ಐಪಿಎಲ್ ವೆಬ್ಸೈಟ್ನಿಂದ ಪೇರ್ ಪ್ಲೇ ಪಟ್ಟಿ ಮಾಯ
ನವದೆಹಲಿ: ಐಪಿಎಲ್ ಪಂದ್ಯಾವಳಿಯಲ್ಲಿ ಉತ್ತಮ ಕ್ರೀಡಾ ಮನೋಭಾವ ತೋರುವ ತಂಡಗಳಿಗೆ ನೀಡುವ ಫೇರ್ ಪ್ಲೇ ಪ್ರಶಸ್ತಿಯನ್ನು ತೆಗೆದು ಹಾಕಿದೆ.
ಈ ಫೇರ್ ಪ್ಲೇ ಪ್ರಶಸ್ತಿಯ ಪಟ್ಟಿಯಲ್ಲಿ ಅಗ್ರ ಎರಡು ಸ್ಥಾನಗಳಲ್ಲಿ ರಾಜಸ್ಥಾನ ರಾಯಲ್ಸ್ ಹಾಗೂ ಚೆನ್ನೈ ಸೂಪರ್ ಕಿಂಗ್ಸ್ ತಂಡಗಳು ಸ್ಥಾನ ಪಡೆದಿದ್ದು, ಈ ಎರಡೂ ತಂಡಗಳು ಸ್ಪಾಟ್ ಫಿಕ್ಸಿಂಗ್ ಹಾಗೂ ಬೆಟ್ಟಿಂಗ್ ಪ್ರಕರಣದಲ್ಲಿ ಆರೋಪ ಎದುರಿಸುತ್ತಿರುವ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಮೂಲಗಳು ತಿಳಿಸಿವೆ. ಪಟ್ಟಿಯ ಮೂರನೇ ಸ್ಥಾನದಲ್ಲಿ ಪುಣೆ ವಾರಿಯರ್ಸ್ ಇತ್ತು.
ಏನಿದು ಫೇರ್ ಪ್ಲೇ?: ಪ್ರತಿವರ್ಷ ನಡೆಯುವ ಐಪಿಎಲ್ ಪಂದ್ಯಗಳಲ್ಲಿ ಫೇರ್ ಪ್ಲೇ ಪಟ್ಟಿಯಲ್ಲಿ ಮೊದಲ ಸ್ಥಾನ ಪಡೆಯುವ ತಂಡಕ್ಕೆ ಈವರೆಗೆ ಫೇರ್ ಪ್ಲೇ ಪ್ರಶಸ್ತಿಯನ್ನು ನೀಡಲಾಗುತ್ತಿತ್ತು. ಪ್ರತಿ ಪಂದ್ಯದಲ್ಲಿ, ಯಾವುದೇ ಕಿರಿಕಿರಿ, ವಿವಾದ ಮಾಡಿಕೊಳ್ಳದೇ ಆಡುವ ತಂಡಕ್ಕೆ ಅಂಪೈರ್ಗಳು ಅಂಕಗಳನ್ನು ನೀಡುತ್ತಾರೆ. ಹೀಗೆ, ಹೆಚ್ಚು ಅಂಕಗಳನ್ನು ಪಡೆಯುವ ಮೂಲಕ ಫೇರ್ ಪ್ಲೇ ಪಟ್ಟಿಯಲ್ಲಿ ಅಗ್ರಸ್ಥಾನ ಪಡೆಯುವ ತಂಡ ಪ್ರಶಸ್ತಿಗೆ ಭಾಜನವಾಗುತ್ತಿತ್ತು.