ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕ್ರೀಡೆ

ಫೈನಲ್‌ಗೆ ಮುಂಬೈ ಇಂಡಿಯನ್ಸ್

ಮುಂಬೈ ತಂಡ ರಾಜಸ್ಥಾನ ವಿರುದ್ಧ 4 ವಿಕೆಟ್‌ಗಳ ಜಯ ಗಳಿಸಿ ಫೈನಲ್ ಪ್ರವೇಶಿಸಿದೆ.

Srinivasa Murthy VN
Updated On : 25 May 2013, 11:48 am

ಕೋಲ್ಕತಾ: ಡ್ವೇನ್ ಸ್ಮಿತ್ ಹಾಗೂ ಆದಿತ್ಯ ತಾರೆ ಅವರ ಅರ್ಧಶತಕದ ಆರಂಭಿಕ ಜತೆಯಾಟದ ನೆರವಿನಿಂದ ಮುಂಬೈ ಇಂಡಿಯನ್ಸ್ ತಂಡ, ರಾಜಸ್ಥಾನ ರಾಯಲ್ಸ್ ತಂಡದ ವಿರುದ್ಧ 2ನೇ ಕ್ವಾಲಿಫೈಯರ್ ಪಂದ್ಯದಲ್ಲಿ 4 ವಿಕೆಟ್‌ಗಳ ಜಯ ಗಳಿಸಿ ಫೈನಲ್ ಪ್ರವೇಶಿಸಿದೆ.
ರಾಜಸ್ಥಾನ ನೀಡಿದ 166 ರನ್‌ಗಳ ಗುರಿಯನ್ನು ಬೆನ್ನಟ್ಟಿದ ಮುಂಬೈ ಇಂಡಿಯನ್ಸ್ ತಂಡ 19.5 ಓವರ್‌ಗಳಲ್ಲಿ 6 ವಿಕೆಟ್ ಕಳೆದುಕೊಂಡು ಗುರಿ ಮುಟ್ಟಿತು.
ಮುಂಬೈ ತಂಡದ ಪರ ಆರಂಭಿಕರಾಗಿ ಕಣಕ್ಕಿಳಿದಿದ್ದ ಡ್ವೇನ್ ಸ್ಮಿತ್ 62 ಹಾಗೂ ಆದಿತ್ಯ ತಾರೆ 35 ರನ್‌ಗಳಿಸುವ ಮೂಲಕ ತಂಡಕ್ಕೆ ಉತ್ತಮ ಆರಂಭ ನೀಡಿದರು. ಈ ವೇಳೆ 35 ರನ್‌ಗಳಿಸಿದ್ದ ತಾರೆ ಕೂಪರ್ ಎಸೆತದಲ್ಲಿ ಸ್ಯಾಮ್ಸನ್‌ಗೆ ಕ್ಯಾಚ್ ನೀಡಿ ತಮ್ಮ ಉತ್ತಮ ಇನಿಂಗ್ಸ್ ಅಂತ್ಯಗೊಳಿಸಿದರು. ನಂತರ ಬಂದ ದಿನೇಶ್ ಕಾರ್ತಿಕ್ 22 ರನ್‌ಗಳಿಸಿದರು.
ಮುಂಬೈ ತಂಡದ ಪರ ಆರಂಭಿಕರಾಗಿ ಕಣಕ್ಕಿಳಿದಿದ್ದ ಡ್ವೇನ್ ಸ್ಮಿತ್ ಅಜೇಯ 35 ಹಾಗೂ ಆದಿತ್ಯ ತಾರೆ 35 ರನ್‌ಗಳಿಸುವ ಮೂಲಕ ತಂಡಕ್ಕೆ ಉತ್ತಮ ಆರಂಭ ನೀಡಿದರು. ಈ ವೇಳೆ 35 ರನ್‌ಗಳಿಸಿದ್ದ ತಾರೆ ಕೂಪರ್ ಎಸೆತದಲ್ಲಿ ಸ್ಯಾಮ್ಸನ್‌ಗೆ ಕ್ಯಾಚ್ ನೀಡಿ ತಮ್ಮ ಉತ್ತಮ ಇನಿಂಗ್ಸ್ ಅಂತ್ಯಗೊಳಿಸಿದರು. ನಂತರ ಬಂದ ದಿನೇಶ್ ಕಾರ್ತಿಕ್ ಅಜೇಯ 1 ರನ್‌ಗಳಿಸಿದರು.
ಇದಕ್ಕೂ ಮುನ್ನ ಶುಕ್ರವಾರ ಸಂಜೆ ಧಾರಾಕಾರವಾಗಿ ಮಳೆ ಸುರಿದ ಹಿನ್ನಲೆಯಲ್ಲಿ ಪಂದ್ಯ 1 ಗಂಟೆ ತಡವಾಗಿ ಆರಂಭವಾಯಿತು. ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಲು ನಿರ್ಧರಿಸಿದ ರಾಜಸ್ಥಾನ ರಾಯಲ್ಸ್ ತಂಡ ನಿಗದಿತ 20 ಓವರ್‌ಗಳಲ್ಲಿ 6 ವಿಕೆಟ್ ನಷ್ಟಕ್ಕೆ 165ರನ್ ಕಲೆಹಾಕಿತು. ಆರಂಭಿಕರಾಗಿ ಕಣಕ್ಕಿಳಿದ ದ್ರಾವಿಡ್ ಹಾಗೂ ರಹಾನೆ ತಂಡಕ್ಕೆ 44 ರನ್‌ಗಳ ಜತೆಯಾಟ ನೀಡಿದರು. ಈ ವೇಳೆ 21 ರನ್‌ಗಳಿಸಿದ್ದ ರಹಾನೆ, ಹರ್ಭಜನ್ ಎಸೆತದಲ್ಲಿ ಬೌಲ್ಡ್ ಆದರು. ನಂತರ ಬಂದ ವ್ಯಾಟ್ಸನ್ ತಮ್ಮ ನಿರೀಕ್ಷಿತ ಮಟ್ಟದ ಪ್ರದರ್ಶನ ನೀಡಲಿಲ್ಲ. ಕೇವಲ 6 ರನ್‌ಗಳಿಸಿದ್ದ ವ್ಯಾಟ್ಸನ್, ಹರ್ಭಜನ್ ಎಸೆತದಲ್ಲಿ ರೋಹಿತ್‌ಗೆ ಕ್ಯಾಚ್ ನೀಡುವ ಮೂಲಕ ನಿರಾಸೆ ಅನುಭವಿಸಿದರು. ನಂತರ ಬಂದ ಸ್ಯಾಮ್ಸನ್ ಕೇವಲ ಶೂನ್ಯ ಸಂಪಾದನೆಯೊಂದಿಗೆ ಪೆವಿಲಿಯನ್‌ಗೆ ಮರಳಿದರು. ನಂತರ ಬಂದ ಬಿನ್ನಿ, ನಾಯಕ ದ್ರಾವಿಡ್ ಜತೆಗೂಡಿ ರನ್‌ಗತಿ ಹೆಚ್ಚಿಸಲು ಪ್ರಯತ್ನಿಸಿದರಾದರೂ, ಈ ವೇಳೆ 43 ರನ್‌ಗಳಿಸಿದ್ದ ದ್ರಾವಿಡ್, ಹರ್ಭಜನ್ ಎಸೆತದಲ್ಲಿ ರೋಹಿತ್‌ಗೆ ಕ್ಯಾಚ್ ನೀಡುವ ಮೂಲಕ ಔಟಾದರು.

ಸ್ಕೋರ್ ಬೋರ್ಡ್
ರಾಜಸ್ಥಾನ ರಾಯಲ್ಸ್ 165/6 (20 ಓವರ್)
ದ್ರಾವಿಡ್ ಸಿ ರೋಹಿತ್ ಬಿ ಹರ್ಭಜನ್ 43(37), ರಹಾನೆ ಬಿ ಹರ್ಭಜನ್ 21(18), ವ್ಯಾಟ್ಸನ್ ಸಿ ರೋಹಿತ್ ಬಿ ಹರ್ಭಜನ್ 6(8), ಸ್ಯಾಮ್ಸನ್ ಸಿ ಹರ್ಭಜನ್ ಬಿ ಮಾಲಿಂಗಾ 0(2), ಬಿನ್ನಿ ಸಿ ಹರ್ಭಜನ್ ಬಿ ಪೊಲಾರ್ಡ್ 27(17), ಹಾಡ್ಜ್ ಅಜೇಯ 19(20), ಕೂಪರ್ ಸಿ ಸ್ಮಿತ್ ಬಿ ಪೊಲಾರ್ಡ್ 4(2), ಯಾಗ್ನಿಕ್ ಅಜೇಯ 31(17), ಇತರೆ 14; ಬೌಲಿಂಗ್: ಜಾನ್ಸನ್ 3-0-23-0, ಧವನ್ 4-0-30-0, ಓಜಾ 4-0-36-0, ಹರ್ಭಜನ್ 4-0-23-3, ಮಾಲಿಂಗಾ 4-0-43-1, ಪೊಲಾರ್ಡ್ 1-0-6-2

ಮುಂಬೈ ಇಂಡಿಯನ್ಸ್ 169/6 (19.5 ಓವರ್)
ಸ್ಮಿತ್ ಸಿ ಸ್ಯಾಮ್ಸನ್ ಬಿ ಬಿನ್ನಿ 62(44), ತಾರೆ ಸಿ ಸ್ಯಾಮ್ಸನ್ ಬಿ ಕೂಪರ್ 35(27), ಕಾರ್ತಿಕ್ ಸಿ ರಹಾನೆ ಬಿ ಕೂಪರ್ 22(17), ರೋಹಿತ್ ಶರ್ಮಾ ಬಿ ತ್ರಿವೇದಿ 2 (8), ಪೊಲಾರ್ಡ್ ಸಿ ಕೂಪರ್ ಬಿ ಫಾಕ್ನರ್ 11 (6), ರಾಯುಡು ಬಿ ವ್ಯಾಟ್ಸನ್ 17 (11), ಹರ್ಭಜನ್ ಅಜೇಯ 6  (4). ರಿಷಿ ಧವನ್ ಅಜೇಯ 4 (2). ಇತರೆ 2;
ಬೌಲಿಂಗ್: ಮಲ್ಲಿಕ್ 4-0-26-0, ಫಾಕ್ನರ್ 4-0-26-0, ವ್ಯಾಟ್ಸನ್ 2.5-0-34-1, ತ್ರಿವೇದಿ 4-0-23-1, ಕೂಪರ್ 4-0-33-2.  

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement