ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕ್ರೀಡೆ

ಬ್ರಿಟಿಷ್ ಓಪನ್: ದೀಪಿಕಾಗೆ ಸೋಲು

Srinivasa Murthy VN
Updated On : 25 May 2013, 11:49 am

ಹುಲ್: ಭಾರತದ ಭರವಸೆಯ ಸ್ಕ್ವಾಷ್ ಆಟಗಾರ್ತಿ ದೀಪಿಕಾ ಪಳ್ಳಿಕಾಲ್ ಇಲ್ಲಿ ನಡೆಯುತ್ತಿರುವ ಅಲ್ಲಂ ಬ್ರಿಟಿಷ್ ಓಪನ್ ಸ್ಕ್ವಾಷ್ ಚಾಂಪಿಯನ್‌ಷಿಪ್‌ನ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಸೋಲನುಭವಿಸಿದ್ದಾರೆ.
ಈ ಪಂದ್ಯದಲ್ಲಿ 2ನೇ ಶ್ರೇಯಾಂಕಿತೆ ಇಂಗ್ಲೆಂಡ್‌ನ ಲೌರಾ ಮಸ್ಸಾರೊ ವಿರುದ್ಧ 1-3 ಅಂತರದಲ್ಲಿ ಪರಾಭವಗೊಂಡಿದ್ದಾರೆ. ಪಂದ್ಯದಲ್ಲಿ ಉತ್ತಮ ಪ್ರತಿರೋಧ ನೀಡಿದರು ದೀಪಿಕಾ ಸೋಲನುಭವಿಸಬೇಕಾಯಿತು.
ದೀಪಿಕಾರ ಈ ಸೋಲಿನಿಂದ ಪಂದ್ಯಾವಳಿಯ ಮಹಿಳೆಯರ ವಿಭಾಗದಲ್ಲಿ ಭಾರತದ ಹೋರಾಟ ಅಂತ್ಯಗೊಂಡಿದೆ.
15ನೇ ಶ್ರೇಯಾಂಕಿತೆ ದೀಪಿಕಾ ಹಾಗೂ ಮಸ್ಸಾರೊ ನಡುವಣ ಪಂದ್ಯದಲ್ಲಿ ದೀಪಿಕಾ, ಆಕ್ರಮಣಕಾರಿ ದಾಳಿ ನಡೆಸಿ ಎದುರಾಳಿಗೆ ಸವಾಲು ನೀಡುವ ಮೂಲಕ ಉತ್ತಮ ಆರಂಭವನ್ನು ಪಡೆದರು. ಆದರೆ ನಂತರ ಎರಡನೇ ಪಂದ್ಯದಿಂದ ದೀಪಿಕಾಗೆ ಪ್ರತಿ ಹೋರಾಟ ನೀಡಿದ ಮಸ್ಸಾರೊ ಪಂದ್ಯದ ಮೇಲೆ ನಿಯಂತ್ರಣ ಸಾಧಿಸಿದರು.
ಇಲ್ಲಿನ ಪರಿಸ್ಥಿತಿ ಹೆಚ್ಚು ಕಠಿಣವಾಗಿತ್ತು. ಹಾಗಾಗಿ ಪ್ರತಿ ಅಂಕಗಳಿಸಲು ಹೆಚ್ಚು ಗಮನ ಕೇಂದ್ರೀಕರಿಸಬೇಕಾಗಿತ್ತು ಎಂದು ಮಸ್ಸಾರೊ ತಿಳಿಸಿದ್ದಾರೆ.
ಇನ್ನು ಪುರುಷರ ವಿಭಾಗದಲ್ಲಿ ಬುಧವಾರ ಸೌರವ್ ಘೋಶಾಲ್ ತಮ್ಮ ಎದುರಾಳಿ ಫ್ರಾನ್ಸ್‌ನ ಗೌಲ್ಟಿಯರ್ 8-11, 13-11, 7-11, 0-11 ಅಂತರದಲ್ಲಿ ಪರಾಭವಗೊಳ್ಳುವ ಮೂಲಕ ಭಾರತದ ಹೋರಾಟ ಅಂತ್ಯಗೊಂಡಿತ್ತು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement