ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕ್ರೀಡೆ

ಫ್ರೆಂಚ್ ಓಪನ್: ದ್ವಿತೀಯ ಸುತ್ತಿಗೆ ಸೋಮ್ದೇವ್

Srinivasa Murthy VN
Updated On : 27 May 2013, 12:59 pm

ಪ್ಯಾರಿಸ್: ಫ್ರೆಂಚ್ ಓಪನ್ ಟೆನಿಸ್ ಪಂದ್ಯಾವಳಿಯ ಪುರುಷರ ವಿಭಾಗದಲ್ಲಿ ಭಾರತದ ಸೋಮ್ದೇವ್ ಬರ್ಮನ್ ಶುಭಾರಂಭ ಮಾಡಿದ್ದಾರೆ.
ಸ್ಪೇನ್ನ ಡೇನಿಯಲ್ ಮುನೋಜ್ ಡೇ ಲಾ ನಾವಾ ವಿರುದ್ಧ 6-3, 6-3 ಮತ್ತು 7-5 ನೇರ ಸೆಟ್ಗಳಲ್ಲಿ ಸೋಮ್ದೇವ್ ಜಯಗಳಿಸಿದ್ದಾರೆ. ಈ ಗೆಲವಿನ ಮೂಲಕ ಸೋಮ್ದೇವ್ ದ್ವಿತೀಯ ಸುತ್ತು ಪ್ರವೇಶಿಸಿದ್ದಾರೆ.
ಸೆರೆನಾ, ಫೆಡರರ್, ಅನಾ ದ್ವಿತೀಯ ಸುತ್ತಿಗೆ: ಮಹಿಳೆಯರ ವಿಭಾಗದಲ್ಲಿ ಅಗ್ರ ಶ್ರೆಯಾಂಕಿತ ಆಟಗಾರ್ತಿ ಅಮೆರಿಕದ ಸೆರೆನಾ ವಿಲಿಯಮ್ಸ್ ಅವರು ಜಾರ್ಜಿಯಾದ ಅನ್ನಾ ತಟಿಶ್ವಿಲಿ ವಿರುದ್ಧ 6-0, 6-1 ನೇರ ಸೆಟ್ಗಳಲ್ಲಿ ಜಯ ಗಳಿಸುವ ಮೂಲಕ ದ್ವಿತೀಯ ಸುತ್ತು ಪ್ರವೇಶಿಸಿದ್ದಾರೆ. ಇದೇ ವಿಭಾಗದಲ್ಲಿ ಸೆರ್ಬಿಯಾದ ಅನಾ ಇವಾನೋವಿಚ್ ಅವರು ಕ್ರೊವೆಶಿಯಾದ ಪಿ. ಮಾರ್ಟಿಚ್ ವಿರುದ್ಧ 6-1, 3-6 ಮತ್ತು 6-3 ಅಂತರದಲ್ಲಿ ಗೆಲ್ಲುವ ಮೂಲಕ ಮುಂದಿನ ಸುತ್ತು ಪ್ರವೇಶಿಸಿದ್ದಾರೆ. ಪುರುಷರ ವಿಭಾಗದಲ್ಲಿ ಎರಡನೇ ಶ್ರೇಯಾಂಕಿತ ಸ್ವಿಜರ್ಲೆಂಡ್ನ ಆಟಗಾರ ರೋಜರ್ ಫೆಡರರ್ ಅವರು, ಸ್ಪೇನ್ನ ಪಿ. ಕೆರೆನೋ ಬುಸ್ಟಾ ವಿರುದ್ಧ 6-2,6-2 ಮತ್ತು 6-3 ನೇರ ಸೆಟ್ಗಳಲ್ಲಿ ಸೋಲಿಸುವ ಮೂಲಕ ಗೆಲವಿನ ಅಭಿಯಾನ ಆರಂಭಿಸಿದ್ದಾರೆ. ಶ್ರೇಯಾಂಕ ರಹಿತ ಆಟಗಾರ ಕೆರೆನೋ, ಫೆಡರರ್ ಅವರಿಗೆ ಯಾವ ಹಂತದಲ್ಲೂ ಸಮಸಾಟಿಯಾಗಲಿಲ್ಲ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement