ಏ.12ರಿಂದ ಕಿರಿಯ ರಾಷ್ಟೀಯ ಟೆನಿಸ್
ಬೆಂಗಳೂರು: ಕರ್ನಾಟಕ ಟೆನಿಸ್ ಆಟಗಾರರ ಪೆರೇಂಟ್ಸ್ ಸಂಸ್ಥೆ (ಕೆಟಿಪಿಪಿಎ) 12 ವರ್ಷದೊಳಗಿನ ಬಾಲಕ ಮತ್ತು ಬಾಲಕಿಯರಿಗೆ ಎಐಟಿಎ ರಾಷ್ಟ್ರೀಯ ಟೆನಿಸ್ ಸರಣಿಯನ್ನು ಆಯೋಜಿಸಿದೆ.
ಏಪ್ರಿಲ್ 12 ಮತ್ತು 13ರಂದು ಅರ್ಹತಾ ಸುತ್ತಿನ ಪಂದ್ಯಗಳು ನಡೆಯಲಿದ್ದು, ಏಪ್ರಿಲ್ 14ರಿಂದ ಪ್ರಮುಖ ಸುತ್ತಿನ ಪಂದ್ಯಗಳು ನಡೆಯಲಿವೆ. ಭಾಗವಹಿಸಲು ಇಚ್ಛಿಸುವವರು ಹೆಚ್ಚಿನ ವಿವರಗಳಿಗೆkatppa.wordpress.com ಸಂಪರ್ಕ ಮಾಡಬಹುದು.