ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕ್ರೀಡೆ

ಪ್ರಾಯೋಜಕತ್ವದಿಂದ ಪೆಪ್ಸಿ ಹಿಂದೆ ಸರಿಯುವುದಿಲ್ಲ

Srinivasa Murthy VN
Updated On : 25 May 2013, 11:50 am

ಮುಂಬೈ: ಇಂಡಿಯನ್ ಪ್ರೀಮಿಯರ್ ಲೀಗ್ ಸ್ಪಾಟ್ ಫಿಕ್ಸಿಂಗ್‌ನಲ್ಲಿ ಸಿಲುಕಿಕೊಂಡು ನರಳುತ್ತಿರುವ ಹಿನ್ನೆಲೆಯಲ್ಲಿ ಪಂದ್ಯಾವಳಿಯ ಪ್ರಾಯೋಜಕತ್ವ ವಹಿಸಿಕೊಂಡಿರುವ ಪೆಪ್ಸಿ ಕಂಪನಿ ಹಿಂದೆ ಸರಿಯಲಿದೆ ಎಂದು ವರದಿಯಾಗಿತ್ತು. ಆದರೆ, ಇಂತ ವದಂತಿಗಳನ್ನು ಪೆಪ್ಸಿ ಕಂಪನಿ ಸಂಪೂರ್ಣವಾಗಿ ತಳ್ಳಿ ಹಾಕಿದೆ.
'ಪೆಪ್ಸಿ ಕಂಪನಿ ಐಪಿಎಲ್‌ನಿಂದ ಹೊರ ಹೋಗುತ್ತಿದೆ ಎಂಬ ವರದಿಗಳು ವದಂತಿಗಳು ಮಾತ್ರ. ವದಂತಿಗಳಿಗೆ ನಾವು ಪ್ರತಿಕ್ರಿಯೆ ನೀಡುವುದಿಲ್ಲ. ಈ ಕುರಿತು ಬಿಸಿಸಿಐಗೆ ನಾವು ಯಾವುದೇ ರೀತಿಯ ಸೂಚನೆ ನೀಡಿಲ್ಲ' ಎಂದು ಪೆಪ್ಸಿ ಕಂಪನಿ ಪ್ರಕಟಣೆ ತಿಳಿಸಿದೆ.
ಈ ಮೊದಲು ಐಪಿಎಲ್ ಪ್ರಾಯೋಜಕತ್ವ ವಹಿಸಿಕೊಂಡಿದ್ದ ಡಿಎಲ್‌ಎಫ್ ಕಂಪನಿ ನೀಡುತ್ತಿದ್ದ ಹಣಕ್ಕಿಂತ ಎರಡು ಪಟ್ಟು ಹಣ ನೀಡುತ್ತಿದೆಯಂತೆ. 2013ರಿಂದ ಐದು ವರ್ಷಗಳ ಕಾಲ ಪ್ರಯೋಜಕತ್ವ ವಹಿಸಿಕೊಂಡಿರುವ ಪೆಪ್ಸಿ ಕಂಪನಿ ರು. 396.8 ಕೋಟಿ ಹಣ ನೀಡಿದೆಯಂತೆ.
ಆದರೆ, ಈಗ ಸ್ಪಾಟ್ ಫಿಕ್ಸಿಂಗ್ ಪ್ರಕರಣದಿಂದ ಐಪಿಎಲ್ ಪಂದ್ಯಾವಳಿಯನ್ನು ಜನರು ನಕಾರಾತ್ಮಕವಾಗಿ ನೋಡುತ್ತಿರುವುದು ಕಂಪನಿಗೆ ಕೆಟ್ಟ ಹೆಸರು ಬರುವ ಬಗ್ಗೆ ಆತಂಕಗೊಂಡಿದೆಯಂತೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement