ಧರ್ಮರಾಜ್ ತಂಡಕ್ಕೆ ಜಯ
ಬೆಂಗಳೂರು: ನಗರದ ಫುಟ್ಬಾಲ್ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಬಿ ಡಿವಿಷನ್ ಪುಟ್ಬಾಲ್ ಪಂದ್ಯಾವಳಿಯ ಶನಿವಾರದ ಪಂದ್ಯದಲ್ಲಿ ಧರ್ಮರಾಜ್ ಯೂನಿಯನ್ ತಂಡವು ರಾಯಲ್ಸ್ ತಂಡದ ವಿರುದ್ಧ ಜಯ ಸಾಧಿಸಿದೆ. ಧರ್ಮರಾಜ್ ಯೂನಿಯನ್ ತಂಡವು 3-0 ಗೋಲುಗಳ ಅಂತರದಿಂದ ಜಯ ಸಾಧಿಸಿದ್ದು, ತಂಡದ ಪರ ಸೆಲ್ವಾ 24ನೇ, ಜನ 50ನೇ ಹಾಗೂ ಲೆಯಾನ್ 65ನೇ ನಿಮಿಷದಲ್ಲಿ ಗೋಲು ದಾಖಲಿಸಿದರು. ದಿನದ ಮತ್ತೊಂದು ಪಂದ್ಯದಲ್ಲಿ ಶ್ರೀ ಗಜಾನನ ತಂಡವು ನೈರುತ್ಯ ರೈಲ್ವೆ ತಂಡದ ವಿರುದ್ಧ ವಾಕ್ ಓವರ್ ಪಡೆಯಿತು.
ಚಾಂಪಿಯನ್ಸ್ ಲೀಗ್ ಬಳಿಕ ದ್ರಾವಿಡ್ ವಿದಾಯ
ಕೋಲ್ಕತಾ: ಈ ಆವೃತ್ತಿಯಲ್ಲಿ ರಾಜಸ್ಥಾನ ರಾಯಲ್ಸ್ ಉತ್ತಮವಾಗಿ ಮುನ್ನಡೆಸಿದ್ದ ನಾಯಕ ರಾಹುಲ್ ದ್ರಾವಿಡ್ ಐಪಿಎಲ್ಗೆ ವಿದಾಯ ಹೇಳಲು ನಿರ್ಧರಿಸಿದ್ದಾರೆ. ಮುಂಬರುವ ಚಾಂಪಿಯನ್ಸ್ ಲೀಗ್ ಪಂದ್ಯಾವಳಿ ರಾಜಸ್ಥಾನ ತಂಡದ ಜತೆಗಿನ ಕೊನೆಯ ಪಂದ್ಯಾವಳಿಯಾಗಿದ್ದು, ಈ ಪಂದ್ಯಾವಳಿ ನಂತರ ಮತ್ತೇ ಐಪಿಎಲ್ನಲ್ಲಿ ಭಾಗವಹಿಸದಿರಲು ದ್ರಾವಿಡ್ ನಿರ್ಧರಿಸಿದ್ದಾರೆ. ಚಾಂಪಿಯನ್ಸ್ ಲೀಗ್ ಪಂದ್ಯಾವಳಿಗೆ ಕೆಲವು ತಿಂಗಳು ಬಾಕಿ ಇದ್ದು, ಈ ಪಂದ್ಯಾವಳಿ ನನ್ನ ಕೊನೆಯ ಪಂದ್ಯಾವಳಿಯಾಗಲಿದೆ ಎಂದು ಅವರು ತಿಳಿಸಿದ್ದಾರೆ.