ಕೇರಳಕ್ಕೆ ಮಣಿದ ದೆಹಲಿ
ಮುಂಬೈ: ಸಾಂಘಿಕ ಪ್ರದರ್ಶನ ನೀಡಿದ ಕೇರಳ ಆಟಗಾರರು ಸೈಯದ್ ಮುಷ್ತಾಕ್ ಅಲಿ ಟ್ರೋಫಿ ಟಿ-20 ಕ್ರಿಕೆಟ್ ಟೂರ್ನಿಯ ಪಂದ್ಯದಲ್ಲಿ ದೆಹಲಿ ವಿರುದ್ಧ 14 ರನ್‌ಗಳ ರೋಚಕ ಗೆಲವು ದಾಖಲಿಸಿದ್ದಾರೆ.
ವಾಂಖೆಡೆ ಕ್ರೀಡಾಂಗಣದಲ್ಲಿ ಮಂಗಳವಾರ ನಡೆದ 'ಬಿ' ಗುಂಪಿನ ಪಂದ್ಯದಲ್ಲಿ ಟಾಸ್ ಸೋತರೂ ಮೊದಲು ಬ್ಯಾಟ್ ಮಾಡಿದ ಕೇರಳ 6 ವಿಕೆಟ್ ನಷ್ಟಕ್ಕೆ 150 ರನ್‌ಗಳ ಸ್ಪರ್ಧಾತ್ಮಕ ಮೊತ್ತ ಗಳಿಸಿತು.
ಆರಂಭಿಕ ಆಟಗಾರ ವಾಸುದೇವನ್ ಜಗದೀಶ್ (52ರನ್, 36 ಎಸೆತ, 9 ಬೌಂಡರಿ) ಅರ್ಧಶತಕ ಗಳಿಸಿದರು.
ಉತ್ತರವಾಗಿ ದೆಹಲಿ ತಂಡಕ್ಕೆ 9 ವಿಕೆಟ್ ನಷ್ಟಕ್ಕೆ 136 ರನ್‌ಗಳಿಸಲಷ್ಟೇ ಸಾಧ್ಯವಾಯಿತು. ದೆಹಲಿಯ ಬ್ಯಾಟ್ಸ್‌ಮನ್‌ಗಳೆಲ್ಲ ಸಂಪೂರ್ಣ ವಿಫಲರಾದರು.
ಬರೋಡಾ ಜಯಭೇರಿ: ಬಾಂದ್ರಾ ಕುರ್ಲಾ ಸಂಕೀರ್ಣದಲ್ಲಿ ಇಂದೇ ನಡೆದ 'ಬಿ' ಗುಂಪಿನ ಮತ್ತೊಂದು ಪಂದ್ಯದಲ್ಲಿ ಬರೋಡಾ 7 ವಿಕೆಟ್‌ಗಳಿಂದ ಬಂಗಾಳ ವಿರುದ್ಧ ಜಯ ಸಂಪಾದಿಸಿತು.
ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಬಂಗಾಳ 20 ಓವರುಗಳಲ್ಲಿ ಕೇವಲ 96 ರನ್‌ಗಳಿಗೆ ಆಲೌಟಾಯಿತು. ಕೆಳಕ್ರಮಾಂಕದ ಆಟಗಾರ ಸಂಜೀಬ್ ಸಾನ್ಯಾಲ್ 13 ರನ್‌ಗಳಿಸಿದ್ದೇ ತಂಡದ ಪರ ವೈಯಕ್ತಿಕ ಗರಿಷ್ಠ ಮೊತ್ತವಾಯಿತು.
ಬರೋಡಾ ಪರ ಶಿಸ್ತಿನ ದಾಳಿ ಸಂಘಟಿಸಿದ ಎಲ್. ಮೆರಿವಾಲಾ ಮತ್ತು ಕರಂಬೆಲ್ಕರ್ ತಲಾ 3 ಹಾಗೂ ಪಾಂಡ್ಯಾ 2 ವಿಕೆಟ್ ಉರುಳಿಸಿದರು.
ಅಲ್ಪ ಮೊತ್ತದ ಗುರಿ ಬೆಂಬತ್ತಿದ ಬರೋಡಾ 14 ಓವರುಗಳಲ್ಲಿ 3 ವಿಕೆಟ್ ನಷ್ಟಕ್ಕೆ 97 ರನ್‌ಗಳಿಸಿ ಸುಲಭ ಗೆಲವು ಪಡೆಯಿತು.
ಆರಂಭಿಕ ಆದಿತ್ಯ ವಾಘ್ಮೋಡೆ 27 ಮತ್ತು ಮಧ್ಯಮ ಕ್ರಮಾಂಕದಲ್ಲಿ ದೀಪಕ್ ಹೂಡಾ ಅಜೇಯ 24 ರನ್‌ಗಳಿಸಿ ತಂಡಕ್ಕೆ ನಿರೀಕ್ಷಿತ ಗೆಲವು ತಂದುಕೊಟ್ಟರು.
ಸಂಕ್ಷಿಪ್ತ ಸ್ಕೋರ್:
ಕೇರಳ 20 ಓವರುಗಳಲ್ಲಿ 6 ವಿಕೆಟ್‌ಗೆ 150 (ವಾಸುದೇವನ್ ಜಗದೀಶ್ 52, ಕೆ. ರಾಕೇಶ್ 36, ಸಚಿನ್ ಬೇಬಿ 28, ಜಾವೇದ್ ಖಾನ್ 22ಕ್ಕೆ2, ವರುಣ್ ಸೂದ್ 29ಕ್ಕೆ2, ಯೋಗೇಶ್ ನಗರ್ 29ಕ್ಕೆ2). ದೆಹಲಿ 20 ಓವರುಗಳಲ್ಲಿ 9 ವಿಕೆಟ್‌ಗೆ 136 (ಜಗ್ರಿತ್ ಆನಂದ್ 28, ವರುಣ್ ಸೂದ್ 22, ಕೆ. ರಾಕೇಶ್ 34ಕ್ಕೆ3, ವಿನೋದ್‌ಕುಮಾರ್ 17ಕ್ಕೆ2, ಪಿ. ಪ್ರಶಾಂತ್ 23ಕ್ಕೆ2).
ಬಂಗಾಳ 20 ಓವರುಗಳಲ್ಲಿ 96 (ಸಂಜೀಬ್ ಸಾನ್ಯಾಲ್ 13, ಎಲ್. ಮೆರಿವಾಲಾ 19ಕ್ಕೆ3, ಕರಂಬೆಲ್ಕರ್ 22ಕ್ಕೆ3, ಪಾಂಡ್ಯಾ 10ಕ್ಕೆ2). ಬರೋಡಾ 14 ಓವರುಗಳಲ್ಲಿ 3 ವಿಕೆಟ್‌ಗೆ 97 (ಆದಿತ್ಯ ವಾಘ್ಮೋಡೆ 27, ದೀಪಕ್ ಹೂಡಾ ಅಜೇಯ 24, ಅಮೀರ್ ಗನಿ 28ಕ್ಕೆ2).