ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕ್ರೀಡೆ

ಐ-ಲೀಗ್‌ಗೆ ನಾಲ್ಕುಹೊಸ ತಂಡಗಳು

Srinivasa Murthy VN
Updated On : 24 May 2013, 10:58 am

ಮುಂಬೈ: ಮುಂದಿನ ಐ- ಲೀಗ್ ಪಂದ್ಯಾವಳಿಯಲ್ಲಿ ನಾಲ್ಕು ಹೊಸ ತಂಡಗಳನ್ನು ಸೇರ್ಪಡೆಗೊಳಿಸಲಾಗುವುದು ಎಂದು ಭಾರತೀಯ ಫುಟ್ಬಾಲ್ ಸಂಸ್ಥೆ (ಎಐಎಫ್‌ಎಫ್) ತಿಳಿಸಿದೆ. ಪಂದ್ಯಾವಳಿಯಲ್ಲಿ ಮತ್ತಷ್ಟು ಸ್ಪರ್ಧಾ ಮನೋಭಾವವನ್ನು ತರಲು ಹಾಗೂ ಆಟಗಾರರಿಗೆ ನೀಡಲಾಗುವ ಸಂಭಾವನೆಯಲ್ಲೂ ಹೆಚ್ಚಳ ಮಾಡಲು ಈ ಕ್ರಮಕ್ಕೆ ಮುಂದಾಗಿರುವುದಾಗಿ ಎಐಎಫ್‌ಎಫ್ ತಿಳಿಸಿದೆ.  ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, 'ತಂಡಗಳ ಸಂಖ್ಯೆ ಹೆಚ್ಚಾಗುವುದರಿಂದ ಪಂದ್ಯಾವಳಿಯಲ್ಲಿ ಮತ್ತಷ್ಟು ಪೈಪೋಟಿಯನ್ನು ನಿರೀಕ್ಷಿಸಬಹುದು. ಇದಲ್ಲದೇ, ಪ್ರತಿಭಾನ್ವಿತ ಆಟಗಾರರಿಗೆ ಸಂಭಾವನೆಯಲ್ಲಿ ಹೆಚ್ಚಳ ಹಾಗೂ ಪುರಸ್ಕಾರ ನೀಡಲೂ ಇದರಿಂದ ಅನುಕೂಲವಾಗಲಿದೆ' ಎಂದು ಅವರು ತಿಳಿಸಿದರು.

ಮೇ 28ರಿಂದ ರಾಷ್ಟ್ರೀಯ ಹಾಕಿ
ಪುಣೆ:
3ನೇ ಹಾಕಿ ಇಂಡಿಯಾದ ರಾಷ್ಟ್ರೀಯ ಪುರುಷರ ಹಾಕಿ ಚಾಂಪಿಯನ್‌ಷಿಪ್ ಪಂದ್ಯಾವಳಿಯು ಮೇ 28 ರಿಂದ ಜೂನ್ 10ರ ವರೆಗೆ ಇಲ್ಲಿನ ಶಿವ ಚತ್ರಪತಿ ಕ್ರೀಡಾ ಸಂಕೀರ್ಣ ಹಾಗೂ ಮೇಜರ್ ಧ್ಯಾನ್‌ಚಂದ್ ಹಾಕಿ ಕ್ರೀಡಾಂಗಣದಲ್ಲಿ ನಡೆಯಲಿದೆ. ಈ ಪಂದ್ಯಾವಳಿಯಲ್ಲಿ 37 ತಂಡಗಳು ಭಾಗವಹಿಸುತ್ತಿದ್ದು, ಈ ತಂಡಗಳನ್ನು 8 ಗುಂಪುಗಳನ್ನಾಗಿ ವಿಂಗಡಿಸಿಲಾಗುವುದು. ಈ ಎಲ್ಲಾ ಗುಂಪುಗಳಲ್ಲೂ ಅಗ್ರ 2 ಸ್ಥಾನಗಳನ್ನು ಗಳಿಸುವ ತಂಡಗಳು ಪಂದ್ಯಾವಳಿಯ ಕ್ವಾರ್ಟರ್ ಫೈನಲ್ಸ್‌ನಲ್ಲಿ ಆಡಲಿವೆ ಎಂದು ಆಯೋಜನಾ ಕಾರ್ಯದರ್ಶಿ ಹಾಗೂ ಹಾಕಿ ಇಂಡಿಯಾದ ಜಂಟಿ ಕಾರ್ಯದರ್ಶಿ ಮನೋಜ್ ಭೋರೆ ತಿಳಿಸಿದ್ದಾರೆ.

ತ್ರಿಕೋನ ಸರಣಿಗೆ ಭಾರತ ಯು-19 ತಂಡ
ಮೆಲ್ಬರ್ನ್:
ಆಸ್ಟ್ರೇಲಿಯಾದಲ್ಲಿ ನಡೆಯಲಿರುವ ತ್ರಿಕೋನ ಸರಣಿಯಲ್ಲಿ ಭಾರತದ ಯು-19 ತಂಡ ಪಾಲ್ಗೊಳ್ಳಲಿದೆ. ಜೂ. 30ರಿಂದ ಆರಂಭಗೊಳ್ಳುವ ಸರಣಿಯಲ್ಲಿ, ಭಾರತದೊಂದಿಗೆ ಆಸ್ಟ್ರೇಲಿಯಾ ಹಾಗೂ ನ್ಯೂಜಿಲೆಂಡ್ ತಂಡಗಳು ಸರಣಿಯಲ್ಲಿ ಭಾಗವಹಿಸಲಿವೆ. ಈ ಬಗ್ಗೆ ಅಧಿಕೃತ ಪ್ರಕಟಣೆ ನೀಡಿರುವ ಆಸ್ಟ್ರೇಲಿಯಾ ಕ್ರಿಕೆಟ್ ಮಂಡಳಿ (ಸಿಎ), ಸರಣಿಯಲ್ಲಿ ಪಾಲ್ಗೊಳ್ಳಲಿರುವ ತಂಡಗಳು ಪಪುಟ ನ್ಯೂ ಜಿನಿಯಾ ತಂಡದ ವಿರುದ್ಧ ಸ್ನೇಹಪರ ಪಂದ್ಯಗಳನ್ನಾಡಲಿವೆ. ಮರ್ರಾರಾ ಓವಲ್, ಗಾರ್ಡನ್ಸ್ ಓವಲ್ ಹಾಗೂ ಟ್ರೇಸಿ ವಿಲೇಜ್‌ನಲ್ಲಿ ಸರಣಿಯ ಪಂದ್ಯಗಳು ನಡೆಯಲಿವೆ ಎಂದು ಸಂಸ್ಥೆ ಹೇಳಿದೆ.  ಮುಂದಿನ ವರ್ಷ ನಡೆಯಲಿರುವ ಐಸಿಸಿ ಅಂಡರ್-19 ವಿಶ್ವಕಪ್‌ಗಾಗಿ ಜುಲೈನಲ್ಲಿ ನಡೆಯಲಿರುವ ಅರ್ಹತಾ ಸುತ್ತಿನ ಪಂದ್ಯಾವಳಿಯಲ್ಲಿ ಪಪುಟ ನ್ಯೂಜಿನಿಯಾ ತಂಡ ಪಾಲ್ಗೊಳ್ಳುತ್ತಿದೆ. ಈ ಹಿನ್ನೆಲೆಯಲ್ಲಿ, ಆ ತಂಡದ ಅಭ್ಯಾಸಕ್ಕಾಗಿ ತ್ರಿಕೋನ ಸರಣಿಯಲ್ಲಿ ಪಾಲ್ಗೊಳ್ಳಲಿರುವ ತಂಡಗಳ ಜೊತೆ ಸ್ನೇಹಪರ ಪಂದ್ಯಗಳನ್ನು ಆಯೋಜಿಸಲಾಗಿದೆ ಎಂದು ಸಿಎ ಹೇಳಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement