ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕ್ರೀಡೆ

ಎಸ್-36 ಕಂಪನಿಯ 420 ಐಡಿಯಾ?

ಸ್ಪಾಟ್ ಫಿಕ್ಸಿಂಗ್ ಹಗರಣದಲ್ಲಿ ತನ್ನದೇನೂ ಪಾತ್ರವಿಲ್ಲವೆಂದು ಬೌಲರ್ ಶ್ರೀಶಾಂತ್ ಹೇಳಿಕೊಳ್ಳುತ್ತಿದ್ದರೂ,...

Srinivasa Murthy VN
Updated On : 23 May 2013, 11:55 am

ನವದೆಹಲಿ: ಸ್ಪಾಟ್ ಫಿಕ್ಸಿಂಗ್ ಹಗರಣದಲ್ಲಿ ತನ್ನದೇನೂ ಪಾತ್ರವಿಲ್ಲವೆಂದು ಬೌಲರ್ ಶ್ರೀಶಾಂತ್ ಹೇಳಿಕೊಳ್ಳುತ್ತಿದ್ದರೂ, ಪ್ರಕರಣದಲ್ಲಿ ಅವರ ಪಾತ್ರವಿರುವುದು ಅವರೇ ಸ್ಥಾಪಿಸಿರುವ ಸಂಸ್ಥೆಯೊಂದರ ಉದ್ದೇಶಗಳು ಮನದಟ್ಟು ಮಾಡಿವೆ ಎಂದು ಕೆಲ ವರದಿಗಳು ಹೇಳಿವೆ.
ಶ್ರೀಶಾಂತ್ ಅವರು 'ಎಸ್ 36 ಸ್ಪೋರ್ಟ್ಸ್ ಅಂಡ್ ಎಂಟರ್‌ಟೈನ್‌ಮೆಂಟ್ ಪ್ರೈವೇಟ್ ಲಿಮಿಟೆಡ್‌' ಎಂಬ ಸಂಸ್ಥೆಯನ್ನು ಇತ್ತೀಚಿನ ವರ್ಷಗಳಲ್ಲಿ ಹುಟ್ಟುಹಾಕಿದ್ದಾರೆ. ಕಂಪನಿಯಲ್ಲಿ ಶೇ. 74ರಷ್ಟು ಷೇರು ಹೊಂದಿರುವ ಶ್ರೀಶಾಂತ್, ಕಂಪನಿಯನ್ನು 'ರಿಜಿಸ್ಟ್ರಾರ್ ಆಫ್ ಕಂಪನೀಸ್‌'ನಲ್ಲಿ ನೋಂದಾಯಿಸುವಾಗ ತಮ್ಮ ಸಂಸ್ಥೆಯ ಕೆಲ ಧ್ಯೋಯೋದ್ದೇಶಗಳ ಬಗ್ಗೆ ವಿವರಿಸಿದ್ದಾರೆ. ಅದರ ದಾಖಲೆಗಳು ಲಭ್ಯವಾಗಿದ್ದು, ಅವುಗಳಲ್ಲಿ, ತಮ್ಮ ಕಂಪನಿಯು 'ಭಾರತ ಮತ್ತು/ಅಥವಾ ವಿದೇಶಗಳಲ್ಲಿ ಕ್ರೀಡಾ ತರಬೇತಿ ಕೇಂದ್ರಗಳು, ಜಿಮ್ನೇಷಿಯಂಗಳು, ಹೆಲ್ತ್ ಕ್ಲಬ್‌ಗಳು, ಫಿಟ್ನೆಸ್ ಕೇಂದ್ರಗಳು, ಬೆಟ್ಟಿಂಗ್ ಕೇಂದ್ರಗಳು, ಒಳಾಂಗಣ ಕ್ರೀಡಾಂಗಣಗಳು, ಕ್ರೀಡೆಗಳಿಗಾಗಿ ಫಿಸಿಯೋ ಥೆರಪಿ ಕೇಂದ್ರಗಳು, ಸ್ಪೋರ್ಟ್ಸ್ ಬಾರ್‌ಗಳನ್ನು ತೆರೆಯುವ ಉದ್ದೇಶಗಳನ್ನು ಹೊಂದಿದೆ' ಎಂದು ಶ್ರೀಶಾಂತ್ ಹೇಳಿದ್ದಾರೆ. ಇದರಲ್ಲಿ ಬೆಟ್ಟಿಂಗ್ ಕೇಂದ್ರಗಳನ್ನು ತೆರೆಯುವ ಉದ್ದೇಶ ಈಗ ಎಲ್ಲರ ಗಮನ ಸೆಳೆದಿದೆ.
ಶಿಷ್ಯನ ಬೆಂಬಲಕ್ಕೆ ನಿಂತ ಗುರು: ಆದರೆ, ಶ್ರೀಶಾಂತ್ ಮೇಲೆ ಬಂದಿರುವ ಹೊಸ ಆರೋಪವನ್ನು ಹಿಂದೆ ಅವರ ಕ್ರಿಕೆಟ್ ಗುರುವಾಗಿದ್ದ ಪಿ. ಶಿವಕುಮಾರ್ ತಳ್ಳಿಹಾಕಿದ್ದಾರೆ. ಕಂಪನಿಯೊಂದು ಹೊಸದಾಗಿ ನೋಂದಾವಣೆ ಮಾಡಿಕೊಳ್ಳಬೇಕಾದರೆ, ಅದಕ್ಕೆ ಪೂರಕವಾಗಿ ಇಂಥಾ ಕೆಲವು ಧ್ಯೇಯೋದ್ದೇಶಗಳನ್ನು ಹೆಸರಿಸಬೇಕಾಗುತ್ತದೆ. ಆದರೆ, ಇದನ್ನೇ ಆಧಾರವಾಗಿಟ್ಟುಕೊಂಡು ಶ್ರೀಶಾಂತ್ ತಪ್ಪಿತಸ್ಥ ಎಂದು ಹೇಳುವುದು ಸರಿಯಲ್ಲ ಎಂದು ಅವರು ಹೇಳಿದ್ದಾರೆ.
ಅಂದಹಾಗೆ, ಪಿ. ಶಿವಕುಮಾರ್ ಅವರು ಎಸ್ 36 ಸಂಸ್ಥೆಯಲ್ಲಿ ಶೇ. 24ರಷ್ಟು ಷೇರು ಹೊಂದಿದ್ದಾರೆ. 2012ರವರೆಗೂ ಆ ಸಂಸ್ಥೆಯ ನಿರ್ದೇಶಕರಾಗಿ ಕಾರ್ಯ ನಿರ್ವಹಿಸಿದ್ದಾರೆ. ಹೀಗಾಗಿ, ಅವರು ತಮ್ಮ ಶಿಷ್ಯನ ಬೆಂಬಲಕ್ಕೆ ನಿಂತಿರುವುದು ಸಹಜ ಎನ್ನಲಾಗಿದೆ.

ದೆಹಲಿ ಪೊಲೀಸ್ ಯು ಟರ್ನ್ ?
ನವದೆಹಲಿ:
ಸ್ಪಾಟ್ ಫಿಕ್ಸಿಂಗ್ ಪ್ರಕರಣದಲ್ಲಿ ಮುಂಬೈ ಪೊಲೀಸರಿಂದ ಬಂಧನಕ್ಕೊಳಗಾಗಿರುವ ಬುಕ್ಕಿ ರಮೇಶ್ ವ್ಯಾಸ್ ಮತ್ತು ವಿಂದು ದಾರಾ ಸಿಂಗ್ ನಡುವೆ ನೇರ ಸಂಪರ್ಕವಿಲ್ಲ ಎಂದು ದೆಹಲಿ ಪೊಲೀಸರು ತಿಳಿಸಿದ್ದಾರೆ.
ಮುಂಬೈ ಪೊಲೀಸರು ವ್ಯಾಸ್ ಹಾಗೂ ವಿಂದು ಅವರನ್ನು ಬಂಧಿಸಿದ್ದು, ವ್ಯಾಸ್ ಜತೆಗೆ ವಿಂದು ನೇರ ಸಂಪರ್ಕವನ್ನು ಹೊಂದಿಲ್ಲ. ಹಾಗೆಯೇ ದೆಹಲಿ ಪೊಲೀಸರು 3 ಆಟಗಾರರು ಸೇರಿದಂತೆ 18 ಮಂದಿಯನ್ನು ಬಂಧಿಸಿರುವ ಪ್ರಕರಣದಲ್ಲಿ ಮುಂಬೈ ಪೊಲೀಸರ ಕ್ರಮ ಕೈಗೊಳ್ಳಲು ಸಾಧ್ಯವಿಲ್ಲ ಎಂದು ದೆಹಲಿ ವಿಶೇಷ ಘಟಕದ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement