ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕ್ರೀಡೆ

ಬಾರ್ಸಿಲೋನಾ ಜತೆಗೆ ನೇಮಾರ್ ಒಪ್ಪಂದ

Srinivasa Murthy VN
Updated On : 26 May 2013, 10:12 am

ಸಾವ್ ಪೌಲೊ: ಮುಂಬರುವ ಕಾನ್ಫಿಡರೇಷನ್ ಕಪ್ ನಂತರ ಬಾರ್ಸಿಲೋನಾ ತಂಡವನ್ನು ಸೇರ್ಪಡೆಗೊಳ್ಳುವುದಾಗಿ ಬ್ರೆಜಿಲ್‌ನ ಸ್ಟ್ರೈಕರ್ ನೇಮಾರ್ ತಿಳಿಸಿದ್ದು, ಈ ಮೂಲಕ ಬಾರ್ಸಿಲೋನಾ ತಂಡಕ್ಕೆ ಮತ್ತೊಬ್ಬ ಸ್ಟಾರ್ ಆಟಗಾರ ತಂಡಕ್ಕೆ ಸೇರ್ಪಡೆಯಾಗುತ್ತಿದ್ದಾರೆ. ಬಾರ್ಸಿಲೋನಾ ತಂಡದಲ್ಲಿ ಈಗಾಗಲೇ ಲಿಯೋನೆಲ್ ಮೆಸ್ಸಿ, ಕ್ಸಾವಿ ಹರ್ನಾಂಡೆಜ್ ಹಾಗೂ ಆ್ಯಂಡ್ರೆಸ್ ಇನಿಯೆಸ್ಟಾರಂತಹ ಆಟಗಾರರಿದ್ದು, ನೇಮಾರ್ ಹೊಸ ಸೇರ್ಪಡಡೆಯಾಗಲಿದ್ದಾರೆ. ನೇಮಾರ್‌ನ ಬ್ರೆಸಿಲ್ ಕ್ಲಬ್ ಆದ ಸ್ಯಾಂಟೊಸ್, ತಮಗೆ ಬಾರ್ಸಿಲೋನಾ ಹಾಗೂ ರಿಯಲ್ ಮ್ಯಾಡ್ರಿಡ್ ತಂಡದಿಂದ ಅವಕಾಶಗಳು ಬಂದಿದೆ ಎಂದು ತಿಳಿಸಿದ ಒಂದೇ ದಿನದಲ್ಲಿ ಈ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ. ನೇಮಾರ್ ತಮ್ಮ ನಿರ್ಧಾರವನ್ನು ಟ್ವಿಟರ್ ಹಾಗೂ ಇತರೆ ಸಾಮಾಜಿಕ ತಾಣಗಳಲ್ಲಿ ಬಹಿರಂಗ ಪಡಿಸಿದ್ದು, ನಾನು ಸೋಮವಾರ ಬಾರ್ಸಿಲೋನಾ ಜತೆಗಿನ ಒಪ್ಪಂದಕ್ಕೆ ಸಹಿ ಹಾಕುತ್ತಿದ್ದು, ಸೋಮವಾರದವರೆಗು ಕಾಯಲು ಸಾಧ್ಯವಾಗುತ್ತಿಲ್ಲ. ನನ್ನ ಕುಟುಂಬಕ್ಕೆ ಈ ನಿರ್ಧಾರ ತಿಳಿದಿದೆ ಎಂದು ಬರೆದಿದ್ದಾರೆ.

'ಇಂಡೋ-ಪಾಕ್ ಕದನ ಕುತೂಹಲ'
ಕರಾಚಿ:
ಚಾಂಪಿಯನ್ಸ್ ಲೀಗ್ ಪಂದ್ಯಾವಳಿಗೆ ಇನ್ನು ಕೆಲವೇ ದಿನಗಳು ಬಾಕಿ ಉಳಿದಿದ್ದು, ಪಂದ್ಯಾವಳಿಯಲ್ಲಿ ಜೂನ್ 15ರಂದು ನಡೆಯಲಿರುವ ಭಾರತ ಹಾಗೂ ಪಾಕಿಸ್ತಾನ ಪಂದ್ಯದ ಮೇಲೆ ನಿರೀಕ್ಷೆ ಹೆಚ್ಚುತ್ತಿದೆ. ಈ ಪಂದ್ಯ ಫೈನಲ್‌ಗಿಂತ ಮಹತ್ವದ್ದಾಗಿದ್ದು, ಪಂದ್ಯವನ್ನು ಎದುರು ನೋಡುತ್ತಿರುವುದಾಗಿ ಪಾಕಿಸ್ತಾನ ತಂಡದ ಸ್ಪಿನ್ನರ್ ಸೈಯದ್ ಅಜ್ಮಲ್ ತಿಳಿಸಿದ್ದಾರೆ. ನಾವಿಬ್ಬರು ಎಲ್ಲಿಯೇ ಆಡಲಿ ಅಲ್ಲಿನ ವಾತಾವರಣ ರೋಚಕವಾಗಿರುತ್ತದೆ. ಈ ಪಂದ್ಯ ಮಿನಿ ಫೈನಲ್ ಪಂದ್ಯವಾಗಿದ್ದು, ಪಂದ್ಯವನ್ನು ಟಿವಿಗಳಲ್ಲಿ ವೀಕ್ಷಿಸುವ ಅಭಿಮಾನಿಗಳಿಗೆ ನಿರಾಸೆ ಆಗುವುದಿಲ್ಲ ಎಂದಿದ್ದಾರೆ.

ಆಗಸ್ಟ್‌ನಲ್ಲಿ ಆಸ್ಕರ್ ತನಿಖೆ ಅಂತ್ಯ
ಜೋಹಾನ್ಸ್‌ಬರ್ಗ್:
ತನ್ನ ಗೆಳತಿಯನ್ನೋ ಹತ್ಯೆ ಮಾಡಿದ ಆರೋಪದಡಿ ಬಂಧಿಸಲಾಗಿರುವ ಆಸ್ಕರ್ ಪಿಸ್ಟೋರಿಯಸ್ ಅವರ ತನಿಖೆಯು ಆಗಸ್ಟ್‌ವರೆಗೂ ಮುಗಿಯುವುದಿಲ್ಲ ಎಂದು ಪ್ರಾಸಿಕ್ಯೂಟರ್ ತಿಳಿಸಿದ್ದಾರೆ. ಪಿಸ್ಟೋರಿಯಸ್ ಜೂನ್ 4 ರಂದು ನ್ಯಾಯಾಲಯಕ್ಕೆ ಹಾಜರಾಗಲಿದ್ದು, ಮತ್ತಷ್ಟು ದಾಖಲೆ ಸಂಗ್ರಹಿಸುವ ದೃಷ್ಠಿಯಿಂದ ವಿಚಾರಣೆ ಮುಂದೂಡುವ ಸಾಧ್ಯತೆಗಳಿವೆ ಎಂದು ದಕ್ಷಿಣ ಆಫ್ರಿಕಾದ ರಾಷ್ಟ್ರೀಯ ಪ್ರಾಸಿಕ್ಯೂಟಿಂಗ್ ಪ್ರಾಧಿಕಾರ ಸಹ ತಿಳಿಸಿದೆ.

ಅಕ್ಟೋಬರ್‌ನಲ್ಲಿ ಆಸೀಸ್ ಭಾರತಕ್ಕೆ
ನವದೆಹಲಿ:
ಆಸ್ಟ್ರೇಲಿಯಾ ಕ್ರಿಕೆಟ್ ತಂಡವು ಅಕ್ಟೋಬರ್ ಹಾಗೂ ನವೆಂಬರ್‌ನಲ್ಲಿ ಭಾರತ ಪ್ರವಾಸವನ್ನು ಕೊಗೊಳ್ಳಲಿದ್ದು, ಈ ಪ್ರವಾಸದಲ್ಲಿ ಆಸೀಸ್ ತಂಡ 7 ಏಕದಿನ ಹಾಗೂ 1ಟಿ20 ಪಂದ್ಯವನ್ನಾಡಲಿದೆ ಎಂದು ಬಿಸಿಸಿಐ ಭಾನುವಾರ ಸ್ಪಷ್ಟಪಡಿಸಿದೆ. ಆಸೀಸ್ ಪ್ರವಾಸದ ದಿನಾಂಕಗಳು ಇನ್ನು ನಿಗದಿಯಾಗಿಲ್ಲ. ಆಸೀಸ್ ತಂಡ ಏಕದಿನ ಪಂದ್ಯಗಳನ್ನು ಬೆಂಗಳೂರು, ಪುಣೆ, ಮೊಹಾಲಿ, ನಾಗಪುರ, ಜೈಪುರ, ಕಾಂಚಿ ಹಾಗೂ ಕಟಕ್‌ನಲ್ಲಿ ಆಡಲಿದ್ದು, ಟಿ20 ಪಂದ್ಯ ರಾಜ್‌ಕೋಟ್‌ನಲ್ಲಿ ನಡೆಯಲಿದೆ.

ಸಿಸಿಟಿವಿಯಲ್ಲಿ ಸಿಕ್ಕಿ ಬಿದ್ದ ಶ್ರೀಶಾಂತ್
ನವದೆಹಲಿ:
ಸ್ಪಾಟ್ ಫಿಕ್ಸಿಂಗ್ ಪ್ರಕರಣದಲ್ಲಿ ಭಾಗಿಯಾಗಿರುವ ಹಿನ್ನೆಲೆಯಲ್ಲಿ ದೆಹಲಿ ಪೊಲೀಸರಿಂದ ಬಂಧನಕ್ಕೊಳಗಾಗಿರುವ ರಾಜಸ್ಥಾನ ರಾಯಲ್ಸ್ ತಂಡದ ಆಟಗಾರರು, ಶ್ರೀಶಾಂತ್ ಸೇರಿದಂತೆ ಮೂವರು ಆಟಗಾರರು ಬುಕ್ಕಿ ಜೀಜು ಜನಾರ್ಧನ್ ಜತೆಗಿರುವ ಸಿಸಿಟಿವಿ ದೃಶ್ಯಗಳು ಪೊಲೀಸರಿಗೆ ದೊರೆತಿದೆ. ಚಂಢೀಗಡದಲ್ಲಿರುವ ಹೋಟೆಲ್‌ನಲ್ಲಿ ಶ್ರೀಶಾಂತ್ ಜತೆಗೆ ಇನ್ನಿಬ್ಬರು ಆಟಗಾರರಾದ ಅಜಿತ್ ಚಾಂಡಿಲಾ ಹಾಗೂ ಅಂಕಿತ್ ಚೌವಾಣ್ ಬುಕ್‌ಕಿ ಜಿಜು ಜನಾರ್ಧನ್ ಅವರನ್‌ನು ಭೇಟಿ ಮಾಡಿರುವುದು ಹೊಟೆಲ್ ಸಿಸಿಟಿವಿಯಿಂದ ಖಚಿತವಾಗಿದೆ. ಈ ದೃಶ್ಯಗಳಲ್ಲಿ ಜಿಜು ಬೆಳಗಿನ ಜಾವ 5.30ರವರೆಗೆ ಸುತ್ತಾಡಿದ್ದು, ಈತನ ಜತೆಯಲ್ಲಿ ಇಬ್ಬರು ಹುಡುಗಿಯರು ಕಾಣಿಸಿಕೊಂಡಿದ್ದಾರೆ.

ಮಾಹಿತಿ ನೀಡಿದ್ದ ಗುರುನಾಥ್
ಮುಂಬೈ:
ಬೆಟ್ಟಿಂಗ್ ಪ್ರಕರಣದಲ್ಲಿ ಭಾಗಿಯಾಗಿರುವ ಹಿನ್ನೆಲೆಯಲ್ಲಿ ಶುಕ್ರವಾರ ಗುರುನಾಥ ಮೇಯಪ್ಪನ್ ಅವರನ್ನು ಬಂಧಿಸಿರುವ ಮುಂಬೈ ಪೊಲೀಸರು, ಮೇಯಪ್ಪನ್ ಈ ಆವೃತ್ತಿಯಲ್ಲಿ ಸಿಎಸ್‌ಕೆ ತಂಡದ ಕೆಲ ಮಾಹಿತಿಗಳನ್ನು ಬುಕ್ಕಿಗಳೊಂದಿಗೆ ಹಂಚಿಕೊಂಡಿದ್ದಾರೆ. ಪೊಲೀಸ್ ಮೂಲಗಳ ಪ್ರಕಾರ ಗುರುನಾಥ ಮೇಯಪ್ಪನ್, ಸಿಎಸ್‌ಕೆ ತಂಡದ ತಂತ್ರಗಳ ಬಗ್ಗೆ ಬುಕ್ಕಿಗಳೊಂದಿಗೆ ಚರ್ಚೆ ನಡೆಸುತ್ತಿದ್ದಾರೆ. ಬಾಲಿವುಡ್ ನಟ ವಿಂದೂ ದಾರಾ ಸಿಂಗ್, ಬುಕ್ಕಿಗಳು ಹಾಗೂ ಮೇಯಪ್ಪನ್ ನಡುವೆ ಸಂಪರ್ಕವಾಗಿ ಕೆಲಸ ಮಾಡುತ್ತಿದ್ದ ಎಂದು ತಿಳಿಸಿದೆ.

ಆಗಸ್ಟ್ ವೇಳೆಗೆ ಹೊಸ ಕಾನೂನು
ನವದೆಹಲಿ:
ಐಪಿಎಲ್ ಸ್ಪಾಟ್ ಫಿಕ್ಸಿಂಗ್ ಪ್ರಕರಣ ಹೆಚ್ಚು ಕೋಲಾಹಲ ಸೃಷ್ಠಿಸಿರುವ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಸ್ಪಾಟ್ ಫಿಕ್ಸಿಂಗ್ ತಡೆಗಟ್ಟಲು ಹೊಸ ಕಾನೂನನ್ನು ರೂಪಿಸಲು ಪ್ರಯತ್ನ ನಡೆಯುತ್ತಿದ್ದು, ಈ ಕಾನೂನನ್ನು ಜುಲೈ ಅಥವಾ ಆಗಸ್ಟ್ ವೇಳೆಗೆ ಸಿದ್ಧಗೊಳಿಸುವುದಾಗಿ ಕೇಂದ್ರ ಕಾನೂನು ಸಚಿವ ಕಪಿಲ್ ಸಿಬಲ್ ತಿಳಿಸಿದ್ದಾರೆ.
ಸರ್ಕಾರ, ಎಲ್ಲಾ ರಾಜಕೀಯ ಪಕ್ಷಗಳನ್ನು ಹಾಗೂ ಸ್ಟಾಕ್ ಹೋಲ್ಡರ್‌ಗಳನ್ನು ಸಂಪರ್ಕಿಸಿ ಈ ಕಾನೂನು ಸಂಸತ್ತಿನಲ್ಲಿ ಸುಗಮವಾಗಿ ಅನುಮೋದನೆ ಪಡೆಯುವ ಭರವಸೆಯನ್ನು ಸಿಬಲ್ ನೀಡಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement