ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕ್ರೀಡೆ

ಗ್ಯಾರೋಸ್‌ನಲ್ಲಿ ದಿಗ್ಗಜರ ಗರ್ಜನೆ

Srinivasa Murthy VN
Updated On : 25 May 2013, 10:20 am

ಪ್ಯಾರಿಸ್: ಈ ಸಾಲಿನ ಫ್ರೆಂಚ್ ಓಪನ್ ಪಂದ್ಯಾವಳಿಗೆ ಕ್ಷಣಗಣನೆ ಆರಂಭವಾಗಿದ್ದು, ಭಾನುವಾರದಿಂದ ಇಲ್ಲಿನ ರೊಲ್ಯಾಂಡ್ ಗ್ಯಾರೊಸ್‌ನಲ್ಲಿ ನಡೆಯಲಿದೆ. ಈ ಪಂದ್ಯಾವಳಿಯಲ್ಲಿ ಟೆನಿಸ್‌ನ ಘಟಾನುಘಟಿಗಳು ಸೆಣೆಸಾಟ ನಡೆಸುತ್ತಿದ್ದು, ಅಭಿಮಾನಿಗಳಲ್ಲಿ ಪಂದ್ಯಾವಳಿ ಮೆಲೆ ನಿರೀಕ್ಷೆ ಹೆಚ್ಚಿಸಿದೆ. ಈ ಪಂದ್ಯಾವಳಿಯಲ್ಲಿ ಪ್ರಮುಖ ಆಟಗಾರರು ಭಾಗವಹಿಸುತ್ತಿದ್ದು, ಕೆಲವು ಆಟಗಾರರು ವರ್ಷದ 2ನೇ ಗ್ರ್ಯಾಂಡ್ ಸ್ಲಾಂ ಪ್ರಶಸ್ತಿ ಗೆಲ್ಲುವ ಕನಸು ಕಾಣುತ್ತಿದ್ದಾರೆ. ಪಂದ್ಯಾವಳಿಯ ಪುರುಷರ ವಿಭಾಗದಲ್ಲಿ ರಫೆಲ್ ನಡಾಲ್ ಪ್ರಶಸ್ತಿ ಗೆಲ್ಲುವ ಫೆವರಿಟ್ ಆಗಿದ್ದಾರೆ. ಕಳೆದ ವರ್ಷ ದ್ವಿತಿಯಾರ್ಧದಲ್ಲಿ ಮಂಡಿ ನೋವಿನ ಹಿನ್ನಲೆಯಲ್ಲಿ ಎಲ್ಲಾ ಎಟಿಪಿ ಟೂರ್‌ಗಳಿಂದ ವಂಚಿತರಾಗಿದ್ದ ನಡಾಲ್, ಗಾಯದ ಸಮಸ್ಯೆಯಿಂದ ಹೊರ ಬಂದ ನಂತರ ಅದ್ಭುತ ಪ್ರದರ್ಶನ ನೀಡುತ್ತಿದ್ದಾರೆ. ಅಲ್ಲದೆ ಇವರಿಗೆ ಪೈಪೋಟಿ ನೀಡಲು ನೊವಾಕ್ ಜೊಕೋವಿಚ್, ರೋಜರ್ ಫೆಡರರ್, ಡೇವಿಡ್ ಫೆರರ್, ಥಾಮಸ್ ಬೆರ್ಡಿಕ್, ಸ್ಟಾನಿಸ್ಲಸ್ ವವ್ರಿಂಕಾ ಸಹ ಪ್ರಶಸ್ತಿಗಾಗಿ ಸೆಣೆಸಲಿದ್ದಾರೆ. ಇನ್ನು ಆ್ಯಂಡಿ ಮರ್ರೆ ಹಾಗೂ ಜಾನ್ ಮಾರ್ಟೀನ್ ಡೆಲ್ ಪೊಟ್ರೊ ಪಂದ್ಯಾವಳಿಯಿಂದ ಹಿಂದೆ ಸರಿದಿದ್ದಾರೆ. ಇನ್ನು ಮಹಿಳಿಯರ ವಿಭಾಗದಲ್ಲಿ ಸೆರೆನಾ ವಿಲಿಯಮ್ಸ್ ಗೆಲ್ಲುವ ಫೆವರಿಟ್ ಆಗಿದ್ದು, ಇವರಿಗೆ ಮರಿಯಾ ಶರಪೋವಾ, ವಿಕ್ಟೋರಿಯಾ ಅಜೆರೆಂಕಾ ಮತ್ತು ಲೀ ನಾ ಸವಾಲು ನೀಡಲಿದ್ದಾರೆ. ಅಲ್ಲದೆ ಇಟಲಿಯ ಸಾರಾ ಎರ್ರಾನಿ ಹಾಗೂ ಫ್ರಾನ್ಸಿಸ್ಕಾ ಸ್ಕಿಯಾವೊನೆ ಅಚ್ಚರಿಯ ಪ್ರದರ್ಶನ ನೀಡಲು ಕಾತರರಾಗಿದ್ದಾರೆ. ಒಟ್ಟಾರೆಯಾಗಿ ಟೆನಿಸ್‌ನ ಬಲಿಷ್ಠ ತಾರೆಗಳು ಪರಸ್ಪರ ಸೆಣೆಸಾಡುತ್ತಿದ್ದು, ಅಭಿಮಾನಿಗಳಿಗೆ ರೋಚಕ ಪಂದ್ಯಾವಳಿಯಾಗುವ ನಿರೀಕ್ಷೆ ಇದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement