ಟೆನಿಸ್: ಒಎನ್‌ಜಿಸಿ, ಜಿಎಐಎಲ್ ಫೈನಲ್‌ಗೆ
ಬೆಂಗಳೂರು: ಹಾಲಿ ಚಾಂಪಿಯನ್ ಒಎನ್‌ಜಿಸಿ ತಂಡ ಪಿಎಸ್‌ಪಿಬಿ ಅಂತರ್ ಘಟಕ ಟೆನಿಸ್ ಚಾಂಪಿಯನ್‌ಶಿಪ್‌ನ ಫೈನಲ್ ಪಂದ್ಯದಲ್ಲಿ ಆತಿಥೇಯ ಜಿಎಐಎಲ್ ಅನ್ನು ಎದುರಿಸಲಿದೆ.
ಸ್ಟಾರ್ ಆಟಗಾರರನ್ನು ಹೊಂದಿರುವ ಉಭಯ ತಂಡಗಳು ತಂಡ ವಿಭಾಗದಲ್ಲಿ ಸೆಮಿಫೈನಲ್‌ನಲ್ಲಿ ಜಯ ಸಾಧಿಸುವಲ್ಲಿ ಯಶಸ್ವಿಯಾಗಿವೆ.
ಸೆಮಿಫೈನಲ್ ಪಂದ್ಯದಲ್ಲಿ ಜಿಎಐಎಲ್ ತಂಡ ಐಒಸಿಎಲ್ ತಂಡವನ್ನು 2-0 ಅಂತರದಿಂದ ಪರಾಭವಗೊಳಿಸಿತು. ಸಿಂಗಲ್ಸ್ ವಿಭಾಗದಲ್ಲಿ ಸಾಕೆತ್ ಮೈನೆನಿ ಅವರು ರೋಹನ್ ಬೋಪಣ್ಣ ಅವರನ್ನು 7-6(4), 6-4 ನೇರ ಸೆಟ್‌ಗಳಿಂದ ಸೋಲಿಸಿದರು. ಇನ್ನು ಎರಡನೇ ಪಂದ್ಯದಲ್ಲಿ ತಮಿಳುನಾಡಿನ ಯುವ ಆಟಗಾರ ಆರ್. ರಾಮ್‌ಕುಮಾರ್ ಅವರು ವಾಸುದೇವ್ ರೆಡ್ಡಿ ಅವರನ್ನು 6-2, 6-1 ನೇರ ಸೆಟ್‌ಗಳಿಂದ ಸೋಲಿಸಿದರು.
ಇನ್ನೂ ಇನ್ನೊಂದು ಸೆಮಿಫೈನಲ್ ಪಂದ್ಯದಲ್ಲಿ ಒಎನ್‌ಜಿಸಿ ತಂಡ ಐಒಎಲ್ ವಿರುದ್ಧ 2-0 ಅಂತರದಿಂದ ಜಯ ಕಂಡಿತು. ಮೊದಲ ಪಂದ್ಯದಲ್ಲಿ ಒಎನ್‌ಜಿಸಿಯ ವಿಷ್ಣುವರ್ಧನ್ ಅವರು ಐಒಎಲ್‌ನ ಅನ್ಷುಮಾನ್‌ದತ್ತಾ ಅವರನ್ನು 6-1, 6-2 ಸೆಟ್‌ಗಳಿಂದ ಸೋಲಿಸಿದರು. ನಂತರ ಎರಡನೇ ಪಂದ್ಯದಲ್ಲಿ ರಾಷ್ಟ್ರೀಯ ಮಾಜಿ ಚಾಂಪಿಯನ್ ವಿ.ಎಂ ರಂಜೀತ್ ಅವರು ಸಿ.ಎಸ್ ಮೋಹಂತಿ ವಿರುದ್ಧ 6-1, 6-1 ಅಂತರದಿಂದ ಸುಲಭವಾಗಿ ಜಯ ಕಾಣುವುದರೊಂದಿಗೆ ಒಎನ್‌ಜಿಸಿ ಫೈನಲ್‌ಗೆ ಲಗ್ಗೆ ಹಾಕಿತು.