ನಿಕೋ ಮಡಿಲಿಗೆ ಮೊನಾಕೊ ಜಿಪಿ
ಮೊನಾಕೊ: ಮರ್ಸಿಡೀಸ್ ತಂಡದ ನಿಕೋ ರೋಸ್ಬರ್ಗ್ ಅವರು, ಭಾನುವಾರ ನಡೆದ ಮೊನಾಕೋ ಗ್ರ್ಯಾನ್ ಪ್ರೀ ರೇಸ್ ಗೆದ್ದುಕೊಂಡಿದ್ದಾರೆ. ಇಲ್ಲಿನ ಸರ್ಕ್ಯೂಟ್ ಡಿ ಮೊನಾಕೊದಲ್ಲಿ ಅಂತಾರಾಷ್ಟ್ರೀಯ ಟ್ರ್ಯಾಕ್ನಲ್ಲಿ ನಡೆದ ರೇಸ್ನಲ್ಲಿ ಅವರು, ಮೊದಲಿಗರಾಗಿ ಹೊರಹೊಮ್ಮಿದರು. 1983ರಲ್ಲಿ ನಿಕೋ ರೋಸ್ಬರ್ಗ್ ಅವರ ತಂದೆ ಕೆಕೆ ರೋಸ್ಬರ್ಗ್ ಅವರೂ ಮೊನಾಕೋ ರೇಸ್ ಗೆದ್ದಿದ್ದರು. ಇದೀಗ, ನಿಕೋ ಸಹ ಮೊನಾಕೋ ರೇಸ್ ಗೆಲ್ಲುವ ಮೂಲಕ 'ಒಂದೇ ರೇಸ್ ಅನ್ನು ತಂದೆ-ಮಗ ಇಬ್ಬರೂ ಗೆದ್ದ' ಅಪರೂಪದ ದಾಖಲೆ ಬರೆದರು. ರೆಡ್ಬುಲ್ನ ಸೆಬಾಸ್ಟಿನಯ್ ವೆಟಲ್ ಅವರು ಎರಡನೇ ಸ್ಥಾನ ಪಡೆದರೆ, ರೆಡ್ ಬುಲ್ ತಂಡದ ಮತ್ತೊಬ್ಬ ಕ್ರೀಡಾಳು ಮಾರ್ಕ್ ವೆಬರ್ ಮೂರನೇ ಸ್ಥಾನ ಪಡೆದರು.
ಸಹಾರಾ ಪ್ರದರ್ಶನ: ಸಹಾರಾ ಫೋರ್ಸ್ ಇಂಡಿಯಾ ತಂಡದ ಆ್ಯಂಡ್ರಿಯನ್ ಸುಟಿಲ್ ಅವರು, ರೇಸ್ನಲ್ಲಿ 5ನೇ ಸ್ಥಾನ ಗಳಿಸಿದರು. ಸಹಾರಾ ಫೋರ್ಸ್ನ ಮತ್ತೊಬ್ಬ ಕ್ರೀಡಾಳು ಪೌಲ್ ಡಿ ರೆಸ್ತಾ ಅವರು 9ನೇ ಸ್ಥಾನ ಗಳಿಸಿದರು. ಇದು ಈವರೆಗೆ ಸಹಾರಾ ತಂಡ ಭಾಗವಹಿಸಿರುವ ಜಿಪಿಗಳಲ್ಲಿ ಶ್ರೇಷ್ಠ ಸಾಧನೆ ಇದಾಗಿದೆ.
ಮೊನಾಕೋ ಜಿಪಿ: ಟಾಪ್ 10
1. ನಿಕೋ ರೋಸ್ ಬರ್ಗ್ ಮರ್ಸಿಡಿಸ್ 25
2. ಸೆಬಾಸ್ಟಿಯನ್ ವೆಟ್ಟಲ್ ರೆಡ್ಬುಲ್ 18
3. ಮಾರ್ಕ್ ವೆಬರ್ ರೆಡ್ಬುಲ್ 15
4. ಲಿವೀಸ್ ಹ್ಯಾಮಿಲ್ಟನ್ ಮರ್ಸಿಡಿಸ್ 12
5. ಆ್ಯಂಡ್ರಿಯನ್ ಸುಟಿಲ್ ಫೋರ್ಸ್ ಇಂಡಿಯಾ 10
6. ಜೆನ್ಸನ್ ಬಟನ್ ಮೆಕ್ಲಾರೆನ್ 8
7. ಫರ್ನಾಂಡೊ ಅಲೊನ್ಸೊ ಫೆರಾರಿ 6
8. ಜೀನ್-ಎರ್ರಿಕ್ ಟೊರೊ ರೊಸೊ 4
9. ಪೌಲ್ ಡಿ ರೆಸ್ತಾ ಫೋರ್ಸ್ ಇಂಡಿಯಾ 2
10. ಕಿಮಿ ರೈಕೋನನ್ ಲೋಟಸ್ 1