ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕ್ರೀಡೆ

ಧ್ರುವ್, ಸಾತ್ವಿಕಾ ಚಾಂಪಿಯನ್

Srinivasa Murthy VN
Updated On : 26 May 2013, 12:31 pm

ಬೆಂಗಳೂರು: ಕಾರ್ಲೆ ಇನ್‌ಫ್ರಾ ಎಟಿಯು-14 ಟೆನಿಸ್ ಚಾಂಪಿಯನ್‌ಷಿಪ್ ಪ್ರಶಸ್ತಿ ಈ ಬಾರಿ ಮಹಾರಾಷ್ಟ್ರದ ಧ್ರುವ್ ಸುನೀಶ್ ಅವರ ಪಾಲಾಗಿದೆ. ಸದಾಶಿವ ನಗರದ ಕ್ಲಬ್‌ನಲ್ಲಿ ಶನಿವಾರ ನಡೆದ ಬಾಲಕರ ವಿಭಾಗದ ಫೈನಲ್ ಪಂದ್ಯದಲ್ಲಿ ಧ್ರುವ್ ಅವರು ತಮ್ಮ ರಾಜ್ಯದವರೇ ಆದ ಸಿದ್ದಾರ್ಥ್ ಜಗದೀಶ್ ಬಾಂಥಿಯಾ ಅವರ ವಿರುದ್ಧ 3-6, 6-4, 6-2 ಅಂತರದಲ್ಲಿ ಜಯ ಗಳಿಸಿ, ಪ್ರಶಸ್ತಿಗೆ ಭಾಜನರಾದರು.
ಶುಕ್ರವಾರ ನಡೆದ ಬಾಲಕರ ಡಬಲ್ಸ್ ವಿಭಾಗದ ಫೈನಲ್‌ನಲ್ಲಿ ತಮ್ಮ ಜೋಡಿ ಸಿದ್ಧಾಂತ್ ಜೊತೆ ಜಯಗಳಿಸಿ, ಪ್ರಶಸ್ತಿ ಬಾಚಿಕೊಂಡಿದ್ದ ಧ್ರುವ್, ಇದೀಗ ಸಿಂಗಲ್ಸ್‌ನಲ್ಲೂ ಜಯದ ಮುಗುಳ್ನಗೆ ಬೀರಿದ್ದಾರೆ.  
ಸಾತ್ವಿಕಾಗೆ ಪ್ರಶಸ್ತಿ: ಶನಿವಾರ ನಡೆದ ಬಾಲಕಿಯರ ಸಿಂಗಲ್ಸ್ ಫೈನಲ್ ಪಂದ್ಯದಲ್ಲಿ ಆಂಧ್ರಪ್ರದೇಶದ ಸಮಾ ಸಾತ್ವಿಕಾ ಅವರು, ಕೇರಳದ ತನ್ವಿ ಭಟ್ ಹಟ್ಟಂಗಡಿ ವಿರುದ್ಧ 6-1, 6-2 ಅಂತರದಲ್ಲಿ ಸೋಲಿಸಿ ಪ್ರಶಸ್ತಿಯನ್ನು ತಮ್ಮದಾಗಿಸಿಕೊಂಡರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement