂಲಕ ದ್ವಿತೀಯ ಸುತ್ತಿಗೆ ಹೆಜ್ಜೆ ಹಾಕಿದರು.ಬಾಲಕೀಯರ ವಿಭಾಗದಲ್ಲಿ ಅಗ್ರ ಶ್ರೇಯಾಂಕ ಪಡೆದಿರುವ ರಾಜ್ಯದ ತನ್ವಿ ಭಟ್ ಅವರು ಮಿರ್ಸಿಯಾ ಜೈಸ್ವಾಲ್ ಅವರನ್ನು 6-0, 6-0 ನೇರ ಸೆಟ್ಗಳಿಂದ ಸೋಲಿಸು ದ್ವಿತೀಯ ಸುತ್ತಿಗೆ ಪ್ರವೇಶಿಸಿದರು. ಇನ್ನೊಬ್ಬ ಸ್ಥಳೀಯ ಆಟಗಾರ್ತಿ ಸಿವಾನಿ ಮಂಜಣ್ಣಾ ಅವರು ಪ್ರಕ್ರಿತಿ ಭನ್ವಾನಿ ಅವರನ್ನು 6-2, 6-3 ಪರಾಭವಗೊಳಿಸಿದರು.