ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕ್ರೀಡೆ

ಟೇಬಲ್ ಟೆನಿಸ್: ಬಾತ್ರಾಗೆ ಬೆಳ್ಳಿ ಪದಕ

Srinivasa Murthy VN
Updated On : 25 May 2013, 11:49 am

ನವದೆಹಲಿ: ಭಾರತದ ಭರವಸೆಯ ಟೇಬಲ್ ಟೆನಿಸ್‌ಪಟು ಮನಿಕಾ ಬಾತ್ರಾ, ಇಲ್ಲಿ ನಡೆಯುತ್ತಿರುವ ಐಐಟಿಎಫ್ ಪೊಲೆಂಡ್ ಜೂನಿಯರ್ ಮತ್ತು ಕ್ಯಾಡೆಟ್ ಓಪನ್‌ನಲ್ಲಿ ಬೆಳ್ಳಿ ಪದಕ ಪಡೆದಿದ್ದಾರೆ.ಉತ್ತಮ ಹೋರಾಟದ ನಡುವೆಯೂ ಮನಿಕಾ ಫೈನಲ್ ಪಂದ್ಯದಲ್ಲಿ ಜಪಾನ್‌ನ ಅಗ್ರ ಶ್ರೇಯಾಂಕಿತ ಮಿಯೂ ಕಾಟೊ ವಿರುದ್ಧ 9-11 11-7 11-7 7-11 6-11 11-7 8-11 ಸೋಲನುಭವಿಸಿದರು. ಇನ್ನು ಬಾಲಕಿಯರ ಡಬಲ್ಸ್ ವಿಭಾಗದ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಭಾರತದ ಬಾತ್ರಾ ಹಾಗೂ ಸುತೀರ್ಥ ಮುಖರ್ಜಿ ಜೋಡಿಯು ಜಪಾನ್ ಜೋಡಿಯಾದ ಕಾಟೊ ಹಾಗೂ ಯೂ ಹಮಮಾಟೊ ವಿರುದ್ಧ 2-3 ಅಂತರದಲ್ಲಿ ಸೋಲನುಭವಿಸಿತು. 17 ವರ್ಷದ ಭಾರತದ ಮೋನಿಕಾ ಈ ಮೊದಲು ನಡೆದ ಪಂದ್ಯದಲ್ಲಿ ಜಪಾನ್‌ನ ಅಯನಾ ಮೋರಿತಾ ಅವರನ್ನು  ಸೋಲಿಸಿದ್ದರು.
ಬಾಲಕಿಯರ ಡಬಲ್ಸ್ ವಿಭಾಗದ ಕ್ವಾರ್ಟರ್‌ಫೈನಲ್ ಪಂದ್ಯದಲ್ಲಿ ಭಾರತದ ಬಾತ್ರಾ ಮತ್ತು ಸುತಿರ್ಥಾ ಮುಖರ್ಜಿ ಜೋಡಿ ಜಪಾನ್‌ನ ಕಾಟೋ ಮತ್ತು ಹಮಾಮತೋ ವಿರುದ್ಧ ಸೋಲನುಭವಿಸಿತು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement