ಇಂದು ಯೂರೋಪ್‌ಗೆ ಭಾರತೀಯ ಹಾಕಿ ತಂಡ
ನವದೆಹಲಿ: ಮುಂಬರುವ ವಿಶ್ವಕಪ್‌ನಲ್ಲಿ ಪ್ರಾಬಲ್ಯಯುತ ಪ್ರದರ್ಶನ ನೀಡಲು ಸಿದ್ಧತೆ ನಡೆಸುತ್ತಿರುವ ಭಾರತ ಹಾಕಿ ತಂಡ ಅಭ್ಯಾಸ ಪಂದ್ಯಗಳನ್ನಾಡುವ ಸಲುವಾಗಿ ಇಂದು ಯೂರೋಪ್ ಪ್ರವಾಸ ಕೈಗೊಳ್ಳುತ್ತಿದೆ.
ಬುಧವಾರ ಯೂರೋಪ್‌ಗೆ ತೆರಳಲಿರುವ ಭಾರತ ತಂಡ, ಅಲ್ಲಿ ವಿಶ್ವಕಪ್ ಆತಿಥ್ಯ ವಹಿಸಲಿರುವ ನೆದರ್‌ಲ್ಯಾಂಡ್ಸ್ ವಿರುದ್ಧ ಎರಡು ಪಂದ್ಯ ಸೇರಿದಂತೆ ಒಟ್ಟು 5 ಅಭ್ಯಾಸ ಪಂದ್ಯಗಳನ್ನು ಆಡಲಿದೆ. ಡಚ್ ರಾಷ್ಟ್ರೀಯ ಕ್ಲಬ್ ವಿರುದ್ಧ 2 ಹಾಗೂ ಬೆಲ್ಜಿಯಂ ವಿರುದ್ಧ 1 ಪಂದ್ಯಗಳನ್ನಾಡಲಿದೆ. ಭಾರತ ತಂಡದ ಈ ಪ್ರವಾಸ ಏ.19ರಂದು ಅಂತ್ಯಗೊಳ್ಳಲಿದೆ.
ವಿಶ್ವಕಪ್ ಪಂದ್ಯಾವಳಿ ನೆದರ್‌ಲ್ಯಾಂಡ್ಸ್‌ನ ಹಗೆಯಲ್ಲಿ ಮೇ 31ರಿಂದ ಜೂನ್ 15ರವರೆಗೆ ನಡೆಯಲಿದೆ.
ತಂಡದ ತಯಾರಿ ಬಗ್ಗೆ ಮಾತನಾಡಿರುವ ಕೋಚ್ ಟೆರ್ರಿ ವಾಲ್ಷ್, ಭಾರತ ತಂಡ ಮುಂಬರುವ ವಿಶ್ವಕಪ್ ಪಂದ್ಯಾವಳಿಯನ್ನು ನೆದರ್‌ಲ್ಯಾಂಡ್ಸ್‌ನಲ್ಲಿ ಆಡುತ್ತಿದ್ದು, ಈ ಪ್ರವಾಸದಿಂದ ಭಾರತದ ಆಟಗಾರರು, ಸಿಬ್ಬಂದಿ ಇಲ್ಲಿನ ವಾತಾವರಣ, ಪರಿಸ್ಥಿತಿಗಳಿಗೆ ಹೊಂದಿಕೊಳ್ಳಲು ಅನುಕೂಲವಾಗಲಿದೆ ಎಂದರು.
ನಮ್ಮ ತಂಡ ಕೆಲವು ಪ್ರಮುಖ ಅಂಶಗಳ ಮೇಲೆ ಹೆಚ್ಚಿನ ಗಮನ ಹರಿಸುತ್ತಿದೆ. ಕಳೆದ ಒಂದು ತಿಂಗಳಿನಿಂದ ತಂಡದ ಆಟಗಾರರು ಅಭ್ಯಾಸ ಶಿಬಿರದಲ್ಲಿ ಭಾಗವಹಿಸಿದ್ದು, ವಿಶ್ವಕಪ್‌ನ ಅಂತಿಮ ತಯಾರಿ ಹಂತದಲ್ಲಿ ತಂಡ ಲಯ ಕಂಡುಕೊಳ್ಳುವ ನಿರೀಕ್ಷೆ ಇದೆ ಎಂದು ತಿಳಿಸಿದ್ದಾರೆ.
ಭಾರತ ತಂಡ
ಗೋಲ್‌ಕೀಪರ್: ಪಿ.ಆರ್ ಶ್ರೀಜೇಶ್, ಹರ್ಜೋತ್ ಸಿಂಗ್
ಡಿಫೆಂಡರ್: ಬಿರೇಂದ್ರ ಲಕ್ರಾ, ರೂಪಿಂದರ್ ಪಾಲ್ ಸಿಂಗ್(ಉಪನಾಯಕ), ವಿ.ಆರ್ ರಘುನಾಥ್, ಕೊಥಾಜಿತ್ ಸಿಂಗ್, ಗುರೀಂದರ್ ಸಿಂಗ್, ಗುರ್ಬಜ್ ಸಿಂಗ್
ಮಿಡ್‌ಫೀಲ್ಡರ್: ಸರ್ದಾರ್ ಸಿಂಗ್(ನಾಯಕ), ಎಸ್.ಕೆ ಉತ್ತಪ್ಪ, ಧರಮ್‌ವೀರ್ ಸಿಂಗ್, ಮನ್‌ಪ್ರೀತ್ ಸಿಂಗ್, ಚಿಂಗ್ಲೆನ್‌ಸಾನಾ ಸಿಂಗ್ ಕಂಗುಜಮ್, ದನಿಶ್ ಮುಜ್ತಾಬಾ, ದೇವಿಂದರ್ ವಾಲ್ಮಿಕಿ
ಫಾರ್ವರ್ಡ್ಸ್: ಎಸ್.ವಿ ಸುನಿಲ್, ನಿಕ್ಕಿನ್ ತಿಮ್ಮಯ್ಯ, ಆಕಾಶ್‌ದೀಪ್ ಸಿಂಗ್, ರಮಣ್‌ದೀಪ್ ಸಿಂಗ್, ಯುವರಾಜ್ ವಾಲ್ಮಿಕಿ, ಲಲಿತ್ ಉಪಾಧ್ಯಾಯ್.