ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕ್ರೀಡೆ

ಹಾಕಿ ಹೊಸ ನಿಯಮ ಕಷ್ಟ ಕಷ್ಟ..!

ಮನರಂಜನೆಗಾಗಿ ಇರುವ ಕ್ರೀಡೆಯಲ್ಲಿನ ನಿಯಮಗಳನ್ನೇ ಸ್ಪರ್ಧಾತ್ಮಕ ಕ್ರೀಡೆಗಳಲ್ಲಿ ಜಾರಿಗೆ ತಂದರೆ, ಅದು..

Srinivasa Murthy VN
Updated On : 9 Apr 2014, 2:53 am
-ಮಲ್ಲಿಕಾರ್ಜುನ ಕರಿಯಪ್ಪನವರ
ಇಂಡಿಯನ್ ಪ್ರೀಮಿಯರ್ ಲೀಗ್, ಇಂಡಿಯನ್ ಬ್ಯಾಡ್ಮಿಂಟನ್ ಲೀಗ್, ಇಂಡಿಯನ್ ಹಾಕಿ ಲೀಗ್ ಇವು ಮನರಂಜನೆಗಾಗಿ ಆಡುವ ಪಂದ್ಯಾವಳಿಗಳು. ಅಭಿಮಾನಿಗಳನ್ನು ರಂಜಿಸಲು ಇಲ್ಲಿ ಕೆಲ ನಿಯಮಗಳನ್ನು ಸೇರಿಸಿಕೊಳ್ಳಬಹುದು. ಕೆಲ ನಿಯಮಗಳನ್ನು ಕೈಬಿಡಬಹುದು. ಮನರಂಜನೆಗಾಗಿ ಇರುವ ಕ್ರೀಡೆಯಲ್ಲಿನ ನಿಯಮಗಳನ್ನೇ ಸ್ಪರ್ಧಾತ್ಮಕ ಕ್ರೀಡೆಗಳಲ್ಲಿ ಜಾರಿಗೆ ತಂದರೆ, ಅದು ಮೇಲ್ನೋಟಕ್ಕೆ ಕೆಲ ಬಾರಿ ವರವಾಗಿ ಪರಿಣಮಿಸಬಹುದು. ಕೆಲ ಬಾರಿ ದುಷ್ಪರಿಣಾಮವನ್ನೂ ಉಂಟುಮಾಡಬಹುದು.
ಈಗ ವಿಶ್ವ ಹಾಕಿ ಫೆಡರೇಷನ್ ಜಾರಿಗೆ ತಂದಿರುವ ನಿಯಮಗಳು ಹೆಚ್ಚೂಕಡಿಮೆ ಇದೇ ರೀತಿಯಾಗಿವೆ. 70 ನಿಮಿಷಗಳ ಕಾಲ ಇರುವ ಹಾಕಿ ಪಂದ್ಯವೊಂದನ್ನು ಕೇವಲ 60 ನಿಮಿಷಗಳಿಗೆ ಇಳಿಸಿದ್ದಲ್ಲದೆ, ಅದನ್ನು ನಾಲ್ಕು ಕ್ವಾರ್ಟರ್‌ಗಳಾಗಿ ವಿಭಾಗಿಸಲಾಗಿದೆ. ಇದು ಪಂದ್ಯವೊಂದರಲ್ಲಿ ಆಟಗಾರರು ನೀಡುವ ಸ್ಥಿರ ಪ್ರದರ್ಶನದ ಮೇಲೆ ವ್ಯಾಪಕ ಪರಿಣಾಮ ಬೀರಲಿದೆ ಎಂಬುದು ಹೆಚ್ಚಿನವರ ಅಭಿಪ್ರಾಯವಾಗಿದೆ.

Advertisement

Advertisement

ಫಲಿತಾಂಶದ ಮೇಲೆ ಪರಿಣಾಮ: ಪಂದ್ಯವನ್ನು 70 ನಿಮಿಷಗಳಿಂದ 60 ನಿಮಿಷಗಳಿಗೆ ಕಡಿಮೆಗೊಳಿಸಿರುವುದನ್ನು ಕೆಲವರು ಒಪ್ಪಿಕೊಳ್ಳುತ್ತಾರೆ. ಆದರೆ, ಅದನ್ನು ನಾಲ್ಕು ಕ್ವಾರ್ಟರ್‌ಗಳಾಗಿ ವಿಭಾಗಿಸಿರುವ ನಿಯಮ ಮಾತ್ರ ನೈಜ ಪಂದ್ಯಾವಳಿಗೆ ವಿರುದ್ಧವಾಗಿದೆ ಎಂದಿದ್ದಾರೆ. ಕಾರಣ ನಾಲ್ಕು ಕ್ವಾರ್ಟರ್‌ಗಳಲ್ಲಿ ಆಟಗಾರರು ನಾಲ್ಕು ಬಾರಿ ವಿಶ್ರಾಂತಿ ಪಡೆಯಲಿದ್ದಾರೆ. ಪಂದ್ಯದ ಮೊದಲ 15 ನಿಮಿಷಗಳಲ್ಲಿ ಆಟಗಾರರು ಒಂದು ಹಂತಕ್ಕೆ ಮೈದಾನಕ್ಕೆ ಹೊಂದಿಕೊಂಡು ಆಡುತ್ತಿರುತ್ತಾರೆ. ಆದರೆ, ದಿಢೀರನೆ 15 ನಿಮಿಷಗಳ ನಂತರ ಆಟವನ್ನು ನಿಲ್ಲಿಸಿದಾಗ, ಆಟಗಾರರಲ್ಲಿದ್ದ ಹುರುಪು ಕುಂದಿಬಿಡುತ್ತದೆ. ಅಲ್ಲದೆ, ಮತ್ತೆ ಆ ಹುರುಪನ್ನು ಮೈಗೂಡಿಸಿಕೊಂಡು, ಆಟಗಾರರು ಎದುರಾಳಿಗಳ ಮೇಲೆ ನಿಯಂತ್ರಣ ಸಾಧಿಸಲು ಹೆಚ್ಚಿನ ಸಮಯ ಬೇಕಾಗುತ್ತದೆ. ಅಷ್ಟರಲ್ಲೇ ಮತ್ತೊಂದು ವಿಶ್ರಾಂತಿ ಸಮಯ ಬಂದುಬಿಡುತ್ತದೆ. ಹೀಗಾಗಿ ನಾಲ್ಕು ಕ್ವಾರ್ಟರ್ ನಿಯಮ ಸ್ಪರ್ಧಾತ್ಮಕ ಹಾಕಿಗೆ ಹೊಂದಿಕೊಳ್ಳಲಾರದು. ಅದು ಮನರಂಜನೆಗಾಗಿ ನಡೆಯುವ ಹಾಕಿ ಇಂಡಿಯಾ ಲೀಗ್‌ಗೆ ಮಾತ್ರ ಸರಿ ಎನ್ನುವ ಅಭಿಪ್ರಾಯಗಳು ಕೇಳಿಬರುತ್ತಿವೆ.
ನಾಲ್ಕು ಕ್ವಾರ್ಟರ್ ಎಲ್ಲೆಲ್ಲಿದೆ: ಯೂರೋ ಹಾಕಿ ಲೀಗ್ ಮತ್ತು ಇಂಡಿಯನ್ ಹಾಕಿ ಲೀಗ್‌ನಲ್ಲಿ ಈ ಮಾದರಿ ಆಟ ಜಾರಿಯಲ್ಲಿದೆ. ಅದನ್ನೇ ಆಧಾರವಾಗಿಟ್ಟುಕೊಂಡು, ಸ್ಪರ್ಧಾತ್ಮಕ ಹಾಕಿಯಲ್ಲೂ ಅದೇ ನಿಯಮವನ್ನು ಜಾರಿಗೆ ತರಲಾಗಿದೆ.
ಯಶಸ್ವಿಯಾಗದ ಓನ್ ಗೋಲ್: ಈ ಹಿಂದೆ ವಿಶ್ವ ಹಾಕಿ ಫೆಡರೇಷನ್ ಓನ್ ಗೋಲು ಪದ್ಧತಿ ಜಾರಿಗೆ ತಂದಿತ್ತು. ಎದುರಾಳಿ ತಂಡ ಆಕ್ರಮಣ ಮಾಡುತ್ತಾ ಬಂದಾಗ, ರಕ್ಷಣೆ ಮಾಡಿಕೊಳ್ಳಬೇಕಾದ ತಂಡ ತನ್ನ ಭಾಗದ 'ಡಿ' ಪ್ರದೇಶದಿಂದ ಆಕಸ್ಮಾತ್ ಗೋಲು ದಾಖಲಿಸಿದರೆ, ಅದನ್ನು ಓನ್ ಗೋಲು ಎಂದು ಪರಿಗಣಿಸಲಾಗುತ್ತಿತ್ತು. ಅದು ಯಶಸ್ವಿಯಾಗದ ಕಾರಣ ಅದನ್ನು ರದ್ದುಪಡಿಸಲಾಯಿತು. 
'ನಾಲ್ಕು ಕ್ವಾರ್ಟರ್‌ಗಳಲ್ಲಿ ವಿಶ್ರಾಂತಿ ಪಡೆದುಕೊಂಡು ಆಡುವುದು ಆಟಗಾರರಿಗೆ ಆರಂಭದಲ್ಲಿ ತೊಂದರೆ ಆಗುತ್ತದೆ. ಆದರೆ, ನಾವು ಇದನ್ನು ಅಭ್ಯಾಸ ಮಾಡುವಾಗಲೇ ರೂಢಿಸಿಕೊಂಡರೆ, ಪಂದ್ಯದಲ್ಲಿ ಸುಲಭವಾಗಿ ಪರಿಣಮಿಸುವ ನಿರೀಕ್ಷೆಗಳಿವೆ'
-ಎ.ಇ ಬ್ರೆಂಟ್
ರಾಷ್ಟ್ರೀಯ ಮಾಜಿ ಕೋಚ್
'ಯಾವುದೇ ಹೊಸ ನಿಯಮ ಜಾರಿಗೆ ತಂದಾಗ ಗೊಂದಲ ಕಂಡುಬರುವುದು ಸಾಮಾನ್ಯ. ಆದರೆ, ನಿಯಮವನ್ನು ಜಾರಿಗೆ ತಂದ ನಂತರ ಕೆಲ ಪಂದ್ಯಗಳು ನಡೆದಾಗ, ನಿಜವಾದ ಪರಿಣಾಮ ಕಂಡುಬರಲಿದೆ'
-ಸಂಜು ಸೋಮಯ್ಯ
ರಾಷ್ಟ್ರೀಯ ಹಾಕಿ ಅಂಪೈರ್

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement