ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕ್ರೀಡೆ

ದಾಖಲೆಯ ಸನಿಹದಲ್ಲಿ ರಾಫೆಲ್ ನಡಾಲ್

Srinivasa Murthy VN
Updated On : 25 May 2013, 10:21 am

ಪ್ಯಾರಿಸ್:  ಫ್ರೆಂಚ್ ಓಪನ್ ಟೆನಿಸ್ ಪಂದ್ಯಾವಳಿಯ ಸೆಮಿಫೈನಲ್‌ಗೆ ಕಾಲಿಟ್ಟಿರುವ ಸ್ಪೇನ್‌ನ ಟೆನಿಸ್ ಆಟಗಾರ ರಾಫೆಲ್ ನಡಾಲ್, ಎಂಟನೇ ಬಾರಿ ಗ್ರ್ಯಾಂಡ್ ಸ್ಲಾಂ ಪ್ರಶಸ್ತಿಯೊಂದನ್ನು ತನ್ನದಾಗಿಸಿಕೊಳ್ಳುವ ಸನಿಹದಲ್ಲಿದ್ದಾರೆ.
ಭಾನುವಾರದಿಂದ ಫ್ರೆಂಚ್ ಓಪನ್ ಪಂದ್ಯಾವಳಿ ಆರಂಭವಾಗಲಿದ್ದು, ಇದಕ್ಕಾಗಿ ಶುಕ್ರವಾರ ಡ್ರಾ ನಡೆಸಲಾಯಿತು. ಈ ಬಾರಿ, ಅವರ ಕನಸು ನನಸಾದರೆ, ತಮ್ಮ ವೃತ್ತಿಜೀವನದಲ್ಲಿ ಎಂಟು ಗ್ರ್ಯಾಂಡ್ ಸ್ಲಾಂ ಪ್ರಶಸ್ತಿಯನ್ನು ಗೆದ್ದ ದಾಖಲೆ ಬರೆಯಲಿದ್ದಾರೆ. ಆದರೆ, ಆ ಸಾಧನೆ ಮಾಡುವುದಕ್ಕೂ ಮುನ್ನ ಅವರು, ಇನ್ನೆರಡು ಸವಾಲುಗಳನ್ನು ಮೆಟ್ಟಬೇಕಿದೆ.  ಶುಕ್ರವಾರ ನಡೆದ 'ಡ್ರಾ' (ಪಂದ್ಯಗಳ ಫಿಕ್ಸ್‌ಚರ್ಸ್) ಅನ್ನು ಅವಲೋಕಿಸಿ ನೋಡುವುದಾದರೆ, ಮೊದಲ ಸೆಮಿಫೈನಲ್ ಪಂದ್ಯ ನಡಾಲ್ ಹಾಗೂ ನೊವಾಕ್ ಜೊಕೋವಿಚ್ ನಡುವೆ ನಡೆಯುವುದು ಖಚಿತವಾಗಿದೆ. ಮತ್ತೊಂದು ಸೆಮಿಫೈನಲ್ ಪಂದ್ಯದಲ್ಲಿ, ರೋಜರ್ ಫೆಡರರ್ ಹಾಗೂ ಡೇವಿಡ್ ಫೆರರ್ ಮುಖಾಮುಖಿಯಾಗುವ ಸಂಭವವಿದೆ. ಹಾಗಾಗಿ, ಮೊದಲ ಸೆಮಿಫೈನಲ್ ದಾಟಿದರೆ, ನಡಾಲ್ ಅವರು ಜೂ. 9ರಂದು ನಡೆಯಲಿರುವ ಪ್ರಶಸ್ತಿ ಸುತ್ತಿಗೆ ಕಾಲಿಡಲಿದ್ದಾರೆ ನಡಾಲ್. ಅಲ್ಲಿ, ಅವರಿಗೆ ರೋಜರ್ ಅಥವಾ ಡೇವಿಡ್ ಫೆರರ್ ಎದುರಾಳಿಗಳಾಗಲಿದ್ದಾರೆ. ಅಲ್ಲಿಯೂ ಅವರು, ಗೆಲವು ಸಾಧಿಸಿದ್ದೇ ಆದರೆ, ಅವರು ಎಂಟನೇ ಬಾರಿಗೆ ಗ್ರ್ಯಾಂಡ್ ಸ್ಲಾಂ ಪ್ರಶಸ್ತಿ ಗೆದ್ದ ದಾಖಲೆ ನಿರ್ಮಿಸಲಿದ್ದಾರೆ.
ದಾಖಲೆ ಮುರಿದಿದ್ದರು: 2012ರಲ್ಲಿ ರೊನಾಲ್ಡ್ ಗ್ಯಾರೋಸ್ ಪಂದ್ಯಾವಳಿಯನ್ನು ಗೆಲ್ಲುವ ಮೂಲಕ ತಮ್ಮ ವೃತ್ತಿಜೀವನದಲ್ಲಿ ಏಳನೇ ಗ್ರ್ಯಾಂಡ್ ಸ್ಲಾಂ ಪ್ರಶಸ್ತಿಯನ್ನು ತಮ್ಮದಾಗಿಸಿಕೊಂಡಿದ್ದ ರಾಫೆಲ್ ನಡಾಲ್, ಈ ಹಿಂದೆ ಆರು ಬಾರಿ ಗ್ರ್ಯಾಂಡ್ ಸ್ಲಾಂ ಪ್ರಶಸ್ತಿಯನ್ನು ಗೆದ್ದಿದ್ದ ಬ್ಜೊರ್ನ್ ಬೊರ್ಗ್ ಅವರ ದಾಖಲೆಯನ್ನು ಅಳಿಸಿಹಾಕಿದ್ದರು. ಇದೀಗ, ದಾಖಲೆಯ ಗ್ರ್ಯಾಂಡ್ ಸ್ಲಾಂ ಗೆಲ್ಲುವ ಸನಿಹದಲ್ಲಿ ನಡಾಲ್ ಇದ್ದಾರೆ. ಗಾಯದ ಸಮಸ್ಯೆಯಿಂದಾಗಿ, ಲಂಡನ್ ಒಲಿಂಪಿಕ್ಸ್, ಯುಎಸ್ ಓಪನ್ ಹಾಗೂ ಆಸ್ಟ್ರೇಲಿಯನ್ ಓಪನ್‌ನಲ್ಲಿ ಭಾಗವಹಿಸುವ ಅವಕಾಶದಿಂದ ವಂಚಿತರಾಗಿದ್ದ ನಡಾಲ್, ಇದೇ ವರ್ಷ ಫೆಬ್ರವರಿಯಲ್ಲಿ ವೃತ್ತಿಪರ ಟೆನಿಸ್‌ಗೆ ವಾಪಸ್ಸಾಗಿದ್ದರು. ಅಲ್ಲಿಂದ ಇಲ್ಲಿಯವರೆಗೂ ಅವರು ಒಟ್ಟು 8 ಪಂದ್ಯಾವಳಿಗಳ ಫೈನಲ್‌ನಲ್ಲಿ ಆಡಿದ್ದು, 6 ಬಾರಿ ಚಾಂಪಿಯನ್ ಆಗಿ ಹೊರಹೊಮ್ಮಿದ್ದಾರೆ. ಆದರೆ, ಈ ಬಾರಿ ಅವರು ಫ್ರೆಂಚ್ ಓಪನ್ ಆಡುತ್ತಿರುವುದು ದಾಖಲೆ ದೃಷ್ಠಿಯಿಂದ ವಿಶೇಷವಾಗಿದೆ. ಶುಕ್ರವಾರ ನಡೆದ ಡ್ರಾಗಳ ಪ್ರಕಾರ, ಮೊದಲ ಸೆಮಿಫೈನಲ್‌ನಲ್ಲಿ ಅವರು ಫೆಡರರ್ ಮೇಲೆ ಜಯ ಸಾಧಿಸಿದರೆ ಮಾತ್ರ ಈ ದಾಖಲೆ ಮಾಡುವ ಅವರಿಗೆ ಲಭ್ಯವಾಗುತ್ತದೆ.
ಇದುವರೆಗೂ ಯಾವುದೇ ಟೆನಿಸ್ ಆಟಗಾರರ ಏಳಕ್ಕಿಂತ ಹೆಚ್ಚು ಬಾರಿ ಟೆನಿಸ್ ಚಾಂಪಿಯನ್‌ಷಿಪ್ ಗೆದ್ದ ಉದಾಹರಣೆಯಿಲ್ಲ. ರಾಯ್ ಎಮರ್ಸನ್ ಅವರು ಆರು ಬಾರಿ ಆಸ್ಟ್ರೇಲಿಯನ್ ಓಪನ್ ಗೆದ್ದಿದ್ದರು. ಪೀಟ್ ಸ್ಯಾಂಪ್ರಾಸ್ ಹಾಗೂ ರೋಜರ್ ಫೆಡರರ್ ಅವರು ವಿಂಬಲ್ಡನ್ ಪಂದ್ಯಾವಳಿಯನ್ನು ಏಳು ಬಾರಿ ಗೆದ್ದಿದ್ದಾರೆ.
ಇನ್ನು, ಬಿಲ್ ಲ್ಯಾರ್ನೆಡ್, ಬಿಲ್ ಟಿಲ್ಡೆನ್ ಹಾಗೂ ರಿಚರ್ಡ್ ಸಿಯರ್ಸ್ ಒಟ್ಟು 7 ಬಾರಿ ಯುಎಸ್ ಓಪನ್ ಗೆದ್ದಿದ್ದಾರೆ.  

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement